Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಟೋಲ್ ಪಾವತಿ: ಹೊಸ ವಾಹನಗಳಲ್ಲಿ ಇನ್ನು ಮುಂದೆ ಡಿಜಿಟಲ್ ಟ್ಯಾಗ್

toll-collectionನವದೆಹಲಿ: ನಗದು ರಹಿತ ಹಣಕಾಸು, ಆರ್ಥಿಕ ವಹಿವಾಟುಗಳನ್ನು ಸೃಷ್ಟಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಟೋಲ್ ಪಾವತಿ ಕೇಂದ್ರಗಳಲ್ಲಿ ಎಲೆಕ್ಟ್ರಾನಿಕ್ ಪಾವತಿಯನ್ನು ಸಕ್ರಿಯಗೊಳಿಸುವುದಕ್ಕೂ ಯೋಜನೆಯೊಂದನ್ನು ರೂಪಿಸಿದೆ. ಇನ್ನು ಮುಂದೆ ತಯಾರಾಗುವ ವಾಹನಗಳಿಗೆ ಡಿಜಿಟಲ್ ಟ್ಯಾಗ್ ನ್ನು ಅಳವಡಿಸುವಂತೆ ಕೇಂದ್ರ ಸರ್ಕಾರ ವಾಹನ ತಯಾರಕರಿಗೆ ಸೂಚನೆ ನೀಡಿದ್ದು, ಚೆಕ್ ಪೋಸ್ಟ್ ಗಳಲ್ಲಿ ತಡೆರಹಿತ ವಾಹನ ಚಲನೆ ಇರುವ ವ್ಯವಸ್ಥೆ ನಿರ್ಮಾಣವಾಗುವುದಕ್ಕೆ ಪೂರಕವಾಗಿರಲಿದೆ.

ದೇಶದಲ್ಲಿ ಶೇ.80 ಕ್ಕಿಂತಲೂ ಹೆಚ್ಚು ಜನರು ನಗದು ವಹಿವಾಟನ್ನು ನಡೆಸುತ್ತಿದ್ದು, ನಗದು ರಹಿತ ಹಣಕಾಸಿನ ವಹಿವಾಟು ಸೃಷ್ಟಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ತನ್ನ ಗುರಿ ಸಾಧನೆಯ ಮೊದಲ ಭಾಗವಾಗಿ ಟೋಲ್ ಗಳಲ್ಲಿ ಎಲೆಕ್ಟ್ರಾನಿಕ್ ಪಾವತಿಯನ್ನು ಸಕ್ರಿಯಗೊಳಿಸುವುದಕ್ಕೆ ಸಹಕಾರಿಯಾಗುವಂತೆ ಡಿಜಿಟಲ್ ಐಡೆಂಟಿಟಿ ಟ್ಯಾಗ್ ನೊಂದಿಗೆ ವಾಹನಗಳನ್ನು ತಯಾರಿಸಬೇಕೆಂಬ ಸೂಚನೆ ನೀಡಿದೆ ಎಂದು ಮುಖ್ಯ ಆರ್ಥಿಕ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ವಾಹನಗಳಲ್ಲಿ ಇಪಿಸಿಜಿ ಎಲೆಕ್ಟ್ರಾನಿಕ್ ಪ್ರಾಡಕ್ಟ್ ಕೋಡ್ ಗ್ಲೋಬಲ್ ಕಾರ್ಪೊರೇಟೆಡ್ ಆರ್ ಎಫ್ಐಡಿ ವ್ಯವಸ್ಥೆ ಟೋಲ್ ಗಳಲ್ಲಿ ಡಿಜಿಟಲ್ ಪಾವತಿಗೆ ಸಹಕರಿಸಲಿದ್ದು ಆರ್ ಎಫ್ಐಡಿ ಕಾರ್ಡ್ ಮೂಲಕ ಪಾವತಿಯಾಗಬೇಕಿರುವ ಮೊತ್ತ ಕಡಿತಗೊಳ್ಳಲಿದೆ ಇದರಿಂದಾಗಿ ವಾಹನಗಳ ಕಾಯುವಿಕೆ ಸಮಯವನ್ನು ಕಡಿಮೆಗೊಳಿಸಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

No Comments

Leave A Comment