Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಇರಾನ್‌ನಲ್ಲಿ ರೈಲುಗಳ ಮುಖಾಮುಖಿ,ಬೆಂಕಿ:44 ಬಲಿ,ಹಲವರಿಗೆ ಗಾಯ

4ಟೆಹರಾನ್‌ : ಇಲ್ಲಿನ ರೈಲು ನಿಲ್ದಾಣದಿಂದ 250 ಕೀ.ಮೀ ದೂರದಲ್ಲಿ ಶುಕ್ರವಾರ ಎರಡು ಪ್ಯಾಸೆಂಜರ್‌ ರೈಲುಗಳು ಮುಖಾಮುಖಿ ಢಿಕ್ಕಿಯಾಗಿ ಭೀಕರ ಅವಘಡ ಸಂಭವಿಸಿದ್ದು,44 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ದಾರುಣವಾಗಿ ಸಾವನ್ನಪ್ಪಿದ್ದು,100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಢಿಕ್ಕಿ ಸಂಭವಿಸಿದ ತೀವ್ರತೆಗೆ ಬೆಂಕಿ ಹೊತ್ತಿಕೊಂಡು ಕೆಲ ಬೋಗಿಗಳು ಭಸ್ಮವಾಗಿದ್ದು, ಇನ್ನು ಕೆಲ ಬೋಗಿಗಳು ಹಳಿ ತಪ್ಪಿದೆ.

ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

No Comments

Leave A Comment