Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಹಾಸನದಲ್ಲಿ ಬೋರ್‌ವೆಲ್‌ ಲಾರಿ ಪಲ್ಟಿ: ಐವರ ದುರ್ಮರಣ

borewellಅರಕಲಗೂಡು: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ಬೋರ್‌ವೆಲ್‌ ಲಾರಿಯೊಂದು ಪಲ್ಟಿ ಹೊಡೆದ ಐವರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.accident

ಬೆಳಗಿನ ಜಾವ 4.30ರ ಸುಮಾರಿನಲ್ಲಿ ಬೋರ್ ವೆಲ್ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ. ಮೃತರು ಜಾರ್ಖಂಡ್ ಮೂಲದ ಅನುತ್, ಮುಚಿರಾಮ್, ಭೀಮ್ ಸಿಂಗ್, ಪುದುರಾಮ್ ಹಾಗೂ ಅನಿಲ್ ಮಾತು ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No Comments

Leave A Comment