Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಚಿಕ್ಕಮಗಳೂರು; ಪದ್ಮನಾಭ, ರಿಜ್ವಾನ್ ಬೇಗಂ ಸೇರಿ 4 ನಕ್ಸಲರು ಶರಣು

9898
ಚಿಕ್ಕಮಗಳೂರು:
ಪಶ್ಚಿಮ ಘಟ್ಟದ ಪರಿಸರದಲ್ಲಿ ಕಳೆದ 2 ದಶಕಗಳಿಂದ ಸಕ್ರಿಯರಾಗಿದ್ದ ನಾಲ್ವರು ಪ್ರಮುಖ ನಕ್ಸಲೀಯರು ನಕ್ಸಲ್ ಪ್ಯಾಕೇಜ್ ನಡಿ ಸೋಮವಾರ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಮುಂದೆ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ.

ನಕ್ಸಲ್ ಮುಖಂಡರಾದ ನೀಲಗುಣಿ ಪದ್ಮನಾಭ, ರಿಜ್ವಾನ್ ಬೇಗಂ, ರಾಜು, ಭಾರತಿ ಸೇರಿದಂತೆ ನಾಲ್ವರು ನಕ್ಸಲೀಯರು ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎಕೆ ಸುಬ್ಬಯ್ಯ ಮುಂದಾಳತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಶರಣಾಗಿದ್ದಾರೆ.

ನಾಲ್ವರು ನಕ್ಸಲೀಯರು ಗೌರಿ ಲಂಕೇಶ್ ಜೊತೆ ಇಂದು ಮಧ್ಯಾಹ್ನ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು. ನಕ್ಸಲೀಯರಾದ ಪದ್ಮನಾಭ, ರಾಜು, ಭಾರತಿ ಹಾಗೂ ರಿಜ್ವಾನ್ ಬೇಗಂ ನಕ್ಸಲ್ ಪ್ಯಾಕೇಜ್ ಅಡಿಯಲ್ಲಿ ಚಿಕ್ಕಮಗಳೂರಿನಲ್ಲಿ ನಾಗರಿಕ ಸಮಿತಿ ಸಮ್ಮುಖದಲ್ಲಿ ಶರಣಾದರು. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾ ಮಲೈ,ಚಿಕ್ಕಮಗಳೂರು ಜಿಲ್ಲಾಧಿಕಾರಿ ಸತ್ಯವತಿ, ವಕೀಲ ಎಕೆ ಸುಬ್ಬಯ್ಯ ಹಾಜರಿದ್ದರು.

ನಕ್ಸಲ್ ಪದ್ಮನಾಭ ಶೃಂಗೇರಿಯಲ್ಲಿ ನಡೆದಿದ್ದ ಎನ್ ಕೌಂಟರ್ ಸಂದರ್ಭದಲ್ಲಿ ಗಾಯಗೊಂಡಿದ್ದ. ಪದ್ಮನಾಭ ಕೊಪ್ಪ ತಾಲೂಕಿನ ನೀಲ್ ಗುಣಿ ಗ್ರಾಮದ ನಿವಾಸಿ. ಪದ್ಮನಾಭ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ.

1995, 96ರಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಲ್ಪನಾ ಅಲಿಯಾಸ್ ರಿಜ್ವಾನ್ ಬೇಗಂ ರಾಯಚೂರಿನ ಕೊರ್ತಗುಂದಿ ಗ್ರಾಮದ ನಿವಾಸಿದ್ದಾಳೆ. ಈಕೆ ವಿರುದ್ಧ ಒಂದು ಪ್ರಕರಣ ದಾಖಲಾಗಿತ್ತು.

ಭಾರತಿ ಹಾಗೂ ರಾಜು ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ, ಇವರಿಬ್ಬರೂ ನಕ್ಸಲೀಯ ಮುಖಂಡರ ಬಗ್ಗೆ ಸಹಾನುಭೂತಿ ಹೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷವೂ ನಕ್ಸಲ್ ಪ್ಯಾಕೇಜ್ ನಡಿಯಲ್ಲಿ ಸಿರಿಮನೆ ನಾಗರಾಜ್, ನೂರ್ ಜುಲ್ಫಿಕರ್ ಸೇರಿದಂತೆ ಇಬ್ಬರು ನಕ್ಸಲೀಯರು ಶರಣಾಗಿದ್ದರು.

No Comments

Leave A Comment