Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಬಡವರನ್ನು ಬಳಸಿಕೊಳ್ಳಬೇಡಿ, ಕಪ್ಪು ಕುಳಗಳಿಗೆ ಮೋದಿ ಎಚ್ಚರಿಕೆ

modi-radioಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು.

ಮುಖ್ಯವಾಗಿ ತಮ್ಮ ಭಾಷಣದುದ್ದಕ್ಕೂ ಅಪನಗದೀಕರಣದ ಕುರಿತು ಮತನಾಡಿದರು.ನೋಟು ನಿಷೇಧ ಪ್ರಕ್ರಿಯೆಯಲ್ಲಿ ಭಾರತ ಯಶಸ್ವೀಯಾಗುವ ಸಂಪೂರ್ಣ ವಿಶ್ವಾಸ ನನಗಿದೆ ಎಂದರು. ಜನರ ಸಹಕಾರಕ್ಕೆ, ಬ್ಯಾಂಕ್‌ ನೌಕರರ ಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು.

ನಾನು ನೋಟು ನಿಷೇಧದ ನಡೆಯ ಕುರಿತು 50 ದಿನಗಳನ್ನು ಕೇಳಿದ್ದೆ ,70 ವರ್ಷಗಳಿಂದ ಇದ್ದ ಖಾಯಿಲೆಗೆ ಒಮ್ಮೆಲೆ ಚಿಕಿತ್ಸೆ ನೀಡುವುದು ಅಷ್ಟು ಸುಲಭವಾಗಿರಲಿಲ್ಲ. ಭಾರಿ ಸಮಸ್ಯೆಗಳ ಹೊರತಾಗಿಯೂ ದೇಶವಾಸಿಗಳ ಬೆಂಬಲ ನನ್ನನ್ನು ಮುಟ್ಟಿದೆ. ನಿಮ್ಮನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳಿಗೆ ಅವಕಾಶ ನೀಡಲಿಲ್ಲ. ನೋಟು ನಿಷೇಧದ ಪ್ರಕ್ರಿಯೆಯ ಬಳಿಕ ಭಾರತ ಬೆಂಕಿಯಲ್ಲಿ ಬೆಂದು ಹೊರಬಂದ ಚಿನ್ನ ಹೊಳೆಯುವಂತೆ ಮೇಲೆದ್ದು ಬರುತ್ತದೆ ಎಂದರು.

ಕೆಲವು ಜನರು ಕಪ್ಪು ಹಣವನ್ನು ವಾಮ ಮಾರ್ಗದ ಮೂಲಕ ಬಿಳಿಯಾಗಿಸಲು ಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಬಡವರನ್ನು ಬಳಸಿಕೊಂಡು ಅವರ ಜೀವಗಳೊಂದಿಗೆ ಚೆಲ್ಲಾಟವಾಡಬೇಡಿ.ಇಂತಹ ನಿರ್ಲಜ್ಜ ಕೆಲಸಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕ್ಯಾಶ್‌ಲೆಸ್‌ ಸಮಾಜ ನಿರ್ಮಾಣ ಮಾಡಲು ಕರೆ ನೀಡಿದ ಮೋದಿ ರುಪೇ ಕಾರ್ಡ್‌, ಡೆಬಿಟ್‌ ಕಾರ್ಡ್‌ಗಳ ಮೂಲಕ ವ್ಯವಹಾರ ನಡೆಸಬೇಕು .ಯುವ ಜನತೆ ಮೊಬೈಲ್‌ ಆ್ಯಪ್‌ಗಳ ನ್ನು ದಿನಕ್ಕೆ ಕನಿಷ್ಠ 10 ಜನರಿಗೆ ತಿಳುವಳಿಕೆ ನೀಡಬೇಕು ಎಂದರು.

ಕೊಪ್ಪಳದ ಯುವಕ ಯಲ್ಲಪ್ಪ ಹೆಸರು ಉಲ್ಲೇಖ !
ಮನ್‌ಕಿ ಬಾತ್‌ನಲ್ಲಿ ಕೊಪ್ಪಳದ ಹಿಟ್ನಾಳ ಗ್ರಾಮದ ಯಲ್ಲಪ್ಪ ವರ್ಳೇಕರ್‌ ಅವರ ದೂರವಾಣಿ ಧ್ವನಿ ಮುದ್ರಣವನ್ನು ಪ್ರಸಾರ ಮಾಡಲಾಯಿತು. ಯಲ್ಲಪ್ಪ ಅವರು ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು. ನೀವು ಇಂತಹ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಯಾರೂ ಊಹಿಸಿರಲಿಲ್ಲ.  ನಿಜವಾಗಿಯೂ ಅಚ್ಛೇ ದೀನ್ ಬಂದಿದೆ ಎಂದು ನನಗನ್ನಿಸುತ್ತಿದೆ ಎಂದಿದ್ದರು.udupi_utsavooo

No Comments

Leave A Comment