Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸಿಗೆ ಗ್ರಂಥಾಲಯ ಬಳಸಿಕೊಳ್ಳಿ : ಪ್ರಮೋದ್

p4ಉಡುಪಿ: ಐ‌ಎ‌ಎಸ್, ಕೆ‌ಎ‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ವಿದ್ಯಾರ್ಥಿಗಳು ಗ್ರಂಥಾಲಯಗಳಲ್ಲಿನ ಪುಸ್ತಕಗಳ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಶುಕ್ರವಾರ ಜಿಲ್ಲಾ ಹಾಗೂ ನಗರಕೇಂದ್ರ ಗ್ರಂಥಾಲಯದಿಂದ ಬೋರ್ಡ್ ಹೈಸ್ಕೂಲು ಸಭಾಂಗಣದಲ್ಲಿ ನಡೆದ ೨೦೧೬ ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಐ‌ಎ‌ಎಸ್, ಕೆ‌ಎ‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪುಸ್ತಕಗಳು, ಮಾಹಿತಿಗಳ ಕೊರತೆಯಿಂದಾಗಿ ಜಿಲ್ಲೆಯ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಅಜ್ಜರಕಾಡು ಪುರಭವನದ ಪಕ್ಕದಲ್ಲಿ ಸುಮಾರು ೫ ಕೋ.ರೂ.ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್ ಲೈಬ್ರೇರಿಯನ್ನು ನಿರ್ಮಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರ ಮೊದಲಾದ ವಿಭಾಗವನ್ನು ತೆರೆಯಲಾಗುವುದು, ಇದಕ್ಕಾಗಿ ಈಗಾಗಲೇ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ೧ ಕೋ.ರೂ.ಮಂಜೂರಾಗಿದ್ದು, ರಾಜ್ಯಸಭೆ ಸದಸ್ಯ ಆಸ್ಕರ್ ಫೆರ್ನಾಂಡಿಸ್ ೧ಕೋ.ರೂ.ನೀಡುವ ಭರವಸೆ ನೀಡಿದ್ದಾರೆ. ಉಳಿದ ೩ ಕೋ.ರೂ.ಅನುದಾನವನ್ನು ರಾಜ್ಯ ಸರಕಾರದಿಂದ ಮಂಜೂರು ಮಾಡಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

p2

p3

p5

ರಾಜ್ಯ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಎಸ್. ಹೊಸಮನಿ ಅವರು ಮಾತನಾಡಿ ಗ್ರಂಥಾಲಯಗಳಿಗೆ ಓದುಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದೆ. ಗ್ರಂಥಾಲಯದ ಸಿಬ್ಬಂದಿಗಳಲ್ಲಿ ಇನ್ನಷ್ಟು ಸೇವಾಪರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ರಾಜ್ಯದ ವಿವಿಧ ಗ್ರಂಥಾಲಯದ ೬೭ ಮಂದಿ ಸಿಬ್ಬಂದಿಗಳಿಗೆ ಈ ಬಾರಿಯ ಗ್ರಂಥಾಲಯ ಸೇವಾ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನಗರಕೇಂದ್ರ ಗ್ರಂಥಾಲಯದ ಪ್ರೇಮ ಎಂ. ಹಾಗೂ ಜಿಲ್ಲಾಕೇಂದ್ರ ಗ್ರಂಥಾಲಯದ ಶಕುಂತಳ ಕುಂದರ್ ಅವರಿಗೆ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅತೀ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಗ್ರಾಪಂ ಗ್ರಂಥಾಲಯದ ಮೇಲ್ವಿಚಾರಕರುಗಳಾದ ರತ್ನಾವತಿ ಹಾರಾಡಿ, ಸುಧಾ ಪಡುವರಿ, ಶಶಿಕಲಾ ಬೆಳ್ಮಣ್ ಅವರಿಗೆ ಗೌರವಾರ್ಪಣೆ ನಡೆಯಿತು.

ಇದೇ ಸಂದರ್ಭದಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅತೀ ಹೆಚ್ಚು ಸದಸ್ಯರನ್ನು ನೋಂದಾಯಿಸಿದ ಹೆಬ್ರಿ ಸರಕಾರಿ ಪಿಯು ಕಾಲೇಜನ್ನು ಅಭಿನಂದಿಸಲಾಯಿತು.

ಮಲ್ಪೆ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನರಸಿಂಹ ಮೂರ್ತಿ, ನಗರಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಜಗದೀಶ ರಾವ್, ಬೆಂಗಳೂರು ಗ್ರಂಥಾಲಯದ ಉಪನಿರ್ದೇಶಕ ವೆಂಕಟೇಶ್ ಸಿ.ಜೆ. ಉಪಸ್ಥಿತರಿದ್ದರು.

ಜಿಲ್ಲಾ ಹಾಗೂ ನಗರಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ, ಸ್ವಾಗತಿಸಿ, ನಗರಕೇಂದ್ರ ಗ್ರಂಥಾಲಯದ ಪ್ರೇಮ ಎಂ.ನಿರೂಪಿಸಿದರು.

ಗ್ರಂಥಪಾಲಕಿ ಜಯಶ್ರೀ ಎಂ., ಜಗದೀಶ ಭಟ್ ಕೆ, ವನಿತಾ ಕೆ, ಪರಿಚಯಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಶಕುಂತಳ ಕುಂದರ್ ವಂದಿಸಿದರು.
ಈ ಕಾರ್ಯಕ್ರಮಕ್ಕೂ ಮುಂಚೆ ನಗರಕೇಂದ್ರ ಗ್ರಂಥಾಲಯದಲ್ಲಿ ನಡೆದ ಪುಸ್ತಕ ಪ್ರದರ್ಶನವನ್ನು ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನಡೆದ ಓದಿನೆಡೆಗೆ ನಮ್ಮ ನಡೆ ವಿದ್ಯಾರ್ಥಿಗಳ ಜಾಥಾವನ್ನು ಜಿಪಂ ಸಿ‌ಇ‌ಓ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಿದರು.

No Comments

Leave A Comment