Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಬರಲಿದೆ ಇನ್ನೊಂದು ಮೋದಿ ಬ್ರಹ್ಮಾಸ್ತ್ರ? ರಸ್ತೆ ನಿಯಮ ಮೀರಿದ್ರೆ ದಂಡ

modibನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪುಹಣ ಹೊರಬರುವಂತಾಗಲು 500 ರೂ. ಹಾಗೂ 1000 ರೂ. ನೋಟು ರದ್ದುಗೊಳಿಸಿ, ನಿರುಮ್ಮಳರಾಗಿದ್ದ ಕಾಳಧನಿಕರಿರ ಮೇಲೆ ಅನಿರೀಕ್ಷಿತ “ಸರ್ಜಿಕಲ್‌ ದಾಳಿ’ ನಡೆಸಿದ್ದಾಯ್ತು. ಈಗ ಬೇಕಾಬಿಟ್ಟಿ ವಾಹನ ಚಾಲನೆ ಮಾಡುತ್ತ ರಸ್ತೆ ನಿಯಮಗಳನ್ನು ಉಲ್ಲಂ ಸುವವರಿಗೆ ಇದೇ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಭಾರಿ ಹೊಡೆತ ಕೊಡುವ ಸಾಧ್ಯತೆ ಇವೆ.

ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡುವವರ ಮೇಲೆ ಕಂಡು ಕೇಳರಿಯದಷ್ಟು ದಂಡ ವಿಧಿಸುವ “ಮೋಟಾರು ವಾಹನ (ತಿದ್ದುಪಡಿ) ಮಸೂದೆ-2016′ ನ.16ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪಾಸಾಗುವ ನಿರೀಕ್ಷೆಯನ್ನು ಸರ್ಕಾರ ಇಟ್ಟುಕೊಂಡಿದೆ.

ಈ ಪ್ರಕಾರ ಕುಡಿದು ವಾಹನ ಚಾಲನೆ ಮಾಡಿದರೆ 10 ಸಾವಿರ ರೂ. ದಂಡ, ವೇಗದ ಚಾಲನೆಗೆ 1000-4000 ರೂ. ದಂಡ, ವಿಮೆ ಇಲ್ಲದೇ ಗಾಡಿ ಓಡಿಸಿದರೆ 2000 ರೂ. ದಂಡ ಅಥವಾ 3 ತಿಂಗಳು ಜೈಲು, ಹೆಲ್ಮೆಟ್‌ ಇಲ್ಲದೇ ದ್ವಿಚಕ್ರ ವಾಹನ ಓಡಿಸಿದರೆ ತಲಾ 2000 ರೂ. ದಂಡ ಹಾಗೂ 3 ತಿಂಗಳು ಡಿ.ಎಲ್‌. ರದ್ದು ಅಂಶಗಳು ಈ ಮಸೂದೆಯಲ್ಲಿವೆ. ಇದೇ ವೇಳೆ ಹಿಟ್‌-ರನ್‌ ಸಂತ್ರಸ್ತರಿಗೆ 2 ಲಕ್ಷ ಪರಿಹಾರ, ಅಪಘಾತದಲ್ಲಿ ಸತ್ತರೆ 10 ಲಕ್ಷ ಪರಿಹಾರ ಸಿಗಲಿದೆ.

ಏನೇನಿರುತ್ತೆ?
– ಕುಡಿದು ವಾಹನ ಚಾಲನೆ: 10 ಸಾವಿರ ರೂ. ದಂಡ
– ವಿಮೆ ಇಲ್ಲದೆ ವಾಹನ ಚಾಲನೆ: 2000 ರೂ. ದಂಡ, ಜತೆಗೆ 3 ತಿಂಗಳು ಜೈಲು
– ಅತಿ ವೇಗದ ಚಾಲನೆ: 4000 ರೂ. ದಂಡ
– ಹೆಲ್ಮೆಟ್‌ರಹಿತ ಚಾಲನೆ: 2000 ರೂ. ದಂಡ, 3 ತಿಂಗಳು ಡಿಎಲ್‌ ರದ್ದು
– ಹಿಟ್‌-ರನ್‌ ಸಂತ್ರಸ್ತರಿಗೆ: 2 ಲಕ್ಷ ರೂ. ಪರಿಹಾರ
– ಅಪಘಾತದಲ್ಲಿ ಸತ್ತರೆ: ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ

No Comments

Leave A Comment