Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಅಮೆರಿಕದಲ್ಲಿ ಟ್ರಂಪ್‌ ವಿರೋಧಿ ಪ್ರತಿಭಟನೆ:ಗುಂಡಿನ ದಾಳಿ,ಹಲವರಿಗೆ ಗಾಯ

1447ನ್ಯೂಯಾರ್ಕ್‌ : ಡೋನಾಲ್ಡ್‌ ಟ್ರಂಪ್‌ ಅವರು ಅಭೂತಪೂರ್ವ ಜಯಗಳಿಸಿ 45 ನೇ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಅಮೆರಿಕದ ಹಲವು ಕಡೆಗಳಲ್ಲಿ  ಪ್ರತಿಭಟನೆಗಳು ಭುಗಿಲೆದ್ದಿವೆ. ಸೀಟಲ್‌ನಲ್ಲಿ ಬುಧವಾರ ರಾತ್ರಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದ ಅನತಿ ದೂರದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಪ್ರತಿಭಟನೆಗೂ ಗುಂಡಿನ ದಾಳಿಗೂ ಸಂಬಂಧವಿಲ್ಲ, ಗುಂಡಿನ ದಾಳಿ ವೈಯಕ್ತಿಕ ಕಾರಣದಿಂದ ನಡೆಸಿರುವುದು ತಿಳಿದು ಬಂದಿದ್ದು ಈ ಬಗ್ಗೆ ತನಿಖೆ ಮುಂದುವರಿಸಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರತಿಭಟನಾ ಕಾರರನ್ನು ಸ್ಥಳದಿಂದ ತೆರವುಗೊಳಿಸಿದರು.

ಟ್ರಂಪ್‌ ಅವರು ಚುನಾವಣಾ ಪ್ರಚಾರದ ವೇಳೆ ವಲಸಿಗರು, ಮುಸ್ಲಿಮರು ಮತತು ಇತರ ಗುಂಪುಗಳ ವಿರುದ್ಧ ದ್ವೇಷಮಯ ಮಾತುಗಳನ್ನಾಡಿ ರುವುದನ್ನು ಖಂಡಿಸಿ ಹಲವು ನಗರಗಳಲ್ಲಿ ಸಾವಿರಾರು ಸಂಖ್ಯೆ ಯ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಪ್ರತಿಭಟನಾ ಕಾರರು ‘ನಾಟ್‌ ಮೈ ಪ್ರಸಿಡೆಂಟ್‌’,’ಜನಾಂಗೀಯ ವಿರೋಧಿ ಟ್ರಂಪ್‌’ ,’ನೊ ಟ್ರಂಪ್‌’ ಹೀಗೆ ಘೋಷಣೆಗಳನ್ನು ಕೂಗಿದ್ದಾರೆ. ಗುಂಡಿನ ದಾಳಿ ಹೊರತು ಪಡಿಸಿ ಬೇರೆಲ್ಲಾ ಕಡೆಗಳಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ .

No Comments

Leave A Comment