Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

Shocking : ಪ್ಯಾರಿಸ್‌ನಲ್ಲಿ ನಟಿ ಮಲ್ಲಿಕಾ ಶೇರಾವತ್‌ ಮೇಲೆ ಹಲ್ಲೆ

mallika-sherawat-600ಹೊಸದಿಲ್ಲಿ : ಬಾಲಿವುಡ್‌ ನ ಬೋಲ್ಡ್‌  ಆ್ಯಂಡ್‌ ಬ್ಯೂಟಿಫ‌ುಲ್‌ ನಟಿ ಮಲ್ಲಿಕಾ ಶೇರಾವತ್‌ ಮೇಲೆ ಪ್ಯಾರಿಸ್‌ ನಲ್ಲಿನ ಆಕೆಯ ಫ್ಲ್ಯಾಟಿಗೆ ನುಗ್ಗಿದ ಮುಖವಾಡ ಧರಿಸಿಕೊಂಡ ಆಗಂತುಕರು ಅಶ್ರುವಾಯು ದಾಳಿ ನಡೆಸಿ ಆಕೆಯನ್ನು ಹೊಡೆದು ಹಲ್ಲೆಗೈದರೆಂದು ವರದಿಗಳು ತಿಳಿಸಿವೆ.

ಈ ಘಟನೆ ನ.12ರ ಶುಕ್ರವಾರ ನಡೆದಿದ್ದು ಈಗ ತಡವಾಗಿ ವರದಿಯಾಗಿದೆ. ಮಲ್ಲಿಕಾ ಶೇರಾವತ್‌ ತನ್ನ ಫ್ರೆಂಚ್‌ ಬಾಯ್‌ ಫ್ರೆಂಡ್‌ ಜತೆಗೆ ತನ್ನ ಅಪಾರ್ಟ್‌ಮೆಂಟ್‌ನಲ್ಲಿ  ರಾತ್ರಿ 9.30ರ ಹೊತ್ತಿಗೆ ವಿ-ರಮಿಸುತ್ತಿದ್ದಾಗ ಮುಖವಾಡ ಧರಿಸಿದ ಆಗಂತುಕರು ಒಮ್ಮೆಲೆ ಒಳ ನುಗ್ಗಿ ಬಂದು ಹಲ್ಲೆ ನಡೆಸಿದರೆಂದು ವರದಿಗಳು ತಿಳಿಸಿವೆ.

‘ಲೀ ಪ್ಯಾರೀಸಿಯನ್‌’ ದೈನಿಕವನ್ನು ಉಲ್ಲೇಖೀಸಿ ಈ ಘಟನೆಯನ್ನು ಡೇಲಿ ಮೇಲ್‌ ವರದಿ ಮಾಡಿದ. ಮಲ್ಲಿಕಾ ತನ್ನ ಬಾಯ್‌ ಫ್ರೆಂಡ್‌ ಜತೆಗೆ ರಾತ್ರಿಯ ವೇಳೆ ಅಪಾರ್ಟ್‌ಮೆಂಟಿನಲ್ಲಿ  ಇದ್ದಾಗ ಮುಖವಾಡ ಧರಿಸಿದ್ದ ದಾಳಿಕೋರರು ಒಳ ನುಗ್ಗಿ ಬಂದು ಏಕಾಏಕಿ ಅಶ್ರುವಾಯು ಪ್ರಯೋಗಿಸಿ, ಮಾತೇ ಆಡದೇ, ಅವರಿಬ್ಬರ ಮೇಲೂ ಹಲ್ಲೆ ನಡೆಸಿದರು.

ಹಲ್ಲೆ  ಬಳಿಕ ದಾಳಿಕೋರರು ಅಪಾರ್ಟ್‌ಮೆಂಟಿನಿಂದ ಪರಾರಿಯಾದರು. ಮಲ್ಲಿಕಾ ಶೇರಾವತ್‌ ಮತ್ತು ಆಕೆಯ ಬಾಯ್‌ ಫ್ರೆಂಡ್‌ ಈ ಅಛಾನಕ್‌ ಘಟನೆಯಿಂದ ತೀವ್ರವಾಗಿ ಆಘಾತಗೊಂಡು ಎಮರ್ಜೆನ್ಸಿ ಸೇವೆಗಾಗಿ ಫೋನ್‌ ಕರೆ ಮಾಡಿದರು ಎಂದು ಡೇಲಿ ಮೇಲ್‌ ವರದಿ ಹೇಳಿದೆ.

ಕಾಕತಾಳೀಯವೆಂಬಂತೆ ಈ ಅತ್ಯಂತ ಆಘಾತಕಾರಿ ಘಟನೆಯು ಈಚೆಗೆ ಕಿಮ್‌ ಕರ್ದಾಶಿಯಾನ್‌ ಮೇಲೆ ಇದೇ ರೀತಿ ನಡೆದಿದ್ದ  ಘಟನೆಯನ್ನು ಬಹುವಾಗಿ ಹೋಲುವಂತಿದೆ. ಕಿಮ್‌ ಕರ್ದಾಶಿಯನ್‌ ಳನ್ನು ದುಷ್ಕರ್ಮಿಗಳು ಆಕೆಯ ಪ್ಯಾರಿಸ್‌ ಅಪಾರ್ಟ್‌ಮೆಂಟ್‌ನಲ್ಲಿ ಗನ್‌ ಪಾಯಿಂಟ್‌ ಮೇಲೆ ಲೂಟಿ ಗೈದಿದ್ದರು. ಮಲ್ಲಿಕಾ ಶೇರಾವತ್‌ ಅಪಾರ್ಟ್‌ಮೆಂಟ್‌, ಕಿಮ್‌ ಅಪಾರ್ಟ್‌ಮೆಂಟ್‌ಗೆ ಸನಿಹದಲ್ಲೇ ಇದೆ.

ಮಲ್ಲಿಕಾ ಮತ್ತಾಕೆಯ ಬಾಯ್‌ ಫ್ರೆಂಡ್‌ ಮೇಲೆ ನಡೆದಿರುವ ಈ ಹಲ್ಲೆಯ ಬಗ್ಗೆ ಕ್ರಿಮಿನಲ್‌ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

No Comments

Leave A Comment