Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ   <>   ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ರಾಯಚೂರಿನ ಸಾಹಿತ್ಯ ಸಮ್ಮೇಳನಕ್ಕೆ 2 ಕೋಟಿ ರೂ. ಬಿಡುಗಡೆ

baraguru-17-11ಬೆಂಗಳೂರು: ರಾಯಚೂರಿನಲ್ಲಿ ಡಿ. 2ರಿಂದ 4ರವರೆಗೆ ನಡೆಯಲಿರುವ 82ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರಕಾರ 2 ಕೋಟಿ ರೂ. ಬಿಡುಗಡೆ ಮಾಡಿದ್ದು, ಇನ್ನೂ 2 ಕೋಟಿ ರೂ. ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಮನುಬಳಿಗಾರ್‌ ಹೇಳಿದ್ದಾರೆ. ಸಾಹಿತ್ಯ ಸಮ್ಮೇಳನದ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಅವರು, 500 ಮತ್ತು 1,000 ರೂ.ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಮ್ಮೇಳನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು ಎಂಬ ಕಾರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಪುಸ್ತಕ ಪ್ರಿಯರಿಗೆ ತೊಂದರೆಯಾಗದಿರಲೆಂದು ಪುಸ್ತಕಗಳ ಮಳಿಗೆಗಳ ಮಾಲಕರಿಗೆ ಸ್ಕೈಪಿಂಗ್‌ ಮಶೀನ್‌ ತರುವಂತೆ ಮನವಿ ಮಾಡಲಾಗಿದೆ. ಸಮ್ಮೇಳನ ನಡೆಯುವ ತಾಣದಲ್ಲಿ ಹಣಕಾಸಿನ ಸಮಸ್ಯೆ ಕಾಡದಿರಲೆಂದು ಸಂಚಾರಿ ಎಟಿಎಂಗಳನ್ನು ಸ್ಥಾಪಿಸುವಂತೆ ಬ್ಯಾಂಕ್‌ಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಸ್ಟೇಟ್‌ಬ್ಯಾಂಕ್‌ ಆಫ್ಮೈ ಸೂರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಉಳಿದ ಕೆಲವು ಬ್ಯಾಂಕುಗಳು ಕೂಡ ಆಸಕ್ತಿ ತೋರಿಸಿವೆ ಎಂದು ತಿಳಿಸಿದರು.

ಊಟ ವ್ಯವಸ್ಥೆ
ಮೂರು ದಿನ ನಡೆಯಲಿರುವ ಸಮ್ಮೇಳನದಲ್ಲಿ ಮೂರುದಿನ ಬೆಳಗ್ಗೆ ತಿಂಡಿ, ದಿನಕ್ಕೆ ಎರಡು ಹೊತ್ತು ಊಟದ ವ್ಯವಸ್ಥೆ ಮಾಡಲಾಗಿದೆ. ಒಂದು ಹೊತ್ತಿಗೆ 40ರಿಂದ 50 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಸಿಸಿ ಟಿವಿ ಕೆಮರಾ
ಸಮ್ಮೇಳನ ನಡೆಯುವ ಆರು ಎಕ್ರೆ ಪ್ರದೇಶದಲ್ಲಿ ಯಾವುದೇ ಭದ್ರತಾ ಲೋಪ ಆಗದಂತೆ ಎಚ್ಚರ ವಹಿಸಲಾಗಿದೆ. ಇದಕ್ಕಾಗಿ ಸಭಾಂಗಣದ ಸುತ್ತಮುತ್ತ 15ಕ್ಕೂ ಹೆಚ್ಚು ಸಿ.ಸಿ. ಟಿವಿ ಕೆಮರಾಗಳನ್ನು ಅಳವಡಿಸಲಾಗುವುದು. ವಿಡಿಯೋ ಚಿತ್ರೀಕರಣ ಮಾಡಲು ಇಬ್ಬರು ವಿಡಿಯೋಗ್ರಾಫ‌ರ್‌ಗಳನ್ನು ನೇಮಿಸಲಾಗುವುದು ಎಂದರು.

ಬರಗೂರುಗೆ ಆಹ್ವಾನ 
ಅಖೀಲ ಭಾರತ 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಡಾ| ಬರಗೂರು ರಾಮಚಂದ್ರಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಗುರುವಾರ ಬೆಳಗ್ಗೆ ಜೆ.ಪಿ. ನಗರದ ಬರಗೂರು ರಾಮಚಂದ್ರಪ್ಪ ಅವರ ನಿವಾಸದಲ್ಲಿ ಅಧಿಕೃತ ಆಹ್ವಾನ ನೀಡಲಾಯಿತು.

No Comments

Leave A Comment