Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಪೊಲೀಸರ ಗುಂಡೇಟಿಗೆ ರೌಡಿ ಶೀಟರ್‌ ಬಲಿ

shootoutಬೆಂಗಳೂರು: ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ರೌಡಿ ಶೀಟರ್‌ ಒಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ನಡೆದಿದೆ.

ಅಶಿಕ್‌ (19) ಪೊಲೀಸರ ಗುಂಡಿಗೆ ಬಲಿಯಾದ ರೌಡಿಶೀಟರ್‌. ಘಟನೆಯಲ್ಲಿ ಮಹಾಲಕ್ಷ್ಮೀ ಠಾಣೆ ಇನ್ಸ್‌ಪೆಕ್ಟರ್‌ ಭರಮಪ್ಪ ಮಾಲೂರು ಅವರ ಎದೆಗೆ ಗಂಭೀರ ಗಾಯವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಇನ್ನು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ರೂಪಾ ತಂಬದ್‌ ಅವರಿಗೂ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿ ಮೇಲೆ ಹಲ್ಲೆ ಕೇಸು:  ಕಳೆದ ನಾಲ್ಕು ದಿನಗಳ ಹಿಂದೆ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅರುಣ್‌ ಅಲಿಯಾಸ್‌ ಕಾಟು ಎಂಬಾತನ ಮೇಲೆ ರೌಡಿ ಶೀಟರ್‌ ಸಂತೋಷ್‌ ಅಲಿಯಾಸ್‌ ದಡಿಯನ ಗ್ಯಾಂಗ್‌ ಹಲ್ಲೆ ನಡೆಸಿ ಪರಾರಿಯಾಗಿತ್ತು. ಹಲ್ಲೆ ಪ್ರಕರಣದಲ್ಲಿ ಅಶಿಕ್‌ ಕೂಡ ಇದ್ದ.

ಘಟನೆ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಲು ಸೋಮವಾರ ಸಂಜೆ ಮಹಾಲಕ್ಷ್ಮೀ ಲೇಔಟ್‌ ಠಾಣೆ ಇನ್ಸ್‌ಪೆಕ್ಟರ್‌ ಭರಮಪ್ಪ ಮಾಲೂರು ನೇತೃತ್ವದಲ್ಲಿ ಏಳು ಮಂದಿ ಸಿಬ್ಬಂದಿ ಎರಡು ಹೊಯ್ಸಳ ವಾಹನದಲ್ಲಿ ಹೋಗಿದ್ದರು. ರೌಡಿ ಸಂತೋಷ್‌ ಸೇರಿ ನಾಲ್ವರು ಆರೋಪಿಗಳು ಸ್ವಿಫ್ಟ್ ಡಿಸೈರ್‌ ಕಾರಿನಲ್ಲಿ ಹೋಗುತ್ತಿದ್ದರು. ಆರೋಪಿಗಳ ಕಾರನ್ನು ಪೊಲೀಸರ ತಂಡ ಬೆನ್ನಟ್ಟಿತ್ತು.

ಪೊಲೀಸರು ತಮ್ಮನ್ನು ಬಂಧಿಸಲು ಮುಂದಾಗಿದ್ದಾರೆ ಎಂಬುದನ್ನು ತಿಳಿದ ರೌಡಿಗಳು ತಮ್ಮ ಕಾರನ್ನು ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯ ಅನ್ನಪೂರ್ಣೆàಶ್ವರಿ ನಗರದ ಬಳಿ ಪೊಲೀಸರ ಹೊಯ್ಸಳ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಘಟನೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ರೂಪಾ ತಂಬದ್‌ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ವೇಳೆ ಕಾರಿನಲ್ಲಿದ್ದ ಸಂತೋಷ್‌, ಕಾರ್ತಿಕ್‌, ರಮೇಶ್‌, ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಯಲ್ಲಿ ಅಡಗಿದ್ದ:  ಬಂಧಿತ ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಅಶಿಕ್‌ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಉಲ್ಲಾಳು ರಸ್ತೆಯ ಅನ್ನಪೂರ್ಣೇಶ್ವರಿ ನಗರದ ಮನೆಯೊಂದರಲ್ಲಿ ಅಡಗಿದ್ದು ಪೊಲೀಸರ ತಂಡ ಈತನನ್ನು ಬಂಧಿಸಲು ಹೋಗಿದೆ. ಆಗ ಅಲ್ಲಿ ಅಶಿಕ್‌ ಮನೆಯ ಎರಡನೇ ಮಹಡಿಯಲ್ಲಿ ಮೂವರು ಆರೋಪಿಗಳ ಜತೆ ಇದ್ದ. ತನ್ನ ಬಂಧಿಸಲು ಬಂದ ಇನ್ಸ್‌ಪೆಕ್ಟರ್‌ ಭರಮಪ್ಪ ಮಾಲೂರು ಮೇಲೆ ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಸಬ್‌ ಇನ್ಸ್‌ಪೆಕ್ಟರ್‌ ರೂಪಾ ತಂಬದ್‌ ಅವರು ಆತ್ಮ ರಕ್ಷಣೆಗಾಗಿ ಆರೋಪಿಗಳ ಮೇಲೆ ನಾಲ್ಕು ಬಾರಿ ಗುಂಡು ಹಾರಿಸಿದ್ದು ಅದರಲ್ಲಿ ಒಂದು ಗುಂಡು ಅಶಿಕ್‌ ತಲೆಗೆ ತಗುಲಿದೆ. ಗಾಯಗೊಂಡಿದ್ದ ಈತನನ್ನು ಪೊಲೀಸರು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫ‌ಲಿಸದೇ ರಾತ್ರಿ 7.30ರ ಸುಮಾರಿಗೆ ಮೃತಪಟ್ಟಿದ್ದಾನೆ ಎಂದು ಹಿರಿಯ ಅಧಿಕಾರಿಗಳು “ಉದಯವಾಣಿ”ಗೆ ತಿಳಿಸಿದ್ದಾರೆ.

