Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಸೆರೆ

magಬೆಂಗಳೂರು: ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಐವರು ಆರೋಪಿಗಳನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೋಳರಪಾಳ್ಯದ ಪ್ರಶಾಂತ್‌ (19), ಕೆ.ಪಿ. ಅಗ್ರಹಾರದ ವಿನೋದ್‌ರಾವ್‌ (22), ಹೆಣ್ಣೂರು ಕ್ರಾಸ್‌ನ ಕಾರ್ತಿಕ್‌ (23), ಮಾಗಡಿ ರಸ್ತೆಯ ಅರುಣ್‌ರಾಜ್‌ (22) ಹಾಗೂ ಉದಯಕುಮಾರ್‌ (30) ಬಂಧಿತರು. ಆರೋಪಿಗಳಿಂದ 2.80 ಲಕ್ಷ ಮೌಲ್ಯದ 105 ಗ್ರಾಂ ತೂಕದ ಮೂರು ಚಿನ್ನದ ಸರ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ.

ಆರೋಪಿಗಳು ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಸಿಕೊಂಡು ಅವರನ್ನು ಹಿಂಬಾಲಿಸಿ ಸರ ಕಳವು ಮಾಡುತ್ತಿದ್ದರು. ಬಳಿಕ ಕಳವು ಮಾಡಿದ ಚಿನ್ನಾಭರಣವನ್ನು ಸ್ನೇಹಿತನೊಬ್ಬನ ಮೂಲಕ ಗಿರವಿ ಅಂಗಡಿಯಲ್ಲಿಟ್ಟು ಬಂದ ಹಣದಲ್ಲಿ ಮೋಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಪ್ರಶಾಂತ್‌ ಮತ್ತು ಅರುಣ್‌ರಾಜ್‌ ಈ ಹಿಂದೆ ಸಂಜಯನಗರ ಮತ್ತು ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಸರಗಳವು ಹಾಗೂ ಮನೆಗಳವು ಪ್ರಕರಣಗಳಲ್ಲಿ ಜೈಲು ಸೇರಿದ್ದರು. ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿಗಳು ಮತ್ತೆ ಕಳವು ಕೃತ್ಯ ಮುಂದುವರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನದಿಂದ ಮಹಾಲಕ್ಷ್ಮೀ ಲೇಔಟ್‌, ರಾಮಮೂರ್ತಿನಗರ, ಜಯನಗರ ಠಾಣೆಯಲ್ಲಿ ದಾಖಲಾಗಿದ್ದ ಮೂರು ಸರ ಅಪಹರಣ ಪ್ರಕರಣ ಪತ್ತೆಯಾಗಿವೆ.

ಫ್ಲ್ಯಾಟ್‌ಗೆ ನುಗ್ಗಿ ವಿದ್ಯಾರ್ಥಿನಿ ಅತ್ಯಾಚಾರ ಯತ್ನ: ಕಳ್ಳ ಸೆರೆ
ಬೆಂಗಳೂರು:
ಅಪಾರ್ಟ್‌ಮೆಂಟ್‌ಗೆ ನುಗ್ಗಿ ಯುವತಿಯನ್ನು ಬೆದರಿಸಿ ಅತ್ಯಾಚಾರಕ್ಕೆ ಯತ್ನಿಸಿ, ಚಿನ್ನಾಭರಣ ದೋಚಿದ್ದ ಕಳ್ಳನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಾಯಂಡಹಳ್ಳಿ ನಿವಾಸಿ ವಿನಯ್‌ ಅಲಿಯಾಸ್‌ ವಿನೋದ್‌ (20) ಬಂಧಿತ. ನವೆಂಬರ್‌ 2ರಂದು ಘಟನೆ ನಡೆದಿದ್ದು, ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸ್ನೇಹಿತೆಯೊಂದಿಗೆ ಕೆಂಗೇರಿಯಲ್ಲಿ ರುವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದ ರಲ್ಲಿ ವಾಸವಿದ್ದರು. ಬಂಧಿತ ಆರೋಪಿ ನ.2 ರಂದು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಒಳಗೆ ಪ್ರವೇಶಿಸಿದ್ದ. ಬಳಿಕ ಪೈಪ್‌ ಏರಿ 2ನೇ ಮಹಡಿಗೆ ಹೋಗಿ ಕಳವು ಮಾಡಲು ಯತ್ನಿಸಿದ್ದಾನೆ. ಈ ವೇಳೆ ಫ್ಲ್ಯಾಟ್‌ನಲ್ಲಿ ಯುವತಿಯೊಬ್ಬಳೇ ಇರುವುದನ್ನು ಗಮನಿಸಿದ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ವೇಳೆ ಯುವತಿ ಕಿರುಚಿಕೊಂಡಿದ್ದು, ನೆರೆಯ ಫ್ಲ್ಯಾಟ್‌ನವರು ಓಡಿ ಬಂದಿದ್ದಾರೆ. ಅಷ್ಟೊತ್ತಿಗೆ ಆರೋಪಿ ಕಳವು ಮಾಡಿದ್ದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ದಿನ ಯುವತಿಯ ಸ್ನೇಹಿತೆ ದೀಪಾವಳಿ ಹಬ್ಬದ ನಿಮಿತ್ತ ಊರಿಗೆ ತೆರಳಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂವರು ಮನೆ ಕಳ್ಳರ ಬಂಧನ
ಬೀಗ ಹಾಕಿರುವ ಮನೆಗಳ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿ ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಾರು, ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಬಿಳೇಕಳ್ಳಿ ನಿವಾಸಿ ರಾಜ ಅಲಿಯಾಸ್‌ ಜಪಾನ್‌ ರಾಜ (39), ಜ್ಞಾನಭಾರತಿಯ ಖಾಜ್ವಾ ಮೋಹಿನುದ್ದೀನ್‌ ಪಟೆÌàಕರ್‌ನನ್ನು (28) ಹಾಗೂ ಶಿವಾಜಿನಗರ ಬಾಲರಾಜ (28) ನನ್ನು ಬಂಧಿತರು.

