Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ಪೊಲೀಸ್‌ ವೇತನ ಹೆಚ್ಚಳ 1 ವರ್ಷ ಮುಂದಕ್ಕೆ: ಸಿಎಂ

161125kpn78ವಿಧಾನಸಭೆ: ರಾಜ್ಯ ಸರ್ಕಾರ ಇದೀಗ ಅಧಿಕೃತವಾಗಿ ಪೊಲೀಸರ ವೇತನ ಪರಿಷ್ಕರಣೆಯನ್ನು ಒಂದು ವರ್ಷ ಮುಂದೂಡಿದೆ. ಮುಂದಿನ ವರ್ಷ ರಚನೆ ಮಾಡಲಿರುವ ವೇತನ ಆಯೋಗ ತನ್ನ ಶಿಫಾರಸು ನೀಡುವವರೆಗೂ ಪೊಲೀಸರ ವೇತನ ಪರಿಷ್ಕರಣೆ ಮುಂದೂಡಿಕೆ ಕಂಡಿದೆ.

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸದನಕ್ಕೆ ತಿಳಿಸಿದ್ದಾರೆ.

ಶೂನ್ಯವೇಳೆಯಲ್ಲಿ ಬಿಎಸ್‌ಆರ್‌ ಕಾಂಗ್ರೆಸ್‌ನ ಪಿ.ರಾಜೀವ್‌ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಔರಾದ್‌ಕರ್‌ ಸಮಿತಿಯು ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಿಸಿದ ವರದಿ ನೀಡಿದ್ದು, ಮುಂದಿನ ವರ್ಷ ವೇತನ ಆಯೋಗ ರಚನೆ ಮಾಡುವ ತೀರ್ಮಾನವನ್ನು ಸರ್ಕಾರ ಮಾಡಿದೆ. ಈ ಆಯೋಗ ತನ್ನ ಶಿಫಾರಸು ನೀಡಿದ ಮೇಲೆ ಪೊಲೀಸರ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು.

ವೇತನ ಪರಿಷ್ಕರಣೆ ಮುಂದೂಡಿರುವುದರಿಂದ ಪೊಲೀಸರಿಗೆ ತೊಂದರೆಯಾಗಬಾರದು ಎಂದು ತಕ್ಷಣಕ್ಕೆ ಮಾಸಿಕ 2 ಸಾವಿರ ರೂ. ವಿಶೇಷ ಭತ್ಯೆ ನೀಡುವ ಆದೇಶ ಹೊರಡಿಸಲಾಗಿದೆ. ಇದು ಡಿಸೆಂಬರ್‌ 1ರಿಂದ ಜಾರಿಯಾಗಲಿದ್ದು, ಶೇ.90ರಷ್ಟು ಪೊಲೀಸ್‌ ಸಿಬ್ಬಂದಿಗೆ ಅನ್ವಯವಾಗುತ್ತದೆ ಎಂದರು.

ಜತೆಗೆ, ನನಗೆ ಪೊಲೀಸ್‌ ಕುಟುಂಬಗಳ ಬಗ್ಗೆ ನಮಗೆ ಅತೀವ ಕಾಳಜಿಯಿದೆ. ಖಂಡಿತವಾಗಿಯೂ ಪೊಲೀಸರ ವೇತನ ಪರಿಷ್ಕರಣೆ ಮಾಡುವೆ. ಅಲ್ಲದೆ, ಪೊಲೀಸ್‌ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುವ ಆರ್ಡರ್ಲಿ ಪದ್ಧತಿ ಸಹ ರದ್ದುಗೊಳಿಸಲಾಗಿದೆ. ಪೊಲೀಸರ ಕಲ್ಯಾಣ ಯೋಜನೆಗಳ ಬಗ್ಗೆ ಸರ್ಕಾರ ವಿಶೇಷ ಗಮನಹರಿಸಲಿದೆ ಎಂದು ಹೇಳಿದರು.

No Comments

Leave A Comment