Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಡಿ.ಕೆ.ರವಿ ಆತ್ಮಹತ್ಯೆ ರಹಸ್ಯ ಬಯಲು: ಅಧಿಕಾರಿಣಿ, ಮಸಾಜ್‌ ಗರ್ಲ್ ನಂಟು

iasraviಬೆಂಗಳೂರು: ಜನಪ್ರಿಯ ಐಎಎಸ್‌ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ರಹಸ್ಯವನ್ನು 20 ತಿಂಗಳ ಬಳಿಕ ತನಿಖಾ ವರದಿಯಲ್ಲಿ ಬಹಿರಂಗಗೊಳಿಸಿರುವ ಕೇಂದ್ರ ತನಿಖಾ ದಳ (ಸಿಬಿಐ), ಮೃತ ಅಧಿಕಾರಿಗೆ ಸಂಬಂಧಿಸಿದ ಖಾಸಗಿ ಹಾಗೂ ವೃತ್ತಿ ಬದುಕಿನ ಕುತೂಹಲಕಾರಿ ಘಟನಾವಳಿಗಳನ್ನು ಹೊರಗೆಳೆದಿದೆ.

ತಮ್ಮ ಐಎಎಸ್‌ ಬ್ಯಾಚ್‌ಮೇಟ್‌ ಮಹಿಳಾ ಅಧಿಕಾರಿ ಜತೆ ಆಪ್ತ ಗೆಳೆತನ, ಈ ಸ್ನೇಹದಿಂದ ರವಿ ದಾಂಪತ್ಯದಲ್ಲಿ ಬಿರುಗಾಳಿ, ಪಂಚಾತಾರಾ ಹೋಟೆಲ್‌ನ ಮಸಾಜ್‌ ಗರ್ಲ್ ಜತೆ ಸ್ನೇಹ, ರಿಯಲ್‌ ಎಸ್ಟೇಟ್‌ ವ್ಯವಹಾರ ಹಾಗೂ ನಾಲ್ಕು ತಿಂಗಳ ಮುನ್ನವೇ ಆತ್ಮಹತ್ಯೆಗೆ ಪೂರ್ವಸಿದ್ಧತೆ… ಹೀಗೆ ಅಧಿಕಾರಿ ಬದುಕಿನ ಹತ್ತಾರು ಕುತೂಲಹಕಾರಿ ಸಂಗತಿಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ.

2014ರ ಡಿ.7ರಂದು ಅಧಿಕಾರಿಣಿ ಜತೆ ಪತಿ ರವಿ ಬೆಸೆದುಕೊಂಡಿರುವ ಗಾಢ ಸ್ನೇಹದ ವಿಚಾರ ತಿಳಿದು ಕೆರಳಿದ್ದ ಪತ್ನಿ ಕುಸುಮಾ, ಈ ಗೆಳೆತನಕ್ಕೆ ಆಕ್ಷೇಪಿಸಿ ಪತಿ ಜತೆ ಜಗಳವಾಡಿದ್ದರು. ಅಂದೇ ಆ ಅಧಿಕಾರಿಣಿಗೂ ಫೇಸ್‌ಬುಕ್‌ನಲ್ಲಿ ಸಂದೇಶ ಕಳುಹಿಸಿ ಕುಸುಮಾ ತರಾಟೆಗೆ ತೆಗೆದುಕೊಂಡಿದ್ದರು. ಈ ಬೆಳವಣಿಗೆ ಬಳಿಕ ರವಿ ದಂಪತಿ ನಡುವೆ ಕೌಟುಂಬಿಕ ಕಲಹ ಶುರುವಾಯಿತು. ಗೆಳತಿಯ ಕ್ಷಮೆಯಾಚಿಸುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ ರವಿ, ಅದೇ ವೇಳೆ ಮುನಿಸಿಕೊಂಡು ತನ್ನಿಂದ ದೂರವಾಗಿದ್ದ ಸ್ನೇಹಿತೆಯನ್ನೂ ಸಮಾಧಾನಪಡಿಸಲು ಯತ್ನಿಸಿದ್ದರು.

