Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಮಾಸ್ತಿಗುಡಿ ದುರಂತ; ಜಲಾಶಯದಲ್ಲಿ ಒಂದು ಶವ ಪತ್ತೆ

7bnp22ಬೆಂಗಳೂರು:ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ತಾಲೂಕಿನ ತಿಪ್ಪಗೊಂಡನಹಳ್ಳಿ ಕೆರೆಗೆ ಹೆಲಿಕಾಪ್ಟರ್ ನಿಂದ ಹಾರಿ ಸಾವನ್ನಪ್ಪಿದ್ದ ಇಬ್ಬರು ಖಳನಟರಲ್ಲಿ, ಓರ್ವ ನಟನ ಶವ ಬುಧವಾರ ಪತ್ತೆಯಾಗಿದೆ.ಖಳನಟ ರಾಘವ್ ಉದಯ್ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ರಬ್ಬರ್ ಬೋಟ್ ನಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿಗಳು  ಮೃತದೇಹವನ್ನು ತರುತ್ತಿದ್ದಾರೆ. ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್(ನವೆಂಬರ್ 7ರಂದು) ಶೂಟಿಂಗ್ ವೇಳೆ ಹೆಲಿಕಾಪ್ಟರ್ ನಿಂದ ಹಾರಿದ್ದ ಖಳನಟರಾದ ಅನಿಲ್ ಮತ್ತು ಉದಯ್ ನೀರುಪಾಲಾಗಿದ್ದರು.

ಕಳೆದ 48 ಗಂಟೆಗಿಂತಲೂ ಹೆಚ್ಚು ಕಾಲ ಡ್ಯಾಂನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.ಉದಯ್ ಕೆರೆಗೆ ಹಾರಿದ್ದ ಸ್ಥಳದಲ್ಲೇ ಶವ ಮೇಲಕ್ಕೆ ಬಂದಿತ್ತು. ತಿಪ್ಪಗೊಂಡನಹಳ್ಳಿ ಡ್ಯಾಂ ಬಳಿಯೇ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.

ಕಳೆದ ಮೂರು ದಿನಗಳಿಂದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗು ತಜ್ಞರು, ಅಗ್ನಿಶಾಮಕ ಪಡೆ, ಎನ್ ಡಿಆರ್ ಎಫ್ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.

No Comments

Leave A Comment