Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಈಜಲು ತೆರಳಿದ ನಾಲ್ವರು ಯುವಕರು ಕೃಷ್ಣಾ ನದಿ ಪಾಲು

swim-newವಿಜಯವಾಡ: ಕೃಷ್ಣಾ ನದಿಯಲ್ಲಿ ಈಜಲು ತೆರಳಿದ ನಾಲ್ವರು ಯುವಕರು ಕೊಚ್ಚಿ ಹೋಗಿರುವ ಘಟನೆ ವಿಜಯವಾಡದ ನಾಗಯಲಂಕ ಸಮೀಪದ ಇದುರುಮೊಂಡಿ ಗ್ರಾಮದಲ್ಲಿ ನಡೆದಿದೆ.

ತೆಲಂಗಾಣದ ಕಮ್ಮಮ್ ಜಿಲ್ಲೆಯಿಂದ ಒಟ್ಟು 15 ಮಂದಿ ಪಿಕ್ ನಿಕ್ ಗಾಗಿ ಬಂದಿದ್ದರು. ನದಿಯಲ್ಲಿ ಕೊಚ್ಚಿ ಹೋದ ನಾಲ್ವರು ಯುವಕರು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವೇಲ್ಪುಲ ಲಕ್ಷ್ಣಣ ರಾವ್, ರಾಮಲ ಲಕ್ಷ್ಣಣ ರಾವ್, ಗರಪತಿ ಅನಿಲ್ ಕುಮಾರ್, ಹಾಗೂ ಕೊಂಡಾಲ ರಮೇಶ್ ಮೃತ ಯುವಕರು.ಇದುರುಮಂಡಿ ಗ್ರಾಮದಲ್ಲಿರುವ ಲೈಟ್ ಹೌಸ್ ನೋಡಲು ಪಿಕ್ ನಿಕ್ ಗಾಗಿ ಬಂದಿದ್ದರು.

ಅವರು ನದಿಯಲ್ಲಿ ಇಳಿದಿದ್ದ ಜಾಗ ತುಂಬಾ ಅಪಾಯಕಾರಿಯಾಗಿತ್ತು.  ಕೃಷ್ಣಾ ನದಿ ಬಂಗಾಳ ಕೊಲ್ಲಿಯನ್ನು ಸೇರುವ ಸ್ಥಳಾವಾಗಿದೆ. ನೀರಿನ ರಭಸ ಹೆಚ್ಚಿರುವ ಈ ಜಾಗದಲ್ಲಿ ಈಜಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.15 ಮಂದಿ ಸ್ನೇಹಿತರ ತಂಡ ಮಧ್ಯಾಹ್ನದ ವೇಳೆಗೆ ಸ್ಥಳಕ್ಕಾಗಮಿಸಿದ್ದಾರೆ. ಅದರಲ್ಲಿ ನಾಲ್ವರು ಅಲೆಗಳ ಎದುರು ಈಜಲು ಸಾದ್ಯವಾಗಲಿಲ್ಲ, ವರ್ಷದ ಈ ಸಮಯದಲ್ಲಿ ಅಲೆಗಳ ಅಬ್ಬರ ಹೆಚ್ಚು ಇರುತ್ತದೆ ಎಂದು ನಾಗಯಾಲಂಕಾ ಸರ್ಕಲ್ ಇನ್ಸ್ ಪೆಕ್ಟರ್ ಹೇಳಿದ್ದಾರೆ.

ಕೊಚ್ಚಿಹೋದ ನಾಲ್ವರು ಸ್ನೇಹಿತರು ಆಳ ಹೆಚ್ಚು ಇದ್ದ ಕಡೆ ಹೋಗಿದ್ದರು. ಹೀಗಾಗಿ ಉಳಿದವರು ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ, ಕೂಡಲೇ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

  10 ಮಂದಿ ನುರಿತ ಈಜು ಪರಿಣಿತರು ಶವಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಎನ್ ಡಿಆರ್ ಎಫ್ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಶವಗಳು ಸಮುದ್ರ ಸೇರಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment