Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಏಕರೂಪ ತೆರಿಗೆಯಿಂದ ವರ್ತಕರಿಗೆ ಅನುಕೂಲ:ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಬಿ ಎ ನಾಣಿಯಪ್ಪ

dsc_0652ಉಡುಪಿ: ಕೇಂದ್ರ ಸರ್ಕಾರ ಮುಂದಿನ ಏ. ೧ರಿಂದ ಜಾರಿಗೆ ತರಲುದ್ದೇಶಿಸಿರುವ ಏಕರೂಪ ತೆರಿಗೆ ಪದ್ಧರಿ (ಜಿ‌ಎಸ್‌ಟಿ)ಯಿಂದ ವರ್ತಕರಿಗೆ ಅನುಕೂಲವಾಗಲಿದೆ ಎಂದು ಮಂಗಳೂರು ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಬಿ. ಎ. ನಾಣಿಯಪ್ಪ ಹೇಳಿದರು.

ಉಡುಪಿ ಛೇಂಬರ್ ಆಪ್ ಕಾಮರ್ಸ್ ಆಶ್ರಯದಲ್ಲಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ನಡೆದ ಜಿ‌ಎಸ್‌ಟಿ ಜಾಗೃತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.dsc_0650

dsc_0653

dsc_0654

dsc_0655

dsc_0656

dsc_0659

dsc_0660

dsc_0661

೧೯೫೭ರಿಂದ ೨೦೦೩ರ ವರೆಗೆ ರಾಜ್ಯದಲ್ಲಿ ಕರ್ನಾಟಕ ಮಾರಾಟ ತೆರಿಗೆ ಪದ್ಧತಿ ಜಾರಿಯಲ್ಲಿತ್ತು. ೨೦೦೩ರಲ್ಲಿ ವ್ಯಾಟ್ ಪದ್ಧತಿ ಜಾರಿಗೆ ಬಂದರೂ ೨೦೦೫ರಲ್ಲಿ ಅದು ಅನುಷ್ಠಾನಕ್ಕೆ ಬಂತು. ಆ ಕಾಯ್ದೆ ಬಗ್ಗೆ ೧೯೯೭ರಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದೀಗ ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರಲಿರುವ ಏಕರೂಪ ತೆರಿಗೆ ಪದ್ಧತಿ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ವರ್ತಕರ ಅಭಿಪ್ರಾಯವನ್ನೂ ಕೇಳಲಾಗುತ್ತಿದೆ ಎಂದರು.

ವಿಶ್ವದ ಸುಮಾರು ೧೬೦ ರಾಷ್ಟ್ರಗಳಲ್ಲಿ ಜಿ‌ಎಸ್‌ಟಿ ಪದ್ಧತಿ ಜಾರಿಯಲ್ಲಿದೆ. ಈ ಕಾಯ್ದೆಯಿಂದ ವರ್ತಕರಿಗೆ ಬಹಳಷ್ಟು ಅನುಕೂಲತೆಗಳಿದ್ದು, ಸರಕುಗಳ ದರ ಕಡಿಮೆಯಾಗಲಿದೆ. ಪ್ರಸ್ತುತ ವಿವಿಧ ತೆರಿಗೆಗಳು, ಸೆಸ್‌ಗಳು ಇಲ್ಲವಾಗಲಿದೆ ಎಂದರು.

ಕರ್ನಾಟಕದಲ್ಲಿ ವರ್ತಕರ ತೆರಿಗೆ ಪಾವತಿ ಕ್ರಮ ಉತ್ತಮ ಗುಣಮಟ್ಟದಿಂದ ಕೂಡಿದ್ದು ಸಮರ್ಪಕ ಖಾತೆ ನಿರ್ವಹಣೆಯೂ ನಡೆಯುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಜಿ‌ಎಸ್‌ಟಿ ಅಳವಡಿಸಿದಲ್ಲಿ ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಲಿದೆ ಎಂದು ನಾಣಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್‍ಯಕ್ರಮ ಉದ್ಘಾಟಿಸಿದ ರಾಜ್ಯ ಕರ ಮಂಡಳಿ ಅಧ್ಯಕ್ಷ ಹಾಗೂ ಜಿ‌ಎಸ್‌ಟಿ ಟೀಮ್ ಅಧ್ಯಕ್ಷ ಬಿ. ಟಿ. ಮನೋಹರ್, ರಾಜ್ಯದ ವರ್ತಕರು ಶೇ. ೯೭.೯೩ರಷ್ಟು ಪ್ರಮಾಣದಲ್ಲಿ ತೆರಿಗೆಯನ್ನು ಪಾವತಿಸುತ್ತಿದ್ದು ಅದಕ್ಕೆ ಇಲಾಖೆ ಪ್ರಶಂಸೆ ಲಭಿಸಿದೆ. ಜಿ‌ಎಸ್‌ಟಿ ಬಗ್ಗೆ ಸಲಹೆ ಸೂಚನೆಗಳಿದ್ದಲ್ಲಿ ಈ ತಿಂಗಳ ೨೫ರ ವರೆಗೆ ಅವಕಾಶವಿದೆ. ವರ್ತಕರು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.

ವರ್ತಕರು ತಮ್ಮ ದೈನದಿಂದ ಚಟುವಟಿಕೆಯ ಭಾಗವಾಗಿ ತೆರಿಗೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಡುಪಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ ಅಧ್ಯಕ್ಷತೆ ವಹಿಸಿದ್ದರು. ಯುಸಿಸಿ‌ಐ ಅಧ್ಯಕ್ಷ ರಂಜಿತ್ ಪಿ. ಎಸ್. ಸ್ವಾಗತಿಸಿ, ಛೇಂಬರ್ ಕಾರ್‍ಯದರ್ಶಿ ನಟರಾಜ ಪ್ರಭು ವಂದಿಸಿದರು. ಡಾ. ವಿಜಯೇಂದ್ರ ನಿರೂಪಿಸಿದರು.

No Comments

Leave A Comment