ಡಿ.8ರಂದು ಸ್ನೇಹಿತೆಗೆ ಕರೆ ಮಾಡಿದರೂ ಪ್ರತಿಕ್ರಿಯಿಸದೆ ಹೋದಾಗ ರವಿ ಆಕೆಗೆ ವ್ಯಾಟ್ಸ್‌ಆ್ಯಪ್‌ ಮೂಲಕ ನಿರಂತರವಾಗಿ ಸಂದೇಶ ಕಳುಹಿಸಿದ್ದರು. ಪತ್ನಿಯ ತಪ್ಪಿಗೆ ಪರಿಪರಿಯಾಗಿ ಗೆಳತಿಯಲ್ಲಿ ಕ್ಷಮೆಯಾಚಿಸಿದ ಅವರು, “ಐ ಲವ್‌ ಯೂ ಬೇಬಿ, ಯೂ ಆರ್‌ ಮೈ ಫ್ರೆಂಡ್‌’ ಎಂಬ ಸಂದೇಶ ಕಳುಹಿಸಿ ಕೋಪ ಶಮನಕ್ಕೆ ಸಾಕಷ್ಟು ಯತ್ನಿಸಿದ್ದರು. ಈ ನಡುವೆ ಪಂಚತಾರ ಹೋಟೆಲ್‌ನ ನಾಗಾಲ್ಯಾಂಡ್‌ ಮೂಲದ ಮಸಾರ್ಜ್‌ ಗರ್ಲ್ ಜತೆಗೂ ಅವರಿಗೆ ಆತ್ಮೀಯ ಒಡನಾಟ ಬೆಳೆದಿದ್ದು, ಆಕೆಗೆ ಹಲವು ಬಾರಿ ಹಣಕಾಸು ನೆರವು ಸಹ ನೀಡಿದ್ದರು ಎಂದು ತಿಳಿದು ಬಂದಿದೆ.

ಆದರೆ ವೃತ್ತಿಪರ ವಿಚಾರದಲ್ಲಿ ಕಠಿಣವಾಗಿದ್ದ ರವಿ, ತನ್ನ ಕಾರ್ಯದಕ್ಷತೆಗೆ ಚ್ಯುತಿ ಬಾರದಂತೆ ಎಚ್ಚರ ವಹಿಸಿದ್ದರು. ಮಾನಸಿಕ ಒಳ ಬೇಗುದಿಯನ್ನು ಹೊರಗೆ ತೋರಿಸಿಕೊಳ್ಳದ ಅವರು, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಚುರುಕಿನಿಂದ ಕೆಲಸ ಮಾಡಿದ್ದರು. ತೆರಿಗೆ ಪಾವತಿಸದ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಟ್ರಾವೆಲ್ಸ್‌ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದ್ದರು. ಅದೇ ವೇಳೆ ಪ್ರಭಾರಿಯಾಗಿ ವ್ಯವಸ್ಥಾಪಕರಾಗಿದ್ದ ಸಾರ್ವಜನಿಕ ಭೂ ಅಭಿವೃದ್ಧಿ ನಿಗಮದ ಪುನಶ್ಚೇತನಕ್ಕೂ ಸಹ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು ಎಂದು ಮೂಲಗಳು ವಿವರಿಸಿವೆ.

ವೈಯಕ್ತಿಕ ಕಾರಣಗಳಿಂದ ಬೇಸರಗೊಂಡಿದ್ದ ರವಿ ಅವರು ಆತ್ಮಹತ್ಯೆಗೂ ಮುನ್ನ ತೀವ್ರ ಖನ್ನತೆಗೊಳಗಾಗಿದ್ದರು. ಈ ವ್ಯಾಕುಲ ಮನಸ್ಥಿತಿಯಲ್ಲೇ ಆತ್ಮಹತ್ಯೆಗೆ ಮುಂದಾಗಿದ್ದ ಅವರು, ತನ್ನ ಸ್ನೇಹಿತರಲ್ಲಿ ಸೈನೈಡ್‌ ಬಗ್ಗೆಯೂ ವಿಚಾರಿಸಿದ್ದರು ಎಂದು ಸಿಬಿಐ ವರದಿಯಲ್ಲಿ ಉಲ್ಲೇಖೀಸಿದೆ ಎನ್ನಲಾಗಿದೆ.

