Log In
BREAKING NEWS >
Smriti Irani says writing on the wall for Rahul Gandhi...

6 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ನಾಲ್ವರು ಅಪ್ರಾಪ್ತರ ಬಂಧನ

rape-newಪುಣೆ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ರಿಂದ 14 ವರ್ಷ ವಯಸ್ಸಿನ ನಾಲ್ವರು ಅಪ್ರಾಪ್ತರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಅಣ್ಣಾ ಸಾಹೇಬ್ ಮಗರ್ ಸ್ಲಂ ನ ನಾಲ್ವರು ಬಾಲಕರು, ಪಿಂಪ್ರಿ ಪ್ರದೇಶದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ತೆರಳಿದ ಅಪ್ರಾಪ್ತರು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರ ಎಂದು ಪಿಂಪಿರಿ ಪೊಲೀಸರು ತಿಳಿಸಿದ್ದಾರೆ.ಅತ್ಯಾಚಾರದಿಂದ ಆಘಾತಕ್ಕೊಳಗಾದ ಬಾಲಕಿ ತನ್ನ ತಾಯಿಯ ಬಳಿ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಾಳೆ.

ನಂತರ ಆಕೆಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರು ಬಾಲಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

No Comments

Leave A Comment