Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ರಾಮಮಂದಿರ ನಿರ್ಮಾಣ ವಿವಾದ ಇತ್ಯರ್ಥಕ್ಕೆ ಹೊಸ ಪ್ರಸ್ತಾವನೆ!

ayodhya-2

ಫೈಜಾಬಾದ್: ಅಯೋಧ್ಯೆ ರಾಮಮಂದಿರ ನಿರ್ಮಾಣ ವಿವಾದವನ್ನು ಬಗೆಹರಿಸುವುದಕ್ಕೆ ಸಂಬಂಧಿಸಿದಂತೆ ಫೈಜಾಬಾದ್ ವಿಭಾಗೀಯ ಆಯುಕ್ತರಿಗೆ ಹೊಸ ಪ್ರಸ್ತಾವನೆಯನ್ನು ನೀಡಲಾಗಿದೆ.

ಮಸೀದಿ ಹಾಗೂ ರಾಮಮಂದಿರ ಎರಡನ್ನೂ ನಿರ್ಮಾಣ ಮಾಡುವುದು ಹೊಸ ಪ್ರಸ್ತಾವನೆಯಾಗಿದ್ದು, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಪಲೋಕ್ ಬಸು ನೇತೃತ್ವದ ಅಭಿಯಾನದಲ್ಲಿ ಸುಮಾರು ಹಿಂದೂ- ಮುಸ್ಲಿಂ ಸಮುದಾಯದಿಂದ ಒಟ್ಟು 10,000 ಮಂದಿ ಮಸೀದಿ- ರಾಮಮಂದಿರ ನಿರ್ಮಾಣ ಮಾಡುವುದರ ಪರವಾದ ಅರ್ಜಿಗೆ ಸಹಿ ಹಾಕಿದ್ದಾರೆ.

ಹೊಸ ಪ್ರಸ್ತಾವನೆಯ ಅರ್ಜಿಯನ್ನು ಸ್ವೀಕರಿಸಿ ಮಾತನಾಡಿರುವ ವಿಭಾಗೀಯ ಆಯುಕ್ತ ಸೂರ್ಯ ಪ್ರಕಾಶ್ ಮಿಶ್ರಾ, ” ರಾಮಮಂದಿರ, ಮಸೀದಿ ನಿರ್ಮಾಣ ಮಾಡುವ ಸಂಬಂಧ ಕೆಲವು ಸಹಿಗಳನ್ನು ಹೊಂದಿರುವ ಅರ್ಜಿಯನ್ನು ಸ್ವೀಕರಿಸಲಾಗಿದೆ. ಈ ಬಗ್ಗೆ ಇನ್ನಷ್ಟೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಪ್ರಕಾಶ್ ಮಿಶ್ರಾ ಹೇಳಿದ್ದಾರೆ.

ಸಹಿ ಅಭಿಯಾನದ ನೇತೃತ್ವ ವಹಿಸಿರುವ ಪಲೋಕ್ ಬಸು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಹೊಸ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ಗಮನಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ 2010 ರ ಸೆಪ್ಟೆಂಬರ್ 30 ರಂದು ತೀರ್ಪು ನೀಡಿದ್ದ ಅಲಹಾಬಾದ್ ಹೈಕೋರ್ಟ್, ವಿವಾದಿತ ಪ್ರದೇಶವನ್ನು ಮುಸ್ಲಿಂ ಸಮುದಾಯ, ನಿರ್ಮೋಹಿ ಅಖಾಡ, ಹಾಗೂ ರಾಮಮಂದಿರಕ್ಕೆ ಹಂಚಿಕೆ ಮಾಡಿ ಆದೇಶ ನೀಡಿತ್ತು. ಇದಾದ ಬಳಿಕ ತಾವು ವ್ಯಾಜ್ಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ಮೂಲ ಅರ್ಜಿದಾರ ಮೊಹಮ್ಮದ್‌ ಹಾಷಿಂ ಅನ್ಸಾರಿ 2016 ರ ಜುಲೈ ನಲ್ಲಿ ಮೃತಪಟ್ಟಿದ್ದರು.

No Comments

Leave A Comment