ಸ್ನೇಹಿತನಲ್ಲಿ ಸೈನೈಡ್‌ ವಿಚಾರಿಸಿದ್ದ ರವಿ:
ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಆಗಿರುವ ಗೆಳೆಯ ಶಿವರಾಜ್‌ ಹಾಗೂ ರಾಸಾಯನಿಕ ವಸ್ತುಗಳ ಸಗಟು ವ್ಯಾಪಾರಿ ವಸಂತ್‌ ಅವರನ್ನು 2014ರ ನ.27ರಂದು ಸಂಪರ್ಕಿಸಿದ್ದ ರವಿ, ಸೈನೈಡ್‌ ಬಗ್ಗೆ ಮಾಹಿತಿ ಕೇಳಿದ್ದರು. ಆಗ ಪೊಟ್ಯಾಷಿಯಂ ವಿಷಕಾರಿ ವಸ್ತು ಆಗಿರುವುದರಿಂದ ತಾನು ಮಾರಾಟ ಮಾಡುವುದಿಲ್ಲ ಎಂದು ವಸಂತ್‌ ಹೇಳಿದ್ದರು. ವಸಂತ್‌ ಅವರ ನಂಬರನ್ನು ಶಿವರಾಜ್‌ರಿಂದ ರವಿ ಪಡೆದಿದ್ದರು. ಸೈನೈಡ್‌ ಏತಕ್ಕೆ ಎಂಬ ಗೆಳೆಯರ ಪ್ರಶ್ನೆಗೆ, ಊರಿನಲ್ಲಿ ಬೆಳೆಗಳು ರೋಗಪೀಡಿತವಾಗಿವೆ. ಅದಕ್ಕೇ ಬೇಕಾಗಿದೆ ಎಂದು ಹೇಳಿದ್ದರು.

ನಂತರ ಈ ಎಲ್ಲ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ 2015ರ ಮಾರ್ಚ್‌ 16ರಂದು ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ವರದಿಯಲ್ಲಿ ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ.

ಮೊಬೈಲ್‌ನಲ್ಲಿ ನಿರಂತರ ಸಂಭಾಷಣೆ
2011ರ ಐಎಎಸ್‌ ಅಧಿಕಾರಿಯಾಗಿದ್ದ ರವಿ ಅವರಿಗೆ ಐಎಎಸ್‌ ತರಬೇತಿ ವೇಳೆ ಆಂಧ್ರಪ್ರದೇಶ ಮೂಲದ ಮಹಿಳಾ ಅಧಿಕಾರಿ ಪರಿಚಯವಾಯಿತು. ಕರ್ನಾಟಕ ಕೇಡರ್‌ಗೆ ಬಂದ ನಂತರ ಅವರಲ್ಲಿ ಆತ್ಮೀಯತೆ ಹೆಚ್ಚಿತು. ಅದೇ ಬ್ಯಾಚ್‌ಮೇಟ್‌ನ ಇತರೆ ಗೆಳೆಯರಿಗಿಂತ ಆ ಮಹಿಳಾ ಅಧಿಕಾರಿ ಜತೆ ರವಿ ನಿಕಟವಾಗಿದ್ದರು. ಆ ಮಹಿಳಾ ಅಧಿಕಾರಿಗೆ ವಿವಾಹವಾಗಿತ್ತು. ತಾನು ಕುಸುಮಾ ಜತೆ ದಾಂಪತ್ಯಕ್ಕೆ ಕಾಲಿಟ್ಟ ನಂತರವೂ ರವಿ ಆ ಮಹಿಳಾ ಅಧಿಕಾರಿಯ ಜತೆ ಸ್ನೇಹ ಮುರಿದುಕೊಳ್ಳಲಿಲ್ಲ. ಅವರ ಗೆಳೆತನವೇ ಕೌಟುಂಬಿಕ ಜೀವನಕ್ಕೆ ಮುಳ್ಳಾಯಿತು ಎಂದು ಸಿಬಿಐ ಹೇಳಿದೆ.

