Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕರ್ನಾಟಕ ಸಂಗೀತ ದಿಗ್ಗಜ ಬಾಲಮುರಳಿಕೃಷ್ಣ ವಿಧಿವಶ

balamuralikrishna-4ಚೆನ್ನೈ: ಕರ್ನಾಟಕ ಶಾಸ್ತ್ರೀಯ ಸಂಗೀತ ದಿಗ್ಗಜ ಡಾ.ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ (86) ಚೆನ್ನೈ ನಲ್ಲಿ ವಿಧಿವಶರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಬಾಲಮುರಳಿಕೃಷ್ಣ ಅವರು ನ.22 ರಂದು ಚೆನ್ನೈನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಹಲವು ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕರಾಗಿದ್ದ ಬಾಲಮುರಳಿಕೃಷ್ಣ ಅವರು ಅನಾರೋಗ್ಯದ ಕಾರಣ ಹಲವು ವರ್ಷಗಳಿಂದ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವುದನ್ನು ನಿಲ್ಲಿಸಿದ್ದರು.

ಕನ್ನಡದ ಮುತ್ತಿನ ಹಾರ ಚಿತ್ರದಲ್ಲೂ ಡಾ.ಎಂ ಬಾಲಮುರಳಿ ಕೃಷ್ಣ ಹಿನ್ನೆಲೆ ಗಾಯಕರಾಗಿದ್ದು, ದೇವರು ಹೊಸೆದ ಪ್ರೇಮದ ದಾರ ಹಾಡನ್ನು ಹಾಡಿದ್ದರು. ಉಳಿದಂತೆ ಹಲವು ತೆಲುಗು ಚಲನಚಿತ್ರಗಳಲ್ಲಿ ಬಾಲಮುರಳಿ ಕೃಷ್ಣ ಹಾಡಿದ್ದರು

ಬಾಲಮುರಳಿ ಕೃಷ್ಣ ಅವರು ಜನಿಸಿದ್ದು, 1930 ರ ಜುಲೈ 6 ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸಂಕರ ಗುಪ್ತ ಎಂಬ ಗ್ರಾಮದಲ್ಲಿ. ತಂದೆ, ‘ಪಟ್ಟಾಭಿರಾಮಯ್ಯ’, ಕೊಳಲು, ವೀಣೆ ಪಿಟೀಲು ವಾದಕ. ತಾಯಿ ಸೂರ್ಯಕಾಂತಮ್ಮ ವೀಣಾವಾದಕಿ. ಪೋಷಕರು ನಾಮಕರಣ ಮಾಡಿದ್ದು ಮುರಳಿ ಕೃಷ್ಣ ಎಂದು. ಆದರೆ ಬಾಲಮುರಳಿ ಕೃಷ್ಣ ಅವರ ಊರಿನಲ್ಲಿದ್ದ ಹರಿಕಥಾ ವಿದ್ವಾನ್ ಸತ್ಯನಾರಾಯಣ ಅವರು ಬಾಲಮುರಳಿಕೃಷ್ಣ ಎಂದು ಹೆಸರನ್ನು ನೀಡುತ್ತಾರೆ. ಬಾಲ್ಯದಿಂದಲೇ ಮನೆಯಲ್ಲಿ ಸಂಗೀತಮಯ ವಾತಾವರಣ ಹೊಂದಿದ್ದ ಬಾಲಮುರಳಿಕೃಷ್ಣ ಅವರು 15 ನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು, ನಂತರ ಬೆಳೆದಿದ್ದು ವಿಜಯವಾಡದಲ್ಲಿರುವ ಸೋದರತ್ತೆಯ ಮನೆಯಲ್ಲಿ. ಬಾಲಮುರಳಿಕೃಷ್ಣ ಅವರಿಗೆ ತಂದೆ ಪಟ್ಟಾಭಿರಾಮಯ್ಯನವರೇ ಮೊದಲ ಗುರುಗಳು. ನಂತರ ಸುಸರ್ಲ ದಕ್ಷಿಣಾಮೂರ್ತಿಗಳ ಬಳಿ ಶಿಕ್ಷಣ ಪಡೆದ ಅವರು ಕೆಲವೇ ವರ್ಷಗಳಲ್ಲಿ 72 ಬಗೆಯ ರಾಗಗಳನ್ನು ಹೆಣೆದರು. 1960 ರ ವೇಳೆಗೆ ವಿಜಯವಾಡ ರೇಡಿಯೋ ಕೇಂದ್ರದ, ಬೆಳಗಿನ ಕಾರ್ಯಕ್ರಮದಲ್ಲಿ ‘ಭಕ್ತಿರಂಜಿನಿ,’ ಎಂಬ ‘ಗೀತಮಾಲೆ’ಯನ್ನು ಪ್ರಾರಂಭಿಸಿ, ಅತ್ಯಂತ ಜನಪ್ರಿಯರಾದರು.

