Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಆಕ್ರೋಶ ದಿವಸ: ಬಂದ್‌ ಇಲ್ಲ, ಕೇವಲ ಪ್ರತಿಭಟನೆ

akroshshaಬೆಂಗಳೂರು: ನೋಟು ರದ್ದತಿ ವಿರೋಧಿಸಿ ಪ್ರತಿಪಕ್ಷಗಳು ಸೋಮವಾರ (ನ.28) ‘ಆಕ್ರೋಶ ದಿವಸ’ಕ್ಕೆ ಕರೆ ನೀಡಿವೆ. ಆದರೆ, ಸೋಮವಾರ ಭಾರತ್‌ ಬಂದ್ ಇರುವುದಿಲ್ಲ. ಕೇವಲ ಪ್ರತಿಭಟನೆ ನಡೆಸಲು ಪ್ರತಿಪಕ್ಷಗಳು ನಿರ್ಧರಿಸಿವೆ.

ಸೋಮವಾರ ಬಸ್‌ಗಳ ಸಂಚಾರ ಎಂದಿನಂತೆ ಇರಲಿದೆ. ಮಾಲ್‌, ಸೂಪರ್‌ ಮಾರ್ಕೆಟ್‌, ಹೋಟೆಲ್‌ಗಳು ಎಂದಿನಂತೆ ತೆರೆದಿರಲಿವೆ. ಶಾಲಾ ಕಾಲೇಜುಗಳಿಗೂ ಈವರೆಗೆ ರಜೆ ಘೋಷಣೆ ಮಾಡಿಲ್ಲ.

ಸೋಮವಾರದ (ನ.28) ‘ಆಕ್ರೋಶ ದಿವಸ’ಕ್ಕೆ ಬೆಂಬಲ ನೀಡದಿರಲು ಜೆಡಿಯು ಪಕ್ಷ ನಿರ್ಧರಿಸಿದೆ.

ಚಿತ್ರೋದ್ಯಮ ಬೆಂಬಲ ಇಲ್ಲ
ಆಕ್ರೋಶ ದಿವಸಕ್ಕೆ ಕನ್ನಡ ಚಿತ್ರೋದ್ಯಮ ಬೆಂಬಲ ಸೂಚಿಸಿಲ್ಲ. ಹೀಗಾಗಿ ಸೋಮವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನವಿರಲಿದೆ. ಅಲ್ಲದೆ ಚಿತ್ರೀಕರಣವೂ ಎಂದಿನಂತೆ ನಡೆಯಲಿದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ತಿಳಿಸಿದ್ದಾರೆ.

No Comments

Leave A Comment