ಆರೋಪಿಗಳು ರಾತ್ರಿ ಇಡೀ ಸುತ್ತಾಡುತ್ತಿದ್ದರು. ಯಾವುದಾದರೂ ಮನೆಯಲ್ಲಿ ವಿದ್ಯುತ್‌ ಉರಿಯುತ್ತಿರುವುದನ್ನ ಪತ್ತೆ ಹಚ್ಚಿ ಆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಳವು ಮಾಡುತ್ತಿದ್ದರು. ಆರೋಪಿಗಳು ಇತ್ತೀಚೆಗೆ ಗರುಡಾಚಾರ್‌ ಪಾಳ್ಯದ ಮನೆಯೊಂದರ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಈ ವೇಳೆ ಕಿಟಕಿ ಮೂಲಕ ಕೈ ತೂರಿಸಿ 2 ಲ್ಯಾಪ್‌ಟಾಪ್‌, 3 ಮೊಬೈಲ್‌ ಫೋನ್‌, ಕಾರು ಹಾಗೂ ಬೈಕ್‌ ಕೀ ಎಗರಿಸಿದ್ದರು.

ನಂತರ ಅದೇ ಕೀಗಳನ್ನು ಬಳಸಿ ಮನೆ ಮುಂದೆ ನಿಲ್ಲಿಸಿದ್ದ ಮಾರುತಿ ಸ್ವಿಫ್ಟ್ ಕಾರು, ಸ್ಕೂಟಿ ಕದ್ದೊಯ್ದಿದ್ದರು ಎಂದು ಪೊಲೀಸರು ತಿಳಿಸಿದರು. ಆರೋಪಿಗಳ ಬಂಧನದಿಂದ ಜೆ.ಪಿ.ನಗರ, ಸುಬ್ರಹ್ಮಣ್ಯಪುರ, ಆಡುಗೋಡಿ ಸೇರಿದಂತೆ ವಿವಿಧ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳವು ಪ್ರಕರಣ ಪತ್ತೆಯಾಗಿವೆ.

ತಲೆಯ ಮೇಲೆ ಕಲ್ಲು ಎತ್ತಿಹಾಕಿ ಮಹಿಳೆ ಕೊಲೆ
ಬೆಂಗಳೂರು:
ಗೊರಗುಂಟೆಪಾಳ್ಯ ಸಮೀಪದ ಕೊಳಗೇರಿ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಯಶೋಧಮ್ಮ (45) ಕೊಲೆಯಾದ ಮಹಿಳೆ. ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯಶೋಧಮ್ಮ ಪತಿ ಮತ್ತು ಮಕ್ಕಳಿಂದ ಪ್ರತ್ಯೇಕವಾಗಿ ವಾಸವಿದ್ದರು.

ಶುಕ್ರವಾರ ಮಧ್ಯಾಹ್ನವಾದರೂ ಮಹಿಳೆ ಕೆಲಸಕ್ಕೆ ಹೋಗಿರಲಿಲ್ಲ. ಈ ಬಗ್ಗೆ ಹೋಟೆಲ್‌ ಸಿಬ್ಬಂದಿ ಮಹಿಳೆಯ ಪುತ್ರ ಜಗದೀಶ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಪುತ್ರ ಜಗದೀಶ್‌ ಮನೆಗೆ ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯ ಮೂಗು, ಬಾಯಿಯಿಂದ ರಕ್ತ ಬಂದಿದ್ದು, ದುಷ್ಕರ್ಮಿಗಳು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾರೆ.

ಮನೆಯಲ್ಲಿ ಯಾವುದೇ ವಸ್ತು ಕಳವು ಆಗಿಲ್ಲ. ಪರಿಚಿತರೇ ಕೊಲೆ ಮಾಡಿರುವ ಶಂಕೆಯಿದ್ದು, ಸ್ಥಳೀಯರು ಹಾಗೂ ಸಂಬಂಧಿಕರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment