Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಮಾಸ್ತಿಗುಡಿ ದುರಂತ: ನಿರ್ಮಾಪಕ ಸುಂದರ್ ಗೆ 14 ದಿನಗಳ ನ್ಯಾಯಾಂಗ ಬಂಧನ

sundar-gowdaತಾವರೆಕೆರೆ(ರಾಮನಗರ): ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಸಂದರ್ಭದಲ್ಲಿ ನದಿಗೆ ಹಾರಿದ್ದ ಖಳನಟ ಅನಿಲ್ ಹಾಗೂ ರಾಘವ್ ಉದಯ್ ದುರಂತ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ರಾತ್ರಿ ಸುಂದರ್ ಗೌಡರನ್ನು ಬಂಧಿಸಿದ್ದ ತಾವರೆಕೆರೆ ಪೊಲೀಸರು ರಾಮನಗರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಸುಂದರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಇನ್ನುಳಿದಂತೆ ನಿರ್ದೇಶಕ, ಸಾಹಸ ನಿರ್ದೇಶಕರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಘಟನೆ ಕುರಿತಂತೆ ಮಾಸ್ತಿಗುಡಿ ಚಿತ್ರ ತಂಡದ ಐವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು. ಐಪಿಸಿ ಸೆಕ್ಷನ್ 304(ಎ) ಹಾಗೂ 308 ಅನ್ವಯ ಕೇಸು ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿರ್ಮಾಪಕ ಸುಂದರ್ ಗೌಡ ಎ-1 ಆರೋಪಿ, ನಿರ್ದೇಶಕ ನಾಗಶೇಖರ್ ಎ-2, ಸಹ ನಿರ್ದೇಶಕ ಎ-3, ಸಾಹಸ ನಿರ್ದೇಶಕ ರವಿವರ್ಮ ಎ-4, ಸಾಹಸ ಸಹ ನಿರ್ದೇಶಕ ಭರತ್ ಎ-5 ಆರೋಪಿ ಎಂದು ಪ್ರಕರಣ ದಾಖಲಿಸಿದ್ದಾರೆ.

No Comments

Leave A Comment