Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ದಕ್ಷಿಣ ಚೀನಾ ಸಮುದ್ರದ ವಿವಾದದ ಬಗ್ಗೆ ಭಾರತ-ಜಪಾನ್ ಜಂಟಿ ಹೇಳಿಕೆ, ಚಾಬಹಾರ್ ಬಂದರು ಬಗ್ಗೆ ಚರ್ಚೆ

narendra-modi-6ನವದೆಹಲಿ: ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಚೀನಾ ಎಚ್ಚರಿಕೆ ನೀಡಿದ್ದರ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿ- ಜಪಾನ್ ಪ್ರಧಾನಿ ಶಿಂಜೋ ಅಬೆ ದ್ವಿಪಕ್ಷೀಯ ಮಾತುಕತೆ ವೇಳೆಯಲ್ಲಿ ದಕ್ಷಿಣ ಚೀನಾ ಸಮುದ್ರದ ವಿಚಾರವಾಗಿ ಚರ್ಚಿಸಿದ್ದಾರೆ.

ಮಾತುಕತೆ ವೇಳೆ ದಕ್ಷಿಣ ಚೀನಾ ಸಮುದ್ರದ ವಿವಾದ ಬಗೆಹರಿಸಲು ವಿಶ್ವಸಂಸ್ಥೆಯ ನ್ಯಾಯಮಂಡಳಿ(ಯುಎನ್ ಸಿಎಲ್ಒಎಸ್) ಪ್ರಮುಖವಾದದ್ದು ಎಂಬ ಅಭಿಪ್ರಾಯವನ್ನು ಉಭಯ ನಾಯಕರೂ ವ್ಯಕ್ತಪಡಿಸಿದ್ದಾರೆ. ಚೀನಾಗೆ ಆತಂಕ ಉಂಟುಮಾಡುವಂತಹ ಮತ್ತೊಂದು ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ, ಇರಾನ್ ನಲ್ಲಿ ಭಾರತದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಚಾಬಹಾರ್ ಬಂದರು ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ.

ಚೀನಾ-ಪಾಕಿಸ್ತಾನದ ಸಹಭಾಗಿತ್ವದಲ್ಲಿ ಬಲೂಚಿಸ್ತಾನದಲ್ಲಿ ನಿರ್ಮಿಸಲಾಗಿರುವ ಗ್ವದಾರ್ ಬಂದರಿಗೆ ಪರ್ಯಾಯವಾಗಿ ಭಾರತ- ಇರಾನ್ ಸಹಭಾಗಿತ್ವದಲ್ಲಿ ಇರಾನ್ ನಲ್ಲಿ ಚಾಬಹಾರ್ ಬಂದರು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಭಾರತಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಈ ಬಂದರು ನೆರವಾಗಲಿದೆ. ಆದರೆ ಈಗ ಭಾರತ ಜಪಾನ್ ನೊಂದಿಗೆ ಚಬಹಾರ್  ಬಂದರು ಅಭಿವೃದ್ಧಿ ಬಗ್ಗೆ ಚರ್ಚಿಸಿರುವುದು ಚೀನಾಗೆ ಆತಂಕ ಮೂಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದಕ್ಷಿಣ ಚೀನಾ ಸಮುದ್ರದ ವಿವಾದದ ಬಗ್ಗೆ ಸತತ ಎರಡನೇ ವರ್ಷ ಭಾರತ- ಜಪಾನ್ ಜಂಟೀ ಹೆಳಿಕೆ ಬಿಡುಗಡೆ ಮಾಡಿದೆ. ಆದರೆ ಈ ಹೇಳಿಕೆಯಲ್ಲಿ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಚೀನಾ ವಿರುದ್ಧ ತೀರ್ಪನ್ನು ನೇರವಾಗಿ ಉಲ್ಲೇಖಿಸಿಲ್ಲ. ” ದಕ್ಷಿಣ ಚೀನಾ ಸಮುದ್ರದ ವಿವಾದವನ್ನು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಶಾಂತಿಯುತ ರೀತಿಯಲ್ಲಿ ಬಗೆಹರಿಸಬೇಕೆಂದು ಉಭಯ ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

No Comments

Leave A Comment