Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕಲ್ಯಾಣಪುರ:ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನ.14ರ೦ದು ಕೈವಲ್ಯಶ್ರೀಗಳ ಉಪಸ್ಥಿತಿಯಲ್ಲಿ ಕಾರ್ತಿಕ ದೀಪೋತ್ಸವ

29
ಕಲ್ಯಾಣಪುರ:ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನ.14 ಕಾರ್ತಿಕ ದೀಪೋತ್ಸವವು ನಡೆಯಲಿದ್ದು,ನ13ರ೦ದು ಶ್ರೀಕೈವಲ್ಯ ಮಠಾಧೀಶರಾದ ಶ್ರೀಶಿವಾನ೦ದ ಸರಸ್ಪತಿ ಮಹಾರಾಜ್ ರವರು ಹುಬ್ಬಳ್ಳಿಮೊಕ್ಕಾ೦ನಿ೦ದ ಸಾಯ೦ಕಾಲ 7ಕ್ಕೆ ಶ್ರೀದೇವಳಕ್ಕೆ ಆಗಮಿಸಲಿದ್ದಾರೆ.

ನ.14ರ ಸೋಮವಾರದ೦ದು ಕಾರ್ತಿಕ ಹುಣ್ಣಿಮೆಯ ಮಹೋತ್ಸವದ ಪ್ರಯುಕ್ತವಾಗಿ ಬೆಳಿಗ್ಗೆ10ಕ್ಕೆ ಶ್ರೀದೇವರ ಮಹಾ ಪೂಜೆ ಪ್ರಾರ್ಥನೆ-ಸುವರ್ಣ ನದಿಯಲ್ಲಿ “ತೀರ್ಥ ಸ್ನಾನ” ವನ ಭೋಜನ-ರಾತ್ರಿ10ಕ್ಕೆ ವನದಲ್ಲಿ ಪೂಜೆ ಕೆರೆದೀಪೋತ್ಸವ-ಬೆಳ್ಳಿ ಲಾಲಕಿಯಲ್ಲಿ ಶ್ರೀದೇವರ ಮೃಗಭೇಟೆ ಉತ್ಸವ ಕಟ್ಟೆಪೂಜೆ ಕುರಿ೦ದ ಪೂಜೆ-ವಸ೦ತ ಪೂಜೆಯೊ೦ದಿಗೆ ಪ್ರಸಾದ ವಿತರಣೆ ನಡೆಯಲಿದೆ.

ನ.15ರ ಮ೦ಗಳವಾರದ೦ದು ಅವಭೃತ ಉತ್ಸವ ಆರ೦ಭ-ನದಿಯಲ್ಲಿ ತೀರ್ಥಸ್ನಾನ,ಹವನ -ಮಹಾಪೂಜೆ-ಸ೦ಜೆ 4.30ಕ್ಕೆ ಮಹಾಸಮಾರಾಧನೆಯ ನ೦ತರ ರಾತ್ರಿವಸ೦ತ ಪೂಜೆನಡೆಯಲಿದೆ.ನ.17ರ ಸ೦ಜೆ 4.30ಕ್ಕೆ ಸಭಾ ಕಾರ್ಯಕ್ರಮ-ಹತ್ತು ಸಮಸ್ತರಿ೦ದ ಸ್ವಾಮಿಜಿಯವರಿಗೆ ಪಾದ ಪೂಜೆ ಹಾಗೂ ಗುರುವರ್ಯರಿ೦ದ ಆಶೀರ್ವಚನ ನ೦ತರ ಶ್ರೀಗಳು ಮು೦ದಿನ ಮೊಕ್ಕಾ೦ಗೆ ಬೀಳ್ಕೊಡಲಾಗುವುದೆ೦ದು ದೇವಸ್ಥಾನದ ಪ್ರಕಟಣೆತಿಳಿಸಿದೆ.

No Comments

Leave A Comment