Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

1,200 ಕೋಟಿ ರೂ. ಮಲ್ಯ ಕಿಂಗ್‌ ಫಿಶರ್‌ ಸಾಲ ಎಸ್‌ಬಿಐ ನಿಂದ ರೈಟ್‌ ಆಫ್

vijay-mallya2-700ಹೊಸದಿಲ್ಲಿ : ಸರಕಾರಿ ಒಡೆತನದ ಭಾರತದ ಅತೀ ದೊಡ್ಡ ಬ್ಯಾಂಕ್‌ ಎನಿಸಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ, ದೇಶದಿಂದ ಪಲಾಯನ ಮಾಡಿರುವ ಬೃಹತ್‌ ಸಾಲ ಸುಸ್ತಿಗಾರ ಉದ್ಯಮಿ ವಿಜಯ್‌ ಮಲ್ಯ ಅವರ ಮುಚ್ಚಿಹೋಗಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ಗೆ ನೀಡಿದ್ದ 1,200 ಕೋಟಿ ರೂ.ಗಳ ಸಾಲವನ್ನು ರೈಟ್‌ ಆಫ್ ಮಾಡಿದೆ.

ಇತರ ಸುಸ್ತಿ ಸಾಲಗಳೊಂದಿಗೆ ಕಿಂಗ್‌ ಫಿಶರ್‌ಗೆ ನೀಡಿದ್ದ 1,200 ಕೋಟಿ ರೂ.ಗಳ ಮರಳಿ ಬಾರದ ಸಾಲವನ್ನು “ಅಡ್‌ವಾನ್ಸ್‌ ಅಂಡರ್‌ ಕಲೆಕ್ಷನ್‌ ಅಕೌಂಟ್ಸ್‌’ (ಎಯುಸಿಎ) ವರ್ಗಕ್ಕೆ ವರ್ಗಾಯಿಸಲಾಗಿದೆ ಮತ್ತು ಆ ಮೂಲಕ ಈ ಸುಸ್ತಿ ಸಾಲವನ್ನು ಭವಿಷ್ಯದಲ್ಲಿ ವಸೂಲಿ ಮಾಡುವ ಅವಕಾಶವನ್ನು ಮುಕ್ತವಾಗಿರಿಸಿದೆ ಎಂದು ಎಸ್‌ಬಿಐ ಹೇಳಿದೆ.

ರಾಜ್ಯಸಭೆಯಲ್ಲಿಂದು  ವಿರೋಧ ಪಕ್ಷಗಳ ವಾಕ್‌ ದಾಳಿಯನ್ನು ಎದುರಿಸಿದ ಸಂದರ್ಭದಲ್ಲಿ ವಿತ್ತ ಸಚಿವ ಅರುಣ್‌ ಜೇತ್ಲಿ ಅವರು, ವಿಜಯ್‌ ಮಲ್ಯ ಅವರ ಕಿಂಗ್‌ ಫಿಶರ್‌ ಏರ್‌ಲೈನ್ಸ್‌ಗೆ ನೀಡಲಾಗಿದ್ದ ಸಾಲವನ್ನು ಮನ್ನಾ ಮಾಡಲಾಗಿಲ್ಲ; ಅದರ ವಸೂಲಾತಿಯ ಅವಕಾಶವನ್ನು ಜೀವಂತ ಇರಿಸಲಾಗಿದೆ ಎಂದು ಹೇಳಿದ್ದರು.

“ಈಗ ಮಾಡಲಾಗಿರುವ ರೈಟ್‌ ಆಫ್ ಕ್ರಮದಿಂದ ಬ್ಯಾಂಕಿನ ಲೆಕ್ಕ ಪತ್ರ ಪುಸ್ತಕಗಳಲ್ಲಿ ಆ ಸಾಲವನ್ನು ಅನುತ್ಪಾದಕ ಆಸ್ತಿ (NPA) ಎಂದು ಪಟ್ಟಿ ಮಾಡಲಾಗಿದೆ. ಸುಸ್ತಿ ಸಾಲವನ್ನು ರೈಟ್‌ ಆಫ್ ಮಾಡುವುದೆಂದರೆ ಅದನ್ನು ಮನ್ನಾ ಮಾಡಿದಂತಾಗುವುದಿಲ್ಲ. ಈ ಸುಸ್ತಿ ಸಾಲದ ವಸೂಲಾತಿಯನ್ನು ಇನ್ನೂ ಕೂಡ ಬೆಂಬತ್ತಬಹುದಾಗಿದೆ’ ಎಂದು ಜೇತ್ಲಿ ಅವರಿಂದು ರಾಜ್ಯಸಭೆಯಲ್ಲಿ ಹೇಳಿದರು.

ದೇಶದಲ್ಲಿನ ಕಪ್ಪು ಹಣವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸರಕಾರ ದಿಢೀರನೆ 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ನಿಷೇಧಿಸಿರುವ ನಡುವೆಯೇ ವಿಜಯ್‌ ಮಲ್ಯ ಅವರ ಕಿಂಗ್‌ ಫಿಶರ್‌ ಏರ್‌ಲೈನ್ಸ್‌ನ ಸುಸ್ತಿ ಸಾಲವನ್ನು ಎಸ್‌ಬಿಐ ರೈಟ್‌ ಆಫ್ ಮಾಡಿರುವುದು ವಿಪರ್ಯಾಸಕರ ಎಂದು ಎಡ ಪಕ್ಷದ ಸಂಸದ ಸೀತಾರಾಮ ಯೆಚೂರಿ ಹೇಳಿದಾಗ, ಜೇತ್ಲಿ ಅವರು “ಸಾಲವನ್ನು ರೈಟ್‌ ಆಫ್ ಮಾಡುವುದೆಂದರೆ ಮನ್ನಾ ಮಾಡುವುದಲ್ಲ’ ಎಂದು ಉತ್ತರಿಸಿದರು.

No Comments

Leave A Comment