Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಇರಾಕ್ ನಲ್ಲಿ ದಾಳಿ: 40 ಮಂದಿ ಉಗ್ರರು, ಮೂವರು ಪೊಲೀಸರು ಸಾವು

iraq-killedಬಾಗ್ದಾದ್: ಉತ್ತರ ಇರಾಕ್ ನಲ್ಲಿ ಸೇನಾ ಪಡೆ ವಸತಿಗಳ ಮೇಲೆ ನಡೆಸಿದ ಹಲವು ದಾಳಿಗಳಲ್ಲಿ ಇಂದು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪಿನ ಕನಿಷ್ಠ 40 ಉಗ್ರಗಾಮಿಗಳು ಮತ್ತು ಮೂವರು ಪೊಲೀಸರು ಹತರಾಗಿದ್ದಾರೆ.
ಇರಾಕ್ ನಲ್ಲಿ ಇಸಿಸ್ ಉಗ್ರಗಾಮಿಗಳು ಪ್ರಾಬಲ್ಯವಿರುವ ಮೊಸುಲ್ ನ ಅಲ್-ಕ್ವಯ್ಯರಾ ಪಟ್ಟಣದಲ್ಲಿ ಇರಾಕ್ ನ ಭದ್ರತಾ ಪಡೆಗಳ ಮೇಲೆ ಗುರಿಯಿಟ್ಟು ಈ ದಾಳಿ ನಡೆದಿದೆ.
ನಿನೆವೆಹ್ ಪ್ರಾಂತ್ಯ ಸಂಸತ್ತಿನ ಭದ್ರತಾ ಸಮಿತಿಯ ಮುಖ್ಯಸ್ಥ ಮೊಹಮ್ಮದ್ ಇಬ್ರಾಹಿಂ ಅಲ್-ಬಯತಿ ಇಎಫ್ಇ ನ್ಯೂಸ್ ಗೆ ಮಾಹಿತಿ ನೀಡಿ, ಸುಮಾರು 200 ಮಂದಿ ಉಗ್ರಗಾಮಿಗಳು ದೋಣಿಗಳಲ್ಲಿ ಟೈಗ್ರಿಸ್ ನದಿ ದಾಟಿ ಅಲ್-ಕ್ಯಯ್ಯರಾದಲ್ಲಿ ದಾಳಿ ನಡೆಸಿದರು ಎಂದು ತಿಳಿಸಿದ್ದಾರೆ.
ಅಲ್-ಬಯತಿ ಅವರ ಪ್ರಕಾರ, ಸುಮಾರು 4 ಗಂಟೆಗಳಿಗೂ ಅಧಿಕ ಕಾಲ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ಮಧ್ಯೆ ಕದನ ನಡೆಯಿತು.
ಕದನದ ಸಂದರ್ಭದಲ್ಲಿ ಹಲವು ಆತ್ಮಹತ್ಯಾ ಬಾಂಬರ್ ಗಳು ಇರಾಕ್ ಭದ್ರತಾ ರೇಖೆಯನ್ನು ದಾಟಿ, ತಡೆಗೋಡೆಯನ್ನು ಮುರಿದು ಬಂದು ಸ್ಫೋಟಕಗಳನ್ನು ಸಿಡಿಸಿದರು. ಮೂವರು ಪೊಲೀಸರು ಮೃತಪಟ್ಟು ಇತರ ಮೂವರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
No Comments

Leave A Comment