Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಉಡುಪಿ:ನಿಟ್ಟೂರು ಪ್ರೌಢ ಶಾಲೆಯ 10 ವಿದ್ಯಾರ್ಥಿಗಳಿಗೆ ಗ್ಯಾಸ್ ಸಂಪರ್ಕ ಹಸ್ತಾ೦ತರ

vp8a0257ಉಡುಪಿ : ನಿಟ್ಟೂರು ಪ್ರೌಢಶಾಲೆಯ 10 ವಿದ್ಯಾರ್ಥಿಗಳ ಮನೆಗೆ ಎಲ್.ಪಿ.ಜಿ ಗ್ಯಾಸ್ ಸಂಪರ್ಕ ಕಲ್ಪಿಸುವ ಅಪೂರ್ವ ಸಮಾರಂಭ ನವೆಂಬರ್ 25ರಂದು ಜರಗಿತು.

ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘಟನೆಯ ಉಡುಪಿ ಘಟಕವು ಪ್ರತಿ ವರ್ಷದಂತೆ ಈ ಬಾರಿ ಕೆನರಾ ಬ್ಯಾಂಕ್ ಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಅವರ ಸಂಸ್ಮರಣೆಯನ್ನು ನಿಟ್ಟೂರು ಪ್ರೌಢಶಾಲೆಯಲ್ಲಿ ಆಚರಿಸಿ, ಗ್ಯಾಸ್ ಸಂಪರ್ಕ ಕೊಡುಗೆಯನ್ನು ನೀಡಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿತು. ಸಂಸ್ಥೆಯ ಕಾರ್ಯದರ್ಶಿ ಕೆ. ಮೋಹನದಾಸ್ ನಾಯಕ್ ಸ್ವಾಗತಿಸುದರು. ಬಿ.ಎ ಪೈಯವರು ಕೆನರಾ ಬ್ಯಾಂಕ್ ಸ್ಥಾಪಕರ ಯೋಚನೆ, ಯೋಜನೆ ಮತ್ತು ಬ್ಯಾಂಕ್ ನಡೆದು ಬಂದ ದಾರಿಯನ್ನು ತನ್ನ ಪ್ರಸ್ಥಾವನೆಯಲ್ಲಿ ತಿಳಿಸಿದರು.

ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡುತ್ತಾ, ಸಹಪಠ್ಯ ಚಟುವಟಿಕೆಗಳಿಗೂ ವಿದ್ಯಾರ್ಥಿಗಳನ್ನು ಅಣಿಗೊಳಿಸುತ್ತಿದೆ. ಶಾಲೆಗೆ ಕೆನರಾ ಬ್ಯಾಂಕ್ ಜೂನ್ ತಿಂಗಳಲ್ಲಿ ಉದಾರವಾಗಿ ಕೊಡಮಾಡಿದ ವಾಹನ ಸೌಲಭ್ಯವನ್ನು ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಂಡು, ಆರ್ಥಿಕವಾಗಿ ತೀರಾ ಹಿಂದುಳಿದ 10ವಿದ್ಯಾರ್ಥಿಗಳ ಮನೆಗೆ ಗ್ಯಾಸ್ ಸಂಪರ್ಕ ಕಲ್ಪಿಸಿ ಸ್ತುತ್ಯರ್ಹ ಕೆಲಸ ಮಾಡಿದ ನಿವೃತ್ತ ಅಧಿಕಾರಿಗಳನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ಪರವಾಗಿ ರಂಗಪ್ಪ ಕೃತಜ್ಞತೆ ವ್ಯಕ್ತಪಡಿಸಿ ಹೊಗೆಯಿಂದ ಓದಿಗಾಗುವ ತೊಂದರೆಯನ್ನು ನಿವಾರಿದ ಸಂಸ್ಥೆಗೆ ಋಣಭಾರ ಅರ್ಪಿಸಿದರು.

ಶಾಲಾ ಆಡಳಿತ ಮಂಡಳಿ ಅಧಿಕಾರಿಗಳ ಸಮಾಜಸೇವೆ ಅನುಕರಣೀಯವಾದುದು. ಸ್ವಾರ್ಥರಹಿತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸ್ಪಂದಿಸುತ್ತಿರುವ ರೀತಿ ಸ್ತುತ್ಯರ್ಹವಾದುದು ಎಂದು ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಕೆ.ರಘುಪತಿ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಡುಪಿ ಘಟಕ ಪದಾಧಿಕಾರಿಗಳಾದ ಬಿ.ಎಂ ಕಾಮತ್, ಗೋಪಾಲಕೃಷ್ಣ ಉಪಸ್ಥಿತರಿದ್ದರು. ಮಾರುತಿ ನಾಯಕ್ ಧನ್ಯವಾದ ಸಮರ್ಪಿಸಿದರು. ಸಮಾರಂಭದ ಪೂರ್ವದಲ್ಲಿ ಮೀನಾಕ್ಷಿ ಭಂಡಾರಿಯವರು ಎ. ಸುಬ್ಬರಾವ್ ಅವರ ಭಾವಚಿತ್ರಕ್ಕೆ ಹಾರ ಸಮರ್ಪಿಸಿ ಸ್ಮರಿಸಿದರು.

No Comments

Leave A Comment