Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

“ತತ್ವಚಂದ್ರಿಕಾ” ವ್ಯಾಖ್ಯಾನ ಗ್ರಂಥ ವನ್ನು ಲೋಕಾರ್ಪಣೆ

dsc06295ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಮಹರ್ಷಿ ವೇದವ್ಯಾಸರ ಬ್ರಹ್ಮಸೂತ್ರಗಳಿಗೆ ಶ್ರೀಮಧ್ವಾಚಾರ್ಯರು ರಚಿಸಿದ್ದ ವ್ಯಾಖ್ಯಾನಗಳಿಗೆ ಅವರ ಶಿಷ್ಯ ತ್ರಿವಿಕ್ರಮ ಪಂಡಿತಾಚಾರ್ಯರು ಬರೆದ “ತತ್ವಪ್ರದೀಪ “-  ಅದಕ್ಕೆ ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯರು ಬರೆದ “ತತ್ವಚಂದ್ರಿಕಾ” ವ್ಯಾಖ್ಯಾನ  ಗ್ರಂಥ ವನ್ನು ಲೋಕಾರ್ಪಣೆ ಗೊಳಿಸಿ   ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು  ವಿದ್ವಾಂಸ ಬನ್ನಂಜೆ  ಆಚಾರ್ಯರು ಇನ್ನು ಮುಂದೆ ಬನ್ನಂಜೆ ಗೋವಿಂದ ” ಪಂಡಿತಾಚಾರ್ಯ”ರು ಎಂದು ಬಿರುದು ಕೊಟ್ಟು ಅನುಗ್ರಹಿಸಿದರು .

ಇಂತಹ ಮಹಾನ್ ಸಾಧನೆ ಮಾಡಿರುವುದಕ್ಕೆ ಬನ್ನಂಜೆ ಆಚಾರ್ಯರ ಬಗ್ಗೆ ಹೆಮ್ಮೆಯಾಗಿದೆ ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರು ಮೆಚ್ಚುಗೆ ವ್ಯಕ್ತ ಪಡಿಸಿದರು  ಈ ಕಾರ್ಯಕ್ರಮದಲ್ಲಿ ಡಿ.ಪ್ರಹ್ಲಾದಾಚಾರ್ಯ, ತ್ರಿವಿಕ್ರಮ ಪಂಡಿತಾಚಾರ್ಯರ ಪರಂಪರೆಯ ಕಾಸರಗೋಡಿನ ಶಿವ ಪ್ರಸಾದ್ ಮತ್ತು ಮಧ್ವಾಚಾರ್ಯರ ವಿದ್ವತ್ತಿಗೆ ಸೂಕ್ತ ರಕ್ಷಣೆ ಮತ್ತು ಮನ್ನಣೆ ನೀಡಿ ಶಿಷ್ಯತ್ವ ಸ್ವೀಕರಿಸಿದ್ದ ಮಾಯಿಪ್ಪಾಡಿ ಅರಸ ಇಮ್ಮಡಿ ಜಯಸಿಂಹನ ವಂಶಸ್ಥರಾದ ರಾಮಂತರರಸು ರಾಜಮಾರ್ತಾಂಡ ವರ್ಮ ಉಪಸ್ಥಿತರಿದ್ದ ರು.

No Comments

Leave A Comment