Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಕೌಟುಂಬಿಕ ಕಲಹ: ಶೀಲಾ ದೀಕ್ಷಿತ್ ಅಳಿಯ ಇಮ್ರಾನ್ ಬಂಧನ

sheila-dikshitನವದೆಹಲಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಳಿಯ ಮುಹಮ್ಮದ್ ಇಮ್ರಾನ್ ಅವರನ್ನು ಬಂಧನಕ್ಕೊಳಪಡಿಸಿರುವುದಾಗಿ ಭಾನುವಾರ ತಿಳಿದುಬಂದಿದೆ.

ಕೌಟುಂಬಿಕ ದೌರ್ಜನ್ಯ ಪ್ರಕರಣ ಸಂಬಂಧ ಶೀಲಾ ದೀಕ್ಷಿತ್ ಅವರ ಅಳಿಯ ಇಮ್ರಾನ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.ಶೀಲಾ ದೀಕ್ಷಿತ್ ಅವರ ಮಗಳು ಲತಿಕಾ ಅವರನ್ನು ವಿವಾಹವಾಗಿದ್ದ ಇಮ್ರಾನ್ ಅವರು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 10 ತಿಂಗಳ ಹಿಂದಷ್ಟೇ ಕುಟುಂಬದಿಂದ ದೂರವಾಗಿದ್ದರು.

ಇದೀಗ ಪೊಲೀಸರು ಇಮ್ರಾನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದು, ವಾರಂಟ್ ಜಾರಿ ಮಾಡಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜಪಡಿಸಿ ದೆಹಲಿಗೆ ಕರೆದೊಯ್ಯಲಿದ್ದಾರೆಂದು ವರದಿಗಳು ತಿಳಿಸಿವೆ.

No Comments

Leave A Comment