ಮದುವೆ ನಂತರ ಕೆಲ ದಿನಗಳಲ್ಲೇ ಅಧಿಕಾರಿಣಿ ಜತೆ ಪತಿಯ ಸ್ನೇಹದ ಬಗ್ಗೆ ತಿಳಿದ ಕುಸುಮಾ, ಹಲವು ಬಾರಿ ಸಂಶಯ ವ್ಯಕ್ತಪಡಿಸಿದ್ದರು. ಆಗ ಪತ್ನಿಗೆ ಆ ಅಧಿಕಾರಿಣಿ ಕುರಿತು ನಕಾರಾತ್ಮಕ ವಿಚಾರಗಳನ್ನು ಹೇಳಿ ಅನುಮಾನ ಹೋಗಲಾಡಿಸಲು ರವಿ ಯತ್ನಿಸಿದ್ದರು. ಆದರೆ ಈ ಮಾತಿನಿಂದ ಶಾಂತಗೊಳ್ಳದ ಕುಸುಮಾ, ಪತಿ ನಡವಳಿಕೆಯನ್ನು ಪ್ರಶ್ನಿಸಲಾರಂಭಿಸಿದ್ದರು ಎನ್ನಲಾಗಿದೆ.

ಈ ನಡುವೆ ಕೋಲಾರ ಜಿಲ್ಲಾಧಿಕಾರಿಯಾದ ನಂತರ ಜಿಲ್ಲಾ ಕೇಂದ್ರದಲ್ಲಿ ರವಿ ವಾಸ್ತವ್ಯ ಹೂಡಿದ್ದರು. ಇತ್ತ ಬೆಂಗಳೂರಿನ ತಂದೆ ಮನೆಯಲ್ಲೇ ಇದ್ದ ಕುಸುಮಾ, ಆಗಾಗ್ಗೆ ಪತಿ ಭೇಟಿಗೆ ಹೋಗುತ್ತಿದ್ದರು. ಹೀಗಾಗಿ ಪತ್ನಿ ದೂರ ಸರಿದ ನಂತರ ರವಿ ಅವರು ಗೆಳತಿಯ ಜತೆ ನಿರಂತರ ಮೊಬೈಲ್‌ನಲ್ಲಿ ಸಂಭಾಷಣೆ, ಚಾಟಿಂಗ್‌ ಮುಂದುವರೆಸಿದ್ದರು ಎಂದು ತಿಳಿದು ಬಂದಿದೆ.

ನ.17ರಂದು ಪಂಚತಾರ ಹೋಟೆಲ್‌ನ ಮಸಾಜ್‌ ಗರ್ಲ್ ವಿಚಾರವಾಗಿ ಬೇಸರಗೊಂಡಿದ್ದ ರವಿ, ಅಂದು ಬೆಳಗ್ಗೆ ತನ್ನ ಗೆಳತಿಗೆ ಕರೆ ಮಾಡಿ 672 ಸೆಕೆಂಡ್‌, ರಾತ್ರಿ 11.45ರಲ್ಲಿ 1276 ಸೆಕೆಂಡ್‌ ಸಂಭಾಷಿಸಿದ್ದರು. ಮತ್ತೆ ಡಿ.5ರಂದು ರಾತ್ರಿ 1837 ಸೆಕೆಂಡ್‌, ರಾತ್ರಿ 12.33ರಲ್ಲಿ 694 ಸೆಕೆಂಡ್‌, ಮುಂಜಾನೆ 217 ಸೆಕೆಂಡ್‌ ಹೀಗೆ ತಾಸುಗಟ್ಟಲೆ ಮಾತನಾಡಿದ್ದರು. ಆತ್ಮಹತ್ಯೆಗೂ ಹಿಂದಿನ ದಿನ ಮಾ.13ರಂದು ದೆಹಲಿಯಲ್ಲಿದ್ದ ಗೆಳತಿಗೆ ರವಿ ಕಳಿಸಿದ್ದ ವ್ಯಾಟ್ಸ್‌ ಆ್ಯಪ್‌ ಸಂದೇಶವೇ ಅವರ ಮೊಬೈಲ್‌ನಿಂದ ಹೋದ ಕೊನೆಯ ಸಂದೇಶವಾಗಿದೆ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖೀಸಿದೆ ಎನ್ನಲಾಗಿದೆ.

