Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಜಾರ್ಖಂಡ್‌: ಆರು ಜನ ಮಾವೋವಾದಿಗಳ ಹತ್ಯೆ

jjjjjjkkkkkllllರಾಂಚಿ:  ಜಾರ್ಖಂಡ್‌ ರಾಜ್ಯದ ಲಾತೇಹರ್‌ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೇಂದ್ರ ಮೀಸಲು ಪಡೆ ಪೊಲೀಸರು  (ಸಿಆರ್‌ಪಿಎಫ್‌) ಬುಧವಾರ ನಡೆಸಿದ ಎನ್ ಕೌಂಟರ್ ನಲ್ಲಿ ಆರು ಜನ ಮಾವೋವಾದಿಗಳು ಹತ್ಯೆಯಾಗಿದ್ದಾರೆ.

ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಇಲ್ಲಿನ ಕರಂಡಿ ಮತ್ತು ಛಿಪ್ಪಪೂರ್‌ ಅರಣ್ಯ ಪ್ರದೇಶದಲ್ಲಿ ಇಂದು 9 ಗಂಟೆ ಸುಮಾರಿಗೆ ಎನ್‌ ಕೌಂಟರ್‌ ನಡೆಸಲಾಯಿತು.  ಕಾರ್ಯಾಚರಣೆ ವೇಳೆ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದರು. ಪ್ರತಿಯಾಗಿ ಹಲವು ಸುತ್ತು ಗುಂಡಿನ ದಾಳಿ ನಡೆಸಿದ ಬಳಿಕ ಮಾವೋವಾದಿಗಳನ್ನು ಹೊಡೆದುರುಳಿಸಲಾಯಿತು ಎಂದು ಸಿಆರ್‌ಪಿಎಫ್‌ ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎನ್ ಕೌಂಟರ್ ನಡೆದ ಸ್ಥಳದಿಂದ ನಕ್ಸಲ್‌ ಸಮವಸ್ತ್ರ ಧರಿಸಿದ್ದ ಆರು ಜನ ಮಾವೋವಾದಿಗಳ ಶವಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment