Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಉಡುಪಿಯಲ್ಲಿ ಸಂವಿಧಾನದಿನ‌ಆಚರಣೆ…

zp__1_ಉಡುಪಿ: ಜಗತ್ತಿನಶ್ರೇಷ್ಠ ಹಾಗೂಬೃಹತ್ ಸಂವಿಧಾನಭಾರತ ದೇಶದ್ದಾಗಿದ್ದು,ನಮ್ಮ ಸಂವಿಧಾನದ‌ಆಶಯವನ್ನು‌ಅರಿತು ಅಳವಡಿಸಿಕೊಳ್ಳುವುದು‌ಎಲ್ಲ ನಾಗರೀಕರಕರ್ತವ್ಯ ಎಂದು ಜಿಲ್ಲಾಪಂಚಾಯತ್ ಅಧ್ಯಕ್ಷರಾದದಿನಕರ ಬಾಬುಹೇಳಿದರು.zp__2_

ಅವರಿಂದು ಜಿಲ್ಲಾ ಪಂಚಾಯತ್‌ನವಿ ಎಸ್ ಆಚಾರ್ಯ ಸಭಾಂಗಣದಲ್ಲಿ‌ಆಯೋಜಿಸಲಾದಸಂವಿಧಾನ ದಿನ‌ಆಚರಣೆಯಲ್ಲಿ ಸಂವಿಧಾನಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್‌ಅವರ ಭಾವಚಿತ್ರಕ್ಕೆಪುಷ್ಪನಮನಸಲ್ಲಿಸಿ ಮಾತನಾಡುತ್ತಿದ್ದರು.

ನಮ್ಮಸಂವಿಧಾನ ಸಭೆಯಲ್ಲಿ1949 ನವೆಂಬರ್ 26ರ೦ದುಬೃಹತ್ ಲಿಖಿತ ಸಂವಿಧಾನವನ್ನುದೇಶ ಒಪ್ಪಿಕೊಂಡು‌ಅಂಗೀಕರಿಸಿ, ಶಾಸನವನ್ನಾಗಿಸಿಕೊಂಡುಸಂವಿಧಾನಕ್ಕೆಬದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ.

ಆದ್ದರಿಂದಸಂವಿಧಾನವನ್ನು‌ಅರಿಯುವುದು ಎಲ್ಲರಕರ್ತವ್ಯ ಎಂದ ಅವರು,ಅತ್ಯಂತ ದೊಡ್ಡ ಲಿಖಿತಸಂವಿಧಾನವನ್ನುಹೊಂದಿರುವ ದೇಶನಮ್ಮದಾಗಿದ್ದು,ಎಲ್ಲರೂ ಸಂವಿಧಾನವನ್ನುನಮ್ಮ ಮಾರ್ಗದರ್ಶಕ‌ಎಂದು ತಿಳಿದು ನಡೆದುಕೊಳ್ಳುತ್ತಿದ್ದಾರೆ‌ಎಂದರು.

ಜಿಲ್ಲಾಪಂಚಾಯತ್ ಉಪಾಧ್ಯಕ್ಷರಾದಶೀಲಾ ಶೆಟ್ಟಿ ಅವರುಮಾತನಾಡಿ, ವೈವಿಧ್ಯತೆಯಲ್ಲಿ‌ಏಕತೆಯನ್ನುಸಾರುವ ಬೃಹತ್‌ಪ್ರಜಾಪ್ರಭುತ್ವರಾಷ್ಟ್ರ ನಮ್ಮದಾಗಿದ್ದು,ದೇಶದ ಎಲ್ಲ ಧರ್ಮಗ್ರಂಥಗಳಿಗಿಂತ ಮಿಗಿಲುನಮ್ಮ ಸಂವಿಧಾನ‌ಎಂದರು.

ಮಹಿಳಾಪದವಿಪೂರ್ವಕಾಲೇಜು ಉಪನ್ಯಾಸಕರಾದದಯಾನಂದ್ ಸಂಪನ್ಮೂಲವ್ಯಕ್ತಿಗಳಾಗಿದ್ದರು.ಸಿ‌ಇ‌ಒ ಪ್ರಿಯಾಂಕ ಮೇರಿಫ್ರಾನ್ಸಿಸ್ ಉಪಸ್ಥಿತರಿದ್ದರು. ಮುಖ್ಯ ಯೋಜನಾಧಿಕಾರಿಶ್ರೀನಿವಾಸರಾವ್‌ಕಾರ್ಯಕ್ರಮನಿರೂಪಿಸಿದರು.ಉಪಕಾರ್ಯದರ್ಶಿನಾಗೇಶ್ ರಾಯ್ಕರ್‌ವಂದಿಸಿದರು.

No Comments

Leave A Comment