Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

18 ಸಾವಿರ ಅಡಿ ಎತ್ತರದಲ್ಲಿ ನೃತ್ಯ ಮಾಡಿ ದಾಖಲೆ ನಿರ್ಮಿಸಿದ ಕಲಾವಿದೆ!ಸೈನಿಕರಿಗೆ ಸ್ಫೂರ್ತಿ ತುಂಬಲು ಈ ಸಾಹಸ

shruti-guptaಶಿಮ್ಲಾ: ಸೈನಿಕರಿಗೆ ಸ್ಪೂರ್ತಿ ತುಂಬಲು ಎರಡು ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭರತನಾಟ್ಯ ಕಲಾವಿದೆ ಶೃತಿ ಗುಪ್ತಾ ಇತ್ತೀಚೆಗೆ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ನೆಲ ಅಥವಾ ಸಮುದ್ರ ಮಟ್ಟದಿಂದ 18 ಸಾವಿರದ 380 ಅಡಿ ಎತ್ತರದ ಪ್ರದೇಶದಲ್ಲಿ ಇತ್ತೀಚೆಗೆ ನಾಟ್ಯ ಪ್ರದರ್ಶನ ನೀಡಿದ್ದಾರೆ.

ಅಷ್ಟು ಎತ್ತರದಲ್ಲಿ ಮೈನಸ್ 24 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಸತತ 20 ನಿಮಿಷಗಳ ಕಾಲ ಕಥಕ್ ನೃತ್ಯ ಮಾಡಿದ್ದು ಶೃತಿ ಗುಪ್ತಾ ಅವರ ಹೆಗ್ಗಳಿಕೆ.

ದೇಶದ ಶಾಂತಿ, ಸಾಮರಸ್ಯಕ್ಕಾಗಿ ಹೋರಾಡುತ್ತಿರುವ ಶೃತಿ ಶಿಮ್ಲಾ ಮೂಲದವರು. ಭಾರತ-ಚೀನಾ ಗಡಿಭಾಗದಲ್ಲಿ ಇಂಡೊ-ಟಿಬೆಟನ್ ಗಡಿ ಪೊಲೀಸರು ಮತ್ತು ಭಾರತೀಯ ಸೇನಾ ಸಿಬ್ಬಂದಿ ಎದುರು ಕ್ಹಾರ್ಡುಂಗ್ಲಾ ಪಾಸ್ ಹತ್ತಿರ ಹಿಮಾಚಲ ಪ್ರದೇಶದ ಲಾಹುಲ್ ಸ್ಪಿತಿ ಜಿಲ್ಲೆಯಲ್ಲಿ ದಾಖಲೆಯ ನೃತ್ಯ ಪ್ರದರ್ಶನ ನೀಡಿದ ನಂತರ ಆ ಭಾಗದ ಹೆಣ್ಣು ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುವ ಯೋಜನೆಯಲ್ಲಿ ಶೃತಿ ಇದ್ದಾರೆ.

ಹಿಮಾಚಲ ಪ್ರದೇಶ ಗವರ್ನರ್ ಆಚಾರ್ಯ ದೇವ್ರತ್ ಅವರನ್ನು ನಿನ್ನೆ ಭೇಟಿ ಮಾಡಿದ್ದ ಶೃತಿ ತಮ್ಮ ಯೋಜನೆಗಳನ್ನು ವಿವರಿಸಿದರು. ನಂತರ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಅಕ್ಟೋಬರ್ 18ರಂದು ಮೈನಸ್ 4 ಡಿಗ್ರಿ ಸೆಲ್ಸಿಯಸ್ ನಲ್ಲಿ ನೆಲದಿಂದ 17 ಸಾವಿರದ 198 ಅಡಿ ಎತ್ತರದಲ್ಲಿ ಬರಲಕಚ ಪಾಸ್ ಪ್ರದೇಶದಲ್ಲಿ 7 ನಿಮಿಷಗಳ ಕಾಲ ಕಥಕ್ ನೃತ್ಯ ಮಾಡಿ ದಾಖಲೆ ಮಾಡಿದ್ದೆ. ಈ ವರ್ಷ ನನ್ನ ದಾಖಲೆಯನ್ನು ನಾನೇ ಮುರಿದು ಅಕ್ಟೋಬರ್ 27ರಂದು 20 ನಿಮಿಷಗಳ ಕಾಲ 18 ಸಾವಿರದ 380 ಅಡಿ ಎತ್ತರದಲ್ಲಿ ಭರತನಾಟ್ಯ ಮಾಡಿದ್ದೇನೆ ಎಂದು ಹೇಳಿದರು.

No Comments

Leave A Comment