ಬಾಲಮುರಳಿಕೃಷ್ಣ ಅವರು ವಾಗ್ಗೇಯಕಾರರಾಗಿಯೂ ಹಲವಾರು ಕೃತಿ ರಚನೆಮಾಡಿದ್ದಾರೆ. ತೆಲುಗು, ತಮಿಳು, ಕನ್ನಡವಲ್ಲದೆ, ಹಲವಾರು ಭಾಷೆಗಳಲ್ಲಿ ಅವರು ಸಂಗೀತ ಕಚೇರಿಗಳನ್ನು ಕೊಟ್ಟಿದ್ದಾರೆ. ಒಟ್ಟು 18,000 ಸಂಗೀತ ಕಛೇರಿಗಳನ್ನು ನೀಡಿದ್ದಾರೆ.

ಬಾಲಮುರಳಿಕೃಷ್ಣ ಅವರಿಗೆ ಸಂದಿರುವ ವಿವಿಧ ಪ್ರಶಸ್ತಿ ಪುರಸ್ಕಾರಗಳು
  • ಆಂಧ್ರ ಪ್ರದೇಶ, ವಿಶ್ವವಿದ್ಯಾಲಯದಿಂದ ಗೌರವ ಪಿ. ಎಚ್. ಡಿ; ಡಿ. ಎಸ್. ಸಿ, ಡಿ. ಲಿಟ್

  • ಕನ್ನಡ ಚಲನ ಚಿತ್ರ “ಹಂಸಗೀತೆ ಗೆ ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ತಿ

  • ಮಧ್ವಾಚಾರ್ಯ, ಚಿತ್ರಕ್ಕೆ ‘ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ 

  • ತಿರುಪತಿ ತಿರುಮಲದೇವಸ್ಥಾನ, ಶೃಂಗೇರಿ ಪೀಠ, ಮತ್ತು ನಂಜನಲ್ಲೂರಿನ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಆಸ್ಥಾನ ವಿದ್ವಾನ್ ಗೌರವ

  • ಪದ್ಮಭೂಷಣ ಪ್ರಶಸ್ತಿ

  • ಪದ್ಮವಿಭೂಷಣ ಪ್ರಶಸ್ತಿ

  • 1978 ರಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿ

  • 1992 ರಲ್ಲಿ ವಿಸ್ಡಮ್ ಮ್ಯಾನ್ ಆಫ್ ದ ಯಿಯರ್, ಪ್ರಶಸ್ತಿ’

  • 1996 ರಲ್ಲಿ ನಾದಬ್ರಹ್ಮ-ನೃತ್ಯಾಲಯ, ಹಾಗೂ ಈಸ್ತೆಟಿಕ್ ಸಂಘದ ಪ್ರಶಸ್ತಿಗೆ ಭಾಜನರಾಗಿದ್ದರು. 

No Comments

Leave A Comment