Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ನೋಟು ನಿಷೇಧ ವಿರುದ್ಧ ಮಮತಾ ಪಾದಯಾತ್ರೆ

mamatha-1ನವದೆಹಲಿ: 500, 1000 ರೂ. ಮುಖಬೆಲೆಯ ನೋಟು ನಿಷೇಧ ವಿರುದ್ಧ ಕಿಡಿಕಾರುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಸಂಸತ್‌ ಭವನದಿಂದ ರಾಷ್ಟ್ರಪತಿ ಭವನದವರೆಗೆ ಪಾದಯಾತ್ರೆ ನಡೆಸಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ದೂರು ನೀಡಿದ್ದಾರೆ. ಈ ಹೋರಾಟದಲ್ಲಿ ಅವರಿಗೆ ಬಿಜೆಪಿ ಮಿತ್ರಪಕ್ಷ ಶಿವಸೇನೆಯ ಬೆಂಬಲ ಲಭ್ಯವಾಗಿದ್ದರೆ, ಕಾಂಗ್ರೆಸ್‌, ಬಿಎಸ್ಪಿ, ಎಸ್ಪಿ, ಎಡರಂಗಗಳು ಮಮತಾ ಜತೆ ಕೈಜೋಡಿಸಲು ಹಿಂಜರಿದಿವೆ.

ಕೇಂದ್ರ ಸರ್ಕಾರದ ಪಾಲುದಾರ ಪಕ್ಷವಾಗಿರುವ ಶಿವಸೇನೆ ತನ್ನ ಪ್ರತಿನಿಧಿಯಾಗಿ ಸಂಸದ ಹಷುìಲ್‌ ಅವರನ್ನು ಮಮತಾ ಜತೆ ರಾಷ್ಟ್ರಪತಿಗಳ ಬಳಿಗೆ ಕಳುಹಿಸುವ ಮೂಲಕ ಅಚ್ಚರಿ ಮೂಡಿಸಿತು. ಇದಲ್ಲದೆ ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಓಮರ್‌ ಅಬ್ದುಲ್ಲಾ, ಆಮ್‌ ಆದ್ಮಿ ಪಕ್ಷದ ಪ್ರತಿನಿಧಿ ಭಗವಂತ್‌ ಮಾನ್‌, ತೃಣಮೂಲ ಕಾಂಗ್ರೆಸ್‌ ಸಂಸದರು ನಿಯೋಗದಲ್ಲಿ ಪಾಲ್ಗೊಂಡಿದ್ದರು.

ನೋಟು ನಿಷೇಧದಿಂದಾಗಿ ಒಂದು ರೀತಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ನಿಯೋಗ ದೂರಿತು. ಆ ಬಗ್ಗೆ ಪರಿಶೀಲಿಸುವುದಾಗಿ ರಾಷ್ಟ್ರಪತಿಗಳು ಹೇಳಿದರು ಎಂದು ಮಮತಾ ತಿಳಿಸಿದರು.

No Comments

Leave A Comment