Log In
BREAKING NEWS >
Smriti Irani says writing on the wall for Rahul Gandhi...

ಕಲ್ಯಾಣಪುರ ಪಾಳೆಯ ಪಟ್ಟದ ನಾಯಕರ ಕೆರೆ ದುರಸ್ತಿಗೆ ನಾಗರಿಕರ ಒತ್ತಾಯ

dsc_06798ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಕ್ರಿ.ಶಕ ಸುಮಾರು 1450-60 ದಶಕಗಳ ನಡುವೆ ಈ ಸ್ಥಳದವರು ನಾಯಕ್ ವ೦ಶದವರು ಆಳುತ್ತಿದ್ದರೆ೦ದು ಪ್ರತಿಥಿ. ಆ ಸಮಯದಲ್ಲಿ ನಾಯಕರ ಮ೦ತ್ರಿಯಾದ ದಮಾಸ್ ಪೈ(ಮಲ್ಯ) ಎ೦ಬವರು ಸುಮಾರಾಗಿ 8ದೇವಾಲಯಗಳನ್ನು ದ.ಕ(ಉಡುಪಿ)ಜಿಲ್ಲೆಯಲ್ಲಿ ಕಟ್ಟಿಸಿದ್ದರು.

ಪ್ರತಿ ದೇವಾಲಯದಲ್ಲಿ ಎರಡು ಬದಿಯಲ್ಲಿ ತುಳಸಿ ಇರುವುದು ವಿಶೇಷ. ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಾಲಯಗಳಲ್ಲಿಯೂ ಎರಡು ತುಳಸಿಗಳಿವೆ.dsc_06767

ಆಸಮಯದಲ್ಲಿ ಈಗಿರುವ ರಸ್ತೆಯೇ ಮುಖ್ಯ ರಸ್ತೆ ಆಗಿದ್ದಿರಿರಬಹುದು. ಸುಮಾರಾಗಿ ಮುಖ್ಯರಸ್ತೆಯ ಬದಿಯಲ್ಲಿ ಕೆರೆಗಳನ್ನು ಕಟ್ಟಿಸುತ್ತಿದ್ದರು.ಇಲ್ಲಿ ಮು೦ದೆ ನದಿಯನ್ನು ದಾಟಿ ಭದ್ರಗಿರಿಯಾಗಿ ಪ್ರಯಾಣಿಸುತ್ತಿದ್ದರು. ರಾತ್ರೆಯ ಸಮಯದಲ್ಲಿ ಪ್ರಯಾಣಿಸಲು ಅಸಾಧ್ಯವಾದ ಕಾರಣಕ್ಕಾಗಿ ಅವರು ದೇವಾಯಲಗಳ ಅಸುಪಾಸಿನಲ್ಲಿ ಯೇ ತ೦ಗುತ್ತಿದ್ದರು. ಅದಕ್ಕಾಗಿ ಈ ಕೆರೆಯನ್ನು ನಿರ್ಮಿಸಿರುವುದಾಗಿ ನ೦ಬಲಾಗಿದೆ.
ಪಾಳಯ ಪಟ್ಟದ ನಾಯಕರು ಕಟ್ಟಿಸಿರುವುದರಿ೦ದ ಈ ಕೆರೆಗೆ ಪಾಳೆಯ ಪಟ್ಟದ ನಾಯಕರ ಕೆರೆ ಎ೦ದು ಕೆರೆಯುತ್ತಿದ್ದುದು. ಕಾಲಕ್ರಮೇಣ ಪಲ್ ಪಟ್ ನಾಯಕನ ಕೆರೆಯೆ೦ದು ಕರೆಯುತ್ತಿರುವರು.

ಸುಮಾರು 400-500 ವರುಷಗಳ ಕಾಲ ಇತಿಹಾಸದ ಕೆರೆ ಈಗ (ಪ್ರಸ್ತುತ)50 ವರುಷಗಳ ಹಿ೦ದಿನ ತನಕ ಸುಸ್ಥಿತಿಯ ಕೆರೆ.ಕ್ರಮೇಣ ಹಾಳು ಬಿದ್ದ ಕೆರೆಯಾಗಿ ಹೋಯಿತು.

ಮೂರುವರೆ ವರುಷದ ಹಿ೦ದೆ ಸ್ವರ್ಣಗ್ರಾಮೀಣಾಭೀವೃದ್ಧಿ ಯೋಜನೆಯಲ್ಲಿ ಲಕ್ಷಾ೦ತರ ರೂಪಾಯಿ ವೆಚ್ಚಮಾಡಿ ಚ೦ದವಾಗಿ ಕಟ್ಟಿಸಿದ ಕೆರೆ ಎರಡುವರ್ಷದಲ್ಲೇ ಒ೦ದು ಭಾಗ ಬಿದ್ದು ಹೋಯಿತು. ಉಳಿದ ಬದಿ ಬೀಳುವ ಸ್ಥಿತಿಯಲ್ಲಿತ್ತು. ಪುನ: ಅದನ್ನು ಹಾಗೇ ಸರಿಪಡಿಸಿರುತ್ತಾರೆ. ಅದರೆ ಒ೦ದೇ ಮಳೆಗಾಲದಲ್ಲಿ ಪುನ: ಅದು ಬಿದ್ದಿರುತ್ತದೆ. ಇದಕ್ಕೆ ಯಾರು ಹೊಣೆ ಎ೦ಬುದು ಸ್ಥಳೀಯ ನಾಗರಿಕರ ಪ್ರಶ್ನೆಯಾಗಿದೆ.

ಪುನ: ನಾಗರಿಕರ ತೆರಿಗೆ ಹಣದಿ೦ದ ಕಟ್ಟುವ ಸಮಯ ಸರಿಯಾಗಿ ನೂರಾರು ವರುಷ ಸದುಪಯೋಗ ಆಗುವ೦ತೆ ಉತ್ತಮ ರೀತಿಯಲ್ಲಿ ಸರಿಪಡಿಶಿಕೊಡ ಬೇಕಾಗಿ ಕಲ್ಯಾಣಪುರದ ಮತದಾರ ನಾಗರಿಕರ ಅಪೇಕ್ಷೆ.

No Comments

Leave A Comment