Log In
BREAKING NEWS >
ಮಂಗಳೂರು: ಮನೆಯೊಳಗೆ ನುಗ್ಗಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಸೋಮವಾರ ನಸುಕಿನ ಜಾವ ಪಣಂಬೂರು ಬಳಿಯಲ್ಲಿ ನಡೆದಿದೆ.

ಕೊನ್ನಟಗಿ ಕ್ರಾಸ್ ನೋಟು ಮುದ್ರಣದ ತ್ಯಾಜ್ಯ ಕಾಗದ ಸಾಗಿಸುತ್ತಿದ್ದ ಲಾರಿ ಪಲ್ಟಿ

f4ahphtpರಾಯಚೂರು: ನೋಟು ಮುದ್ರಣದ ತ್ಯಾಜ್ಯ ಕಾಗದ (ರದ್ದಿ) ಸಾಗಣೆ ಮಾಡುತಿದ್ದ ಲಾರಿ ಸೊಮವಾರ ಸಿಂಧನೂರು ತಾಲ್ಲೂಕಿನ ಕೊನ್ನಟಗಿ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಲಾರಿಯಲ್ಲಿ ಇದ್ದದ್ದು ಹಳೆಯ ನೋಟು ಅಲ್ಲ. ನೋಟು ಮುದ್ರಣದ ತ್ಯಾಜ್ಯ ಕಾಗದ ಎಂದು ಸಿಂಧನೂರು ಗ್ರಾಮಾಂತರ ಠಾಣೆಯ ಸಿ.ಪಿ.ಐ. ಸ್ಪಷ್ಟಪಡಿಸಿದ್ದಾರೆ

ಲಾರಿ ವಾಡಿ ರೈಲ್ವೆ ಜಂಕ್ಷನ್‌ಗೆ ಹೊರಟಿತ್ತು. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ನೋಟು ಮುದ್ರಣದ ತ್ಯಾಜ್ಯ ಕಾಗದ ಸಾಗಣೆ ಮಾಡುತಿದ್ದ ಲಾರಿ ಇದಾಗಿದೆ ಎಂದಷ್ಟೆ ಪೊಲೀಸರು ತಿಳಿಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದಿದ್ದಾರೆ.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment