Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಆರಂಭಿಕ ಆಘಾತ ಅನುಭವಿಸಿದ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ ಭಾರತ 455ಕ್ಕೆ ಆಲೌಟ್

62861ವಿಶಾಖಪಟ್ಟಣ: ವೈ.ಎಸ್‌. ರಾಜಶೇಖರ ರೆಡ್ಡಿ ಎಸಿಎ–ವಿಡಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ– ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ 129.4 ಓವರ್‌ಗಳಲ್ಲಿ 455 ರನ್‌ ಗಳಿಸಿ ಆಲೌಟ್‌ ಆಗಿದೆ.

ಗುರುವಾರ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ವಿರಾಟ್‌ ಪಡೆ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 90 ಓವರ್‌ಗಳಲ್ಲಿ 4 ವಿಕೆಟ್‌ಗೆ 317ರನ್‌ ಕಲೆ ಹಾಕಿತ್ತು.

ಶುಕ್ರವಾರ ಎರಡನೇ ದಿನದಾಟ ಆರಂಭಿಸಿದ ಕೊಹ್ಲಿ 167 ರನ್‌ ಗಳಿಸಿ ಮೊಹಿನ್‌ ಅಲಿಗೆ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಆರ್‌. ಅಶ್ವಿನ್‌ ತಕ್ಕ ಮಟ್ಟಿನ ಹೋರಾಟ ನಡೆಸಿದರು. ಭಾರತ 129.4 ಓವರ್‌ಗಳಲ್ಲಿ 455 ರನ್‌ ಗಳಿಸಿ ಆಲೌಟ್‌ ಆಗಿದೆ.

ಭಾರತ ಮೊದಲ ಇನಿಂಗ್ಸ್‌ 455 ಕ್ಕೆ ಆಲೌಟ್ (129.4 ಓವರ್‌ಗಳಲ್ಲಿ)
ಮುರಳಿ ವಿಜಯ್‌ 20, ಕೆ.ಎಲ್‌. ರಾಹುಲ್‌ 00, ಚೇತೇಶ್ವರ ಪೂಜಾರ 119, ವಿರಾಟ್‌ ಕೊಹ್ಲಿ 167, ಅಜಿಂಕ್ಯ ರಹಾನೆ 23, ಆರ್‌. ಅಶ್ವಿನ್‌ ಬ್ಯಾಟಿಂಗ್‌ 58, ಸಹಾ 3, ಜಡೇಜಾ 0, ಜಯಂತ್‌ ಯಾದವ್‌ 35, ಉಮೇಶ್‌ ಯಾದವ್‌ 13, ಶಮಿ ಬ್ಯಾಟಿಂಗ್‌ 7.

ಇಂಗ್ಲೆಂಡ್‌ ಪರ: ಜೇಮ್ಸ್‌ ಆ್ಯಂಡರ್‌ಸನ್‌ 3, ಸ್ಟುವರ್ಟ್‌ ಬ್ರಾಡ್‌ 1, ಬೆನ್‌ ಸ್ಟೋಕ್ಸ್‌ 1, ಆದಿಲ್‌ ರಶೀದ್‌ 2, ಮೊಹಿನ್‌ ಅಲಿ 3 ವಿಕೆಟ್‌ ಪಡೆದು ಮಿಂಚಿದ್ದಾರೆ.

ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ 43 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 93 ರನ್‌ ಗಳಿಸಿದೆ.
ಅಲಸ್ಟೇರ್‌ ಕುಕ್‌ 2, ಹಸೀಬ್‌ ಹಮೀದ್‌ 13, ಜೊ ರೂಟ್‌ 53, ಬೆನ್‌ ಡಕೇಟ್ 5, ಮೊಹಿನ್‌ ಅಲಿ 1, ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ 3, ಜಾನಿ ಬೇಸ್ಟೋವ್‌ ಬ್ಯಾಟಿಂಗ್‌ 5 ರನ್‌ ಗಳಿಸಿದ್ದಾರೆ.

No Comments

Leave A Comment