Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮೈಸೂರು ಮೂಲದ ಸಂಸ್ಥೆಯಿಂದ 30 ಸಾವಿರ ಬಾಟಲ್ ಅಳಿಸಲಾಗದ ಶಾಯಿ ಪೂರೈಕೆ

mysore-inkಮೈಸೂರು: ನೋಟು ವಿನಿಮಯ ಮಾಡಿಕೊಳ್ಳಲು ಬರುವ ಗ್ರಾಹಕರಿಗೆ ಅಳಿಸಲಾಗದ ಶಾಯಿ ಗುರುತುಗಳನ್ನು ಹಾಕುವಂತೆ ಕೇಂದ್ರ ಸರ್ಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಿರುವುದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಇನ್ನು ಆರು ದಿನಗಳಲ್ಲಿ ದೇಶಾದ್ಯಂತ 28 ಬ್ಯಾಂಕುಗಳಿಗೆ ಮೂರೂವರೆ ಕೋಟಿ ರೂಪಾಯಿ ಬೆಲೆಯ 2.96 ಲಕ್ಷ ಬಾಟಲ್ ಅಳಿಸಲಾಗದ ಶಾಯಿ ವಿತರಿಸಲು ಹೇಳಿದೆ.
1962ರಿಂದ ಈ ಶಾಯಿ ಉತ್ಪಾದಿಸುತ್ತಿರುವ ಅಧಿಕೃತ ಕಂಪೆನಿಯಾದ ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ (ಎಂವೈಪಿವಿಎಲ್) ಕಾರ್ಯಪ್ರವೃತ್ತವಾಗಿದ್ದು, ನಿನ್ನೆಯವರೆಗೆ 30 ಸಾವಿರ ಶಾಯಿ ಬಾಟಲ್ ಗಳನ್ನು ವಿತರಿಸಿದೆ.
5ಸಿಸಿ ಬಾಟಲ್ ಗಳಿಂದ 500 ಮಂದಿ ಗ್ರಾಹಕರ ಕೈಗೆ ಶಾಯಿಗಳನ್ನು ಹಚ್ಚಬಹುದಾಗಿದ್ದು ಬಲಗೈಯ ತೋರುಬೆರಳಿಗೆ ಹಚ್ಚಲಾಗುತ್ತದೆ ಮತ್ತು 30 ದಿನಗಳವರೆಗೆ ಇರುತ್ತದೆ.
ಆರ್ ಬಿಐಯ ಬೇಡಿಕೆಯನ್ನು ಈಡೇರಿಸಲು ನೌಕರರು ಹಗಲು ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ ಆರ್ ಬಿಐ ಮೂಲಕ ಬ್ಯಾಂಕುಗಳಿಗೆ ಶಾಯಿಗಳನ್ನು ವಿತರಿಸುತ್ತಿದೆ ಎಂದರು ಎಂವೈಪಿವಿಎಲ್ ಅಧ್ಯಕ್ಷ ಹೆಚ್.ಎ.ವೆಂಕಟೇಶ್.
ಖಾಸಗಿ ವ್ಯಕ್ತಿಗಳಿಂದ ಅಥವಾ ಬ್ಯಾಂಕುಗಳಿಂದ ನೇರವಾಗಿ ಆರ್ಡರ್ ಗಳನ್ನು ಪಡೆಯುವುದಿಲ್ಲ ಎಂದ ಅವರು ಬೇಡಿಕೆಗಳನ್ನು ಈಡೇರಿಸಲು ಸಾಕಷ್ಟು ಕಚ್ಚಾ ಸಾಮಗ್ರಿಗಳಿವೆ ಎಂದು ಹೇಳಿದರು.
ಪ್ರತಿ 5ಸಿಸಿ ಅಳಿಸಲಾಗದ ಶಾಯಿ ಬಾಟಲ್ ಗೆ 116 ರೂಪಾಯಿ ವಿಧಿಸುತ್ತೇವೆ ಎನ್ನುತ್ತಾರೆ ಎಂವೈ ಪಿವಿಎಲ್ ಪ್ರಧಾನ ವ್ಯವಸ್ಥಾಪಕ ಹರಕುಮಾರ್.ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ 5 ಲಕ್ಷ ಬಾಟಲ್ ಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಅವರು.
ಸ್ಕೆಚ್ ಪೆನ್ ಬಳಕೆ? ಅಳಿಸಲಾಗದ ಶಾಯಿ ಹಾಕುವುದು ಹಳೆ ಪದ್ಧತಿಯಾಗಿರುವುದರಿಂದ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯ ಮತ್ತು ರಾಷ್ಟ್ರೀಯ ರಸಾಯನಶಾಸ್ತ್ರ ಅಭಿವೃದ್ಧಿ ಪ್ರಯೋಗಾಲಯದ ಜೊತೆ ಸೇರಿ ಸ್ಕೆಚ್ ಪೆನ್ ಜಾರಿಗೆ ತರಲು ಸಂಶೋಧನೆ ನಡೆಸುತ್ತಿದ್ದೇವೆ. ಈ ಕುರಿತು ಚುನಾವಣಾ ಆಯೋಗದ ಜೊತೆ ಮಾತುಕತೆ ನಡೆಯುತ್ತಿದ್ದು, ಸ್ಕೆಚ್ ಪೆನ್ ನ ಮಾದರಿಯನ್ನು ಚುನಾವಣಾ ಆಯೋಗದ ಮುಂದೆ ಡಿಸೆಂಬರ್ ನಲ್ಲಿ ನೀಡಲಾಗುವುದು. ಸಾವಿರ ಮಂದಿ ಮತದಾರರ ಕೈಗೆ ಮಾರ್ಕ್ ಮಾಡಲು ಒಂದು ಪೆನ್ ಬಳಸಲಾಗುವುದು ಎಂದು ಹೇಳಿದರು.
No Comments

Leave A Comment