Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಶೀಘ್ರದಲ್ಲೆ ಪೆಟ್ರೋಲ್‌ ಬಂಕ್‌ಗಳಲ್ಲಿ 2,000 ವರೆಗೆ ನಗದು ವಿತರಣೆಗೆ ವ್ಯವಸ್ಥೆ

855775ನವದೆಹಲಿ: ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸುವ ಮೂಲಕ ರಾಷ್ಟ್ರದ ಆಯ್ದ ಪೆಟ್ರೋಲ್‌ ಬಂಕ್‌ಗಳಲ್ಲಿ 2,000 ವರೆಗೆ ನಗದು ವಿತರಿಸುವ ವ್ಯವಸ್ಥೆಯನ್ನು ಶೀಘ್ರದಲ್ಲೆ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

500, 1,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಉಂಟಾಗಿರುವ ತೊಂದರೆ ನಿವಾರಣೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರಾದ್ಯಂತ ಆಯ್ದ 2,500 ಬಂಕ್‌ಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಿದೆ. ಗ್ರಾಹಕರು ತಮ್ಮ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸಿ(ಸ್ವೈಪ್‌ ಮಾಡಿ) ದಿನವೊಂದಕ್ಕೆ 2,000 ವರೆಗೆ ನಗದು ಪಡೆದುಕೊಳ್ಳಬಹುದು. ಈ ಕುರಿತು ಕೇಂದ್ರ ಸರ್ಕಾರಿ ಸ್ವಾಮ್ಯದ ದೂರದರ್ಶನ ನ್ಯೂಸ್‌ ಟ್ವೀಟ್‌ ಮಾಡಿದೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಪಿಒಎಸ್‌ ಸಾಧನದ ಮೂಲಕ ವಿತರಣೆ ವ್ಯವಸ್ಥೆ ಮಾಡಲಿದೆ.

No Comments

Leave A Comment