Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಟ್ರಂಪ್ ಸಂಪುಟದಲ್ಲಿ ಭಾರತೀಯ ಮೂಲದ ನಿಮ್ರತಾ ನಿಕ್ಕಿ ಹ್ಯಾಲಿಗೆ ಸ್ಥಾನ?

nikki-haley-2ನ್ಯೂಯಾರ್ಕ್: ಇತ್ತೀಚೆಗಷ್ಟೇ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡೊನಾಲ್ಡ್ ಟ್ರಂಪ್ ಅವರ ತಂಡ ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದು, ಟ್ರಂಪ್ ಸಂಪುಟದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚಿದೆ.

ಅಮೆರಿಕದ ದಕ್ಷಿಣ ಕರೊಲಿನದ ಗೌರ್ನರ್ ಆಗಿರುವ ಭಾರತೀಯ ಮೂಲದ ನಿಕ್ಕಿ ಹ್ಯಾಲಿ ಅವರು ಟ್ರಂಪ್ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಹ್ಯಾಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿ ಮಾತನಾಡಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ನಿಕ್ಕಿ ಹ್ಯಾಲಿ ಅವರಿಗೆ ಅಮೆರಿಕದ ವಿದೇಶಾಂಗ ಸಚಿವ ಸ್ಥಾನ ಅಥವಾ ವಾಣಿಜ್ಯ ಸಚಿವಾಲಯದ ಹೊಣೆಗಾರಿಕೆ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹ್ಯಾಲಿ ಅವರ ಪೋಷಕರು ಅಮೆರಿಕಾಗೆ ವಲಸೆ ಹೋದ ಭಾರತೀಯರಾಗಿದ್ದು, ಪ್ರಾರಂಭಿಕ ಚುನಾವಣೆಗಳಲ್ಲಿ ಹ್ಯಾಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದರು, ನಂತರ ಡೊನಾಲ್ಡ್ ಟ್ರಂಪ್ ಪರವಾಗಿ ಮತಚಲಾವಣೆ ಮಾಡಿದ್ದರು. ರಿಪಬ್ಲಿಕನ್ ಪಕ್ಷದ ಗೌರ್ನರ್ ಗಳ ಒಕ್ಕೂಟದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಬೆನ್ನಲ್ಲೇ ನಿಕ್ಕಿ ಹ್ಯಾಲಿ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್- ನಿಕ್ಕಿ ಹ್ಯಾಲಿ ಸೌಹಾರ್ದಯುತ ಮಾತುಕತೆ ನಡೆಸಿದ್ದು, ಟ್ರಂಪ್ ಅವಧಿಯಲ್ಲಿ ಉತ್ತಮ ಆಡಳಿತವನ್ನು ಎದುರುನೋಡುತ್ತಿರುವುದಾಗಿ ನಿಕ್ಕಿ ಹ್ಯಾಲಿ ಹೇಳಿದ್ದಾರೆ ಎಂದು ಹ್ಯಾಲಿ ಅವರ ಕಾರ್ಯದರ್ಶಿ ತಿಳಿಸಿದ್ದಾರೆ. ನಿಮ್ರತಾ ನಿಕ್ಕಿ ಹ್ಯಾಲಿ ದಕ್ಷಿಣ ಕರೊಲಿನಾದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮೊದಲ ಗೌರ್ನರ್ ಆಗಿದ್ದು, ಅಮೆರಿಕದ ಅಧ್ಯಕ್ಷರ ಸಂಪುಟದಲ್ಲಿ ಸ್ಥಾನ ಪಡೆಯಲಿರುವ ಎರಡನೇ ಭಾರತೀಯ ಮೂಲದ ಅಮೆರಿಕಾದ ಪ್ರಜೆಯಾಗಿದ್ದಾರೆ.

No Comments

Leave A Comment