Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಪೊಲೀಸರ ಮೇಲೆ ಹಲ್ಲೆ ಆರೋಪಿ ಮ್ಯಾಜಿಸ್ಟ್ರೇಟ್‌ ಉನ್ನಿಕೃಷ್ಣನ್‌ ಸೂಸೈಡ್

hangಕಾಸರಗೋಡು: ಸುಳ್ಯದಲ್ಲಿ ಮದ್ಯ ಸೇವಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿದ್ದ ಕಾಸರಗೋಡು ಜ್ಯುಡಿಶಿಯಲ್‌ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ವಿ.ಕೆ.ಉನ್ನಿಕೃಷ್ಣನ್‌ ಅವರು ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆಸ್ಪತ್ರೆಗೆ ದಾಖಲಾಗಿ ಕ್ವಾರ್ಟರ್ಸ್‌ಗೆ ಮರಳಿದ್ದ ಉನ್ನಿಕೃಷ್ಣನ್‌ ಅವರು ನೇಣಿಗೆ ಶರಣಾಗಿರುವುದಾಗಿ ವರದಿಯಾಗಿದೆ. ಅವರು ತ್ರಿಶೂರ್‌ನ ನಿವಾಸಿಯಾಗಿದ್ದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಸುಳ್ಯದಲ್ಲಿ ಆಟೋ ಚಾಲಕನೊಂದಿಗೆ ಹೆಚ್ಚುವರಿ ಬಾಡಿಗೆ ಪಡೆದುದಕ್ಕಾಗಿ ಉಂಟಾದ ಜಗಳ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದು ಮ್ಯಾಜಿಸ್ಟ್ರೇಟ್‌ ವಿರುದ್ಧ 2 ಪ್ರಕರಣಗಳೂ ದಾಖಲಾಗಿದ್ದವು. ಈ ಸಂಬಂಧ ಹೈಕೋರ್ಟ್‌ ಉನ್ನಿಕೃಷ್ಣನ್‌ ಅವರಿಂದ ವಿಸ್ಕೃತ ವಿವರಣೆ ಕೇಳಿತ್ತು.

ಪ್ರಕರಣದಿಂದ ತೀವ್ರವಾಗಿ ನೊಂದಿದ್ದ ಉನ್ನಿಕೃಷ್ಣನ್‌ ಅವರು ಮಾನಸಿಕವಾಗಿ ಕುಗ್ಗಿ  ಹೋಗಿದ್ದು ,ತೀವ್ರವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

No Comments

Leave A Comment