Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಉದ್ಘಾಟನೆ…

sgr_5715
ಉಡುಪಿ: ಭಾನುವಾರದ೦ದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಉದ್ಘಾಟನೆಯನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ನೆರವೇರಿಸಿ ಆಶೀರ್ವಚನ ನೀಡಿದರು.

ಪೇಜಾವರ ಕಿರಿಯ ಮಠಾಧೀಶಾರದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷರಾದ ಮಂಜುನಾಥ ಉಪಾಧ್ಯ ಹಾಗೂ ಗೌರವಾದ್ಯಕ್ಷರಾದ ಡಾ. ಎಚ್.ವಿ.ನರಸಿಂಹ ಮೂರ್ತಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕೆ.ಪಿ.ಸಿ.ಸಿಯ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡು ರಾವ್, ಶಿವಮೊಗ್ಗ ಶಾಸಕರಾದ ಪ್ರಸನ್ನ ಕುಮಾರ, ಮಾಜಿ ಶಾಸಕರಾದ ರಘುಪತಿ ಭಟ್, ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ವೆಂಕಟನಾರಾಯಣ ಭಾಗವಹಿಸಿದ್ದರು. ಅಖಿಲಭಾರತ ಬ್ರಾಹ್ಮಣಸಂಘಗಳ ಒಕ್ಕೂಟ ದೆಹಲಿ ಇದರ ಮಹಿಳಾ ಅಧ್ಯಕ್ಷೆ ಎನ್.ಮಾಲಿನಿ, ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ಉಪಾಧ್ಯಾಯ,ಶ್ರೀಮತಿ ಶಾ೦ತ ವಿ ಎಸ್ ಆಚಾರ್ಯ ಉಪಸ್ಥಿತರಿದ್ದರು.sgr_5734

ತಟ್ಟುವಟ್ಟು ಜ್ಯೋತಿಷ್ಯ ವಿಧ್ವಾನ್ ವಾಸುದೇವ ಜೋಯಿಸ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ರವಿಶಂಕರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಇವರು ಶುಭಾಶಂಸನೆ ನೀಡಿದರು.

udupi_utsavooo

No Comments

Leave A Comment