Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಶ್ರೀ ಕೃಷ್ಣ ಟೆಕ್ನಿಕಲ್ ಎಜ್ಯುಕೇಶನ್ ಸೆಂಟರ್:14ನೇ ವಾರ್ಷಿಕೋತ್ಸವ,ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭ

sgr_1868ಉಡುಪಿ:ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದೊಂದು ರೀತಿಯ ಕೌಶಲ್ಯ ಸಾಮರ್ಥ್ಯವಿರುತ್ತದೆ ಈ ಕೌಶಲ್ಯವನ್ನು ತಳಮಟ್ಟದಿಂದ ಹೊರತರಲು ಫಲಿಮಾರು ಮಠಾಧೀಶಾರದ  ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಒಳ್ಳೆಯ ಸಂಸ್ಥೆಯನ್ನು ಸ್ಥಾಪಿಸಿ ಸಂಸ್ಕಾರಯುತವಾದ ವಿದ್ಯಾಭ್ಯಾಸವನ್ನು ಸಮಾಜದ ಎಲ್ಲಾ ಮಟ್ಟದ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ.

ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ನಂತರ ಸ್ವಪ್ರಯತ್ನದಿಂದ ಉನ್ನತ ಮಟ್ಟಕ್ಕೇರಿದರೂ ಈ ಸಂಸ್ಥೆಯನ್ನು ಮರೆಯಬಾರದೆಂದು, ಪಲಿಮಾರು ಮಠದಿಂದ ನಡೆಸಲ್ಪಡುತ್ತಿರುವ ಶ್ರೀ ಕೃಷ್ಣ ಟೆಕ್ನಿಕಲ್ ಎಜುಕೇಶನ್ ಸೆಂಟರ್ನ 14 ನೇ ವಾರ್ಷಿಕೋತ್ಸವ ಹಾಗೂ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಈ ಕಾರ್ಯಕ್ರಮದಲ್ಲಿ ಉಡುಪಿಯ ನ್ಯಾಯವಾದಿಗಳಾದ ಶ್ರೀ ಪ್ರದೀಪ್ ಕುಮಾರ್ ಹಾಗೂ ಪಲಿಮಾರು ಮಠದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪ್ರಹ್ಲಾದ ರಾವ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀ ಮಠದ ವ್ಯವಸ್ಥಾಪಕಾರದ ಬಲರಾಮ ಭಟ್ ಸ್ವಾಗತಿಸಿದರು,ಪ್ರಾಂಶುಪಾಲರಾದ ಯು.ಬಿ. ಸುಧೀಂದ್ರ ಪ್ರಾಸ್ತಾವಿಕ ಮಾತನಾಡಿ ಅದ್ಯಾಪಕರಾದ ರವೀಂದ್ರ ಮತ್ತು ನಿತಿನ್ ಕಾರ್ಯಕ್ರಮ ನಿರ್ವಹಣೆ ಮಾಡಿ ಹೈಟೆಕ್ ಹೋಮ್ ಎಪ್ಲಾಯೆನ್ಸ್ನ  ಮಾಲಕರಾದ ಪದ್ಮನಾಭ ಭಟ್ ಧನ್ಯವಾದ ನೀಡಿದರು.

No Comments

Leave A Comment