Log In
BREAKING NEWS >
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ; ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ 3 ದಿನ ಶೋಕಾಚರಣೆ........20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಪಿಂಚಣಿ ಪರಿಷ್ಕರಣೆ: ನಿವೃತ್ತ ಬ್ಯಾಂಕರ್‌ಗಳ ಪ್ರತಿಭಟನೆ

dsc_0668ಉಡುಪಿ: ಕಾಲ ಕಾಲಕ್ಕೆ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿಯಲ್ಲಿ ಹೆಚ್ಚಳ, ಶೇ. ೧೦೦ ತುಟ್ಟಿಭತ್ಯೆ ಪಾವತಿ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿವೃತ್ತ ಬ್ಯಾಂಕ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಬೋರ್ಡ್ ಹೈಸ್ಕೂಲ್ ಎದುರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಅಬ್ದುಲ್ ಜಲೀಲ್, ತಮ್ಮ ನ್ಯಾಯಯುತ ಬೇಡಿಕೆಗಳು ದೀರ್ಘಕಾಲದಿಂದ ಜಾರಿಯಾಗದೇ ಬಾಕಿ ಇವೆ. ಬ್ಯಾಂಕ್ ನೌಕರರು ಮರಣ ಹೊಂದಿದಾಗ ಅವರ ಪತಿ ಯಾ ಪತ್ನಿಗೆ ನೀಡುವ ಶೇ. ೧೫ರಷ್ಟು ಪಿಂಚಣಿಯನ್ನು ಶೇ. ೩೦ಕ್ಕೇರಿಸಬೇಕು. ಸರ್ಕಾರಿ ನೌಕರರು ಮತ್ತು ಸರ್ಕಾರಿ ನೌಕರರಿಗೆ ಸಿಗುವ ಮಾದರಿಯಲ್ಲಿ ಕುಟುಂಬ ಪಿಂಚಣಿ ನೀಡಬೇಕು. ೨೦೦೨ರ ಮುನ್ನ ನಿವೃತ್ತರಾದವರಿಗೆ ನೀಡುವ ತುಟ್ಟಿಭತ್ಯೆ ಕಡಿಮೆ ಮತ್ತು ತಾರತಮ್ಯದಿಂದ ಕೂಡಿದ್ದು ಅಂಥವರಿಗೂ ೨೦೦೨ರ ನಂತರ ನಿವೃತ್ತರಾದವರಿಗೆ ನೀಡುವಂತೆ ಶೇ. ೧೦೦ ತುಟ್ಟಿಭತ್ಯೆ ಪಾವತಿಸಬೇಕು. ಪಿಂಚಣಿಯಲ್ಲಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು. ಕಡ್ಡಾಯ ನಿವೃತ್ತಿ ಹಾಗೂ ರಾಜೀನಾಮೆ ನೀಡಿದವರಿಗೆ ಈಗ ಪಿಂಚಣಿ ನೀಡಲಾಗುತ್ತಿಲ್ಲ. ಅವರಿಗೂ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

dsc_0666

dsc_0667

dsc_0670

dsc_0671

dsc_0672

ಅ. ಭಾ. ನಿವೃತ್ತ ಬ್ಯಾಂಕ್ ಒಕ್ಕೂಟ ರಾಜ್ಯ ಸಮಿತಿಯ ಕೆ. ವಿಶ್ವನಾಥ ನಾಯಕ್ ಮತ್ತು ಬಿ. ದೇವದಾಸ ರಾವ್, ಜಿಲ್ಲಾ ಸಮಿತಿ ಕಾರ್‍ಯದರ್ಶಿ ಯು. ಶಿವರಾಯ, ಜಿಲ್ಲಾ ಸಂಘ ಅಧ್ಯಕ್ಷ ಪಿ. ರಾಘವೇಂದ್ರ ರಾವ್ ಇದ್ದರು.

No Comments

Leave A Comment