Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಮುಂಬಯಿ ಶೇರು 279 ಅಂಕಗಳ ನಷ್ಟಕ್ಕೆ ಗುರಿ,ನಿಫ್ಟಿ 8,000 ಕೆಳಮಟ್ಟಕ್ಕೆ

sensex-downಮುಂಬಯಿ : ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 120 ಅಂಕಗಳ ಮುನ್ನಡೆ ಕಂಡಿದ್ದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ, ತಾಸಿನ ಬಳಿಕ ಹಠಾತ್‌ ಕುಸಿತವನ್ನು ಬೆಳಗ್ಗೆ 10.45ರ ಹೊತ್ತಿಗೆ 279.77 ಅಂಕಗಳ ನಷ್ಟಕ್ಕೆ ಗುರಿಯಾಗಿ 25,870.47 ಅಂಕಗಳ ಮಟ್ಟದಲ್ಲಿ ವ್ಯವಹರಿಸುತ್ತಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ, ಮನೋಪ್ರಾಬಲ್ಯದ 8,000 ಅಂಕಗಳ ಮಟ್ಟದಿಂದ ಕೆಳಜಾರಿ 101.35 ಅಂಕಗಳ ನಷ್ಟದೊಂದಿಗೆ 7,972.75 ಅಂಕಗಳ ಮಟ್ಟದಲ್ಲಿ ವ್ಯವಹರಿಸುತ್ತಿತ್ತು.

ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಫ್ಎಂಸಿಜಿ, ಬ್ಯಾಂಕಿಂಗ್‌ ಮತ್ತು ಹಣಕಾಸು ರಂಗದ ಶೇರುಗಳು ಮಾತ್ರವಲ್ಲದೆ ಆಟೋ ಮತ್ತು ಫಾರ್ಮಾ ಶೇರುಗಳು ಕೂಡ ಕುಸಿತಕ್ಕೆ ಗುರಿಯಾದವು.  ಆದರೆ ತೈಲ ಮತ್ತು ಆಯ್ದ ಟೆಕ್ನಾಲಜಿ ಶೇರುಗಳು ತಕ್ಕ ಮಟ್ಟಿಗೆ ತಮ್ಮ ಧಾರಣೆಯನ್ನು ಉಳಿಸಿಕೊಂಡವು.

ಬಿಎಸ್‌ಇ ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಇಂದು ಶೇ.0.8ರ ನಷ್ಟಕ್ಕೆ ಗುರಿಯಾದವು. ವ್ಯವಹಾರಕ್ಕೆ ಗುರಿಯಾದ ಶೇರುಗಳ ಪೈಕಿ 1,091 ಶೇರುಗಳು ಹಿನ್ನಡೆಗೆ ಗುರಿಯಾದರೆ 688 ಶೇರುಗಳು ಮುನ್ನಡೆಯನ್ನು ಕಂಡವು. ನಿಫ್ಟಿ ಆಟೋ, ಬ್ಯಾಂಕ್‌ ಮತ್ತು ರಿಯಲ್ಟಿ ಶೇರುಗಳು ಶೇ.1ರಿಂದ 2ರಷ್ಟು ಕುಸಿತವನ್ನು ಕಂಡವು.

ಸೆನ್ಸೆಕ್ಸ್‌ ಕಳೆದ ಐದು ದಿನಗಳ ವಹಿವಾಟಿನಲ್ಲಿ ಒಟ್ಟು 1,367.44 ಅಂಕಗಳ ನಷ್ಟವನ್ನು ಅನುಭವಿಸಿದೆ.

No Comments

Leave A Comment