ಪತಿಯನ್ನು ಕಸಿದುಕೊಂಡರೆ ಹೇಗೆ ಸುಮ್ಮನಿರಲಿ?
ಅಧಿಕಾರಿಣಿ ಜತೆಗಿನ ಸ್ನೇಹದ ಬಗ್ಗೆ ಅನುಮಾನಗೊಂಡಿದ್ದ ರವಿ ಪತ್ನಿ ಕುಸುಮಾ ಅವರು, ಯೋಗಕ್ಷೇಮದ ನೆಪದಲ್ಲಿ ರಾತ್ರಿ ವೇಳೆ ಪತಿಗೆ ಕರೆ ಮಾಡಿ ವಿಚಾರಿಸುತ್ತಿದ್ದರು. ಆಗ ಕಚೇರಿ ಕೆಲಸದಿಂದ ಬಳಲಿದ್ದೇನೆ, ತಾನು ಮಲಗುವುದಾಗಿ ಪತ್ನಿಗೆ ಹೇಳುತ್ತಿದ್ದ ರವಿ, ನಡುರಾತ್ರಿ ಸರಿದರೂ ನಿದ್ರೆಗೆ ಜಾರುತ್ತಿರಲಿಲ್ಲ. ಅವರ ಮೊಬೈಲ್‌ ಕಾರ್ಯನಿರತವಾಗಿರುತ್ತಿತ್ತು. ಪತಿಯನ್ನು ಪರೀಕ್ಷಿಸುವ ಸಲುವಾಗಿ ಕುಸುಮಾ, ನಡು ರಾತ್ರಿ ಪತಿ ಮೊಬೈಲ್‌ಗೆ ಕರೆ ಮಾಡುತ್ತಿದ್ದರು. ಹೀಗಿರುವಾಗ ಡಿ.7ರಂದು ಪತಿಯ ಮೊಬೈಲ್‌ನಲ್ಲಿ ಅಧಿಕಾರಿಣಿಯ ಸಂದೇಶ ಕಂಡು ಅವರು ಕೆರಳಿದ್ದರು.

ಆಗಲೇ ಫೇಸ್‌ಬುಕ್‌ನಲ್ಲಿ ಅಧಿಕಾರಿಣಿಗೆ “ಯಾರಾದರೂ ಪತಿಯನ್ನು ಕಸಿದುಕೊಂಡರೆ ಹೆಣ್ಣಾಗಿ ಹೇಗೆ ಸುಮ್ಮನಿರಲು ಸಾಧ್ಯ’ ಎಂದು ಖಾರವಾಗಿ ಸಂದೇಶ ಕಳುಹಿಸಿದ್ದರು. ಈ ಬೆಳವಣಿಗೆಯ ಬಳಿಕ ಕೌಟುಂಬಿಕ ಕಲಹ ದಿನದಿಂದ ದಿನಕ್ಕೆ ಬಿಗಡಾಯಿಸಿ ವಿಕೋಪಕ್ಕೆ ಹೋಗಿದೆ ಎಂದು ತಿಳಿದು ಬಂದಿದೆ.

ರಿಯಲ್‌ ಎಸ್ಟೇಟ್‌ಗೆ ಕೋಟಿ ಕೋಟಿ ಹೂಡಿಕೆ
ಕೋಲಾರ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ರಿಯಲ್‌ ಎಸ್ಟೇಟ್‌ನಲ್ಲಿ ರವಿ ತೊಡಗಿದ್ದರು. ತನ್ನ ಬ್ಯಾಚ್‌ಮೇಟ್‌ ಆಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರಿಂದ ತನ್ನ ಭೂ ವ್ಯವಹಾರಕ್ಕೆ ಅವರು ಸಹಾಯ ಪಡೆದಿದ್ದರು. ರಿಯಲ್‌ ಎಸ್ಟೇಟ್‌ ಉದ್ಯಮಿ ಆಗಿದ್ದ ಮಾವ ಹನುಮಂತರಾಯಪ್ಪ ಅವರಿಂದ 2 ಕೋಟಿ ರೂ. ಪಡೆದಿದ್ದರು ಎಂದು ತಿಳಿದು ಬಂದಿದೆ.

No Comments

Leave A Comment