Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಜನ ಆಕ್ರೋಶ್‌: ಕೇರಳದಲ್ಲಿ ಬಂದ್‌ ಬಿಸಿ; ಬಿಹಾರ, ತ.ನಾ. ಪ್ರತಿಭಟನೆ

jana-aಹೊಸದಿಲ್ಲಿ : ಕೇಂದ್ರ ಸರಕಾರದ ನೋಟು ಅಪನಗದೀಕರಣ ಕ್ರಮವನ್ನು ವಿರೋಧಿಸಿ ಎಡ ಪಕ್ಷಗಳು ಹಾಗೂ ಕಾಂಗ್ರೆಸ್‌ ಇಂದು ಸೋಮವಾರ ದೇಶಾದ್ಯಂತ “ಜನ ಆಕ್ರೋಶ್‌ ದಿವಸ್‌’ ಆಚರಿಸುತ್ತಿವೆ.

ಕೇರಳದಲ್ಲಿ ಬಂದ್‌ನಿಂದ ಪರಿಣಾಮ ಉಂಟಾಗಿದೆ. ಮಾಮೂಲಿಯ ಜನಜೀವನಕ್ಕೆ ಅಡಚಣೆ ಉಂಟಾಗಿದೆ. ಬಿಹಾರ ಮತ್ತು ತಮಿಳುನಾಡಿನಲ್ಲಿ ಪ್ರತಿಭಟನಾ ಮೆರವಣಿಗೆ, ಸಭೆಗಳನ್ನು ನಡೆಸಲಾಗಿದೆ.

ಪಶ್ಚಿಮ ಬಂಗಾಲದಲ್ಲಿ ಎಡ ರಂಗವು 12 ತಾಸುಗಳ ಬಂದ್‌ ನಡೆಸುತ್ತಿದೆ. ವಿಚಿತ್ರವೆಂಬಂತೆ ತೃಣಮೂಲ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರವು ಈ ಬಂದ್‌ ನಡೆಯದಂತೆ ತಾನು ನೋಡಿಕೊಳ್ಳುವುದಾಗಿ ಪಣ ತೊಟ್ಟಿದೆ.

ಪಶ್ಚಿಮ ಬಂಗಾಲ ಸರಕಾರದ ಹಣಕಾಸು ಸಚಿವಾಲಯವು ರಾಜ್ಯ ಸರಕಾರಿ ನೌಕರರಿಗೆ ಸುತ್ತೋಲೆ ಹೊರಡಿಸಿದ್ದು ಆ ಪ್ರಕಾರ ಯಾರೂ ಸೋಮವಾರ ಮತ್ತು ಮಂಗಳವಾರ ಬಂದ್‌ – ಮುಷ್ಕರದಲ್ಲಿ ಭಾಗಿಯಾಗದೆ ಕಚೇರಿಗಳಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ.

ಆದರೆ ಮನೆಯಲ್ಲಿ ಮರಣ ಸಂಭವಿಸಿದ್ದರೆ, ಹೆರಿಗೆ ರಜೆಯಲ್ಲಿರುವವರಿಗೆ, ತುರ್ತಾಗಿ ಆಸ್ಪತ್ರೆಗೆ ಸೇರಬೇಕಾದ ಸ್ಥಿತಿ ಒದಗಿರುವವರಿಗೆ ಮತ್ತು ಇತರ ಯಾವುದೇ ಸರಿಯಾದ ಕಾರಣಗಳಿಗೆ ಮಾತ್ರವೇ ಗೈರಾಗಬಹುದೆಂದು ಹೇಳಿದೆ.

ಮಹಾರಾಷ್ಟ್ರದಲ್ಲಿನ ವಿರೋಧ ಪಕ್ಷಗಳು ತಾವು ಬಂದ್‌ನಲ್ಲಿ ಪಾಲ್ಗೊಳ್ಳುವುದಿಲ್ಲ; ಆದರೆ ನೋಟು ಅಪನಗದಿಕರಣ ಕ್ರಮಕ್ಕೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿವೆ.

ಪುರಿಯಲ್ಲಿ ನ್ಯಾಶನಲ್‌ ಕಾನ್‌ಫ‌ರೆನ್ಸ್‌ನ ಸಿಐಟಿಯು ಪ್ರತಿನಿಧಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.  ಪಟ್ನಾದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಜನ ಆಕ್ರೋಶ್‌ ದಿವಸ್‌ ಪ್ರಯುಕ್ತ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

No Comments

Leave A Comment