Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ನೋಟು ಬ್ಯಾನ್ ಎಫೆಕ್ಟ್; ಬೆಂಗಳೂರು, ಮಂಗಳೂರಿನಲ್ಲಿ ಐಟಿ ದಾಳಿ

black-money_650x400ಬೆಂಗಳೂರು/ಮಂಗಳೂರು:500, 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ದೇಶಾದ್ಯಂತ ನಿಷೇಧಿಸಿದ್ದ ಬೆನ್ನಲ್ಲೇ ಬೆಂಗಳೂರು, ಮಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಂಡಿರುವುದಾಗಿ ವರದಿಯೊಂದು ಹೇಳಿದೆ.

ಬೆಂಗಳೂರಿನ ಯಲಹಂಕದ ಫೈನಾಶ್ಶಿಯರ್ ಮನೆ, ಪ್ರತಿಷ್ಠಿತ ಜ್ಯುವೆಲ್ಲರಿ ಕಂಪನಿಯ 3 ಶಾಖೆ, ಕೆಂಪೇಗೌಡ ವಿಮಾನ ನಿಲ್ದಾಣದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ಖಾಸಗಿ ಟಿವಿ ಚಾನೆಲ್ ವೊಂದರ ವರದಿ ತಿಳಿಸಿದೆ.

ಫೈನಾಶ್ಶಿಯರ್ ಮನೆಯಲ್ಲಿ 16 ಕೋಟಿ ಜಪ್ತಿ, ಅತಿ ಹೆಚ್ಚಿನ ಬೆಲೆಗೆ ಚಿನ್ನಾಭರಣ ಮಾರಾಟ ಮಾಡುತ್ತಿದ್ದ 3 ಜ್ಯುವೆಲ್ಲರಿ ಶಾಪ್ ಮೇಲೆ ದಾಳಿ ನಡೆಸಲಾಗಿದೆ.ಚಿನ್ನದ ಬಿಸ್ಕತ್ ಗಳನ್ನು ಕೊಂಡೊಯ್ಯುತ್ತಿದ್ದ(100 ಗ್ರಾಂನ 2 ಚಿನ್ನದ ಬಿಸ್ಕತ್) ವ್ಯಕ್ತಿಯನ್ನು ಬೆಂಗಳೂರಿನ( ಭುವನೇಶ್ವರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ )ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಮಂಗಳೂರಿನಲ್ಲಿಯೂ ಸಹ 5 ಕೋ ಆಪರೇಟಿವ್ ಬ್ಯಾಂಕ್ ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿ ವಿವರಿಸಿದೆ. ಅಕ್ರವಾಗಿ ಹಣ ವಿನಿಯಮ ಮಾಡುತ್ತಿದ್ದ ಕೋ ಆಪರೇಟಿವ್ ಬ್ಯಾಂಕ್ ಗಳ ಮೇಲೆ ದಾಳಿ ನಡೆಸಿದ್ದು, ಸುಮಾರು 8 ಕೋಟಿ ರೂಪಾಯಿಯಷ್ಟು ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

No Comments

Leave A Comment