Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಚಿಕ್ಕಮಗಳೂರಿನಲ್ಲಿ 2000 ಖೋಟಾ ನೋಟು ಪತ್ತೆ

note

ಚಿಕ್ಕಮಗಳೂರು : ನೋಟು ನಿಷೇಧದ ಪರಿಣಾಮವಾಗಿ ಹೊಸತಾಗಿ ಬಂದಿರುವ 2000 ರೂಪಾಯಿ ನೋಟಿನ ಪರಿಚಯವಿಲ್ಲದೇ ವ್ಯಾಪಾರಿಯೊಬ್ಬರು ಮೋಸ ಹೋದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಮಹಾನ್‌ ವಂಚಕನೊಬ್ಬ ಈ ಕರಾಮತ್ತು ತೋರಿದ್ದು 2000 ಮುಖ ಬೆಲೆಯ ನೋಟನ್ನು ಕಲರ್‌ ಜೆರಾಕ್ಸ್‌ ಮಾಡಿ ಚಲಾವಣೆಯನ್ನೂ ಮಾಡಿ ಪರಾರಿಯಾಗಿದ್ದಾನೆ.

ಚಿಕ್ಕಮಗಳೂರಿನ ಎಪಿಎಂಸಿಯ ಬಳಿಯಿರುವ ಈರುಳ್ಳಿ ಮಂಡಿಯಲ್ಲಿ ಅಪರಿಚಿತ ನೊಬ್ಬ ಶನಿವಾರ ಬೆಳಗ್ಗೆ 2000 ರೂಪಾಯಿ ನೋಟು ನೀಡಿ ವ್ಯವಹರಿಸಿ ಚಿಲ್ಲರೆ ಪಡೆದು ವಂಚಿಸಿದ್ದಾನೆ. ಅಂಗಡಿಯಲ್ಲಿ ಮಾಲಿಕನಿಲ್ಲದ ವೇಳೆ ಈ ಘಟನೆ ನಡೆದಿದ್ದು ,ಕೆಲಸದಾತ ನೋಟು ಪಡೆದು ಚಿಲ್ಲರೆ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.

2000 ಮುಖಬೆಲೆಯ ಒರಿಜಿನಲ್‌ ನೋಟನ್ನು ಕೈಯಿಂದ ಸ್ಪರ್ಶಿಸಿದಾಗ ಪ್ರಿಂಟ್‌ ಇಂಪ್ರೆಷನ್‌ ಸಿಗುತ್ತದೆ. ಅಂದರೆ ಬರವಣಿಗೆಯ ಅನುಭವ ಬ್ರೈಲ್‌ ಲಿಪಿಯಂತೆ ಅನುಭವಕ್ಕೆ ಬರುತ್ತದೆ. ಜೆರಾಕ್ಸ್‌ ನೋಟಿನಲ್ಲಿ ಆ ಅನುಭವ ಸಿಗುವುದಿಲ್ಲ.

No Comments

Leave A Comment