Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಶೋಭಾ ಸುರೇಶ್ ಕಕ್ಕುಂಜೆ

shobhaಉಡುಪಿ: ಉಡುಪಿ ನಗರಸಭೆಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಉಡುಪಿ ನಗರಸಭೆ ಕಕ್ಕುಂಜೆ ವಾರ್ಡಿನ ಸದಸ್ಯರಾದ ಶೋಭಾ ಸುರೇಶ್ ಕಕ್ಕುಂಜೆ ಇವರು ಉಡುಪಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.

ಸಭೆಯ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ವಹಿಸಿದ್ದರು. ನಗರಸಭಾ ಪೌರಾಯುಕ್ತ ಡಿ ಮಂಜುನಾಥಯ್ಯ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸ್ಥಾಯಿ ಸಮಿತಿಯ ಸದಸ್ಯರಾದ ಶಶಿರಾಜ್ ಕುಂದರ್, ಲತಾ ಆನಂದ ಶೇರಿಗಾರ್, ಶೋಭಾ

ಸುರೇಶ್, ಶಾಂತಾರಾಮ್ ಸಾಲ್ವಂಕಾರ್, ಸೆಲಿನ್ ಕರ್ಕಡ, ಹಾರ್ಮಿಸ್ ನೊರೊನ್ಹಾ, ಹೇಮಲತಾ ಹಿಲಾರಿ ಜತ್ತನ್ನ ಸಭೆಯಲ್ಲಿ ಉಪಸ್ಥಿತರಿದ್ದರು.

ಸ್ಥಾಯಿ ಸಮಿತಿಯ ಸದಸ್ಯರಾದ ಸೆಲಿನ್ ಕರ್ಕಡ ಇವರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಶೋಭಾ ಸುರೇಶ್ ಕಕ್ಕುಂಜೆ ಇವರ ಹೆಸರನ್ನು ಸೂಚಿಸಿದರು. ಸದಸ್ಯರಾದ ಶಾಂತಾರಾಮ್ ಸಾಲ್ವಂಕಾರ್ ಇವರು ಅನುಮೋದಿಸಿದರು. ಶೋಭಾ ಸುರೇಶ್ ಕಕ್ಕುಂಜೆ ಇವರು ಉಡುಪಿ ನಗರಸಭೆಯ ೨೦೧೬-೧೭ನೇ ಸಾಲಿನ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು.ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿಕಟಪೂರ್ವ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಭಟ್, ಪೌರಾಯುಕ್ತರು ಹಾಗೂ ನಗರಸಭಾ ಸದಸ್ಯರಾದ ಯುವರಾಜ್ ಪಿ, ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಪ್ರಶಾಂತ್ ಅಮೀನ್ ಕೊಳ, ಚಂದ್ರಕಾಂತ್, ನಾರಾಯಣ ಪಿ ಕುಂದರ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

No Comments

Leave A Comment