ಘಟನೆಯಲ್ಲಿ ಇನ್ಸ್‌ಪೆಕ್ಟರ್‌ ಭರಮಪ್ಪ ಮಾಲೂರು ಅವರಿಗೂ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರೂಪಾ ತಂಬದ್‌ ಅವರಿಗೂ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೂಟೌಟ್‌ ಹೇಗಾಯ್ತು?
* ಮಹಾಲಕ್ಷ್ಮೀ ಲೇಔಟ್‌ ವ್ಯಾಪ್ತಿಯಲ್ಲಿ ಅರುಣ್‌ ಎಂಬಾತನ ಮೇಲೆ ಹಲ್ಲೆ ಮಾಡಿದ್ದ ರೌಡಿ ಸಂತೋಷನ ಗ್ಯಾಂಗ್‌
* ಈ ಆರೋಪಿಗಳ ಬಂಧಿಸಲು ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ಎರಡು ಹೊಯ್ಸಳದಲ್ಲಿ ಹೋಗಿದ್ದ ಪೊಲೀಸರು
* ತಮ್ಮನ್ನು ಬೆನ್ನಟ್ಟಿದ ಪೊಲೀಸರ ಹೊಯ್ಸಳಕ್ಕೆ ತಾವಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಆರೋಪಿಗಳು, ನಾಲ್ವರು ವಶಕ್ಕೆ
* ಜ್ಞಾನಭಾರತಿಯ ಮನೆಯೊಂದರಲ್ಲಿ ಅಡಗಿದ್ದ ಪ್ರಮುಖ ಆರೋಪಿ ರೌಡಿ ಶೀಟರ್‌ ಆಶಿಕ್‌
* ಆತನ ಬಂಧಿಸಲು ಹೋದಾಗ ಇನ್ಸ್‌ಪೆಕ್ಟರ್‌ ಭರಮಪ್ಪ ಮಾಲೂರು ಮೇಲೆ ಮಚ್ಚಿನಿಂದ ಹಲ್ಲೆ, ಇನ್ಸ್‌ಪೆಕ್ಟರ್‌ಗೆ ಗಾಯ
* ಆಗ ಆರೋಪಿಗಳ ಮೇಲೆ 4 ಬಾರಿ ಗುಂಡು ಹಾರಿಸಿದ ಎಸ್‌ಐ ರೂಪಾ ತಂಬದ್‌
* ಅದರಲ್ಲೊಂದು ಗುಂಡು ಆಶಿಕ್‌ ತಲೆಗೆ ಹೊಕ್ಕು ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೇ ಸಾವು

ನಗರದ ನಾನಾ ಕಡೆ ಕೇಸು
ಮೃತ ಆರೋಪಿ ಅಶಿಕ್‌ ವಿರುದ್ಧ ನಗರದ ವಿವಿಧ ಠಾಣೆಯಲ್ಲಿ ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ. ಈತ ರೌಡಿ ಸಂತೋಷ್‌ ಅಲಿಯಾಸ್‌ ದಡಿಯಾ ಎಂಬುವನ ಗ್ಯಾಂಗ್‌ನ ಪ್ರಮುಖನಾಗಿದ್ದ. ಈ ಗ್ಯಾಂಗ್‌ನ ಸದಸ್ಯರು ದರೋಡೆ, ಕೊಲೆ ಯತ್ನ ನಡೆಸುತ್ತಿದ್ದರು. ಅಶಿಕ್‌ ವಿರುದ್ಧ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶಿಕ್‌ ಆರೋಪಿಯಾಗಿದ್ದು, ಹಲ್ಲೆ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಿದ್ದ. ಈತನ ಮೇಲೆ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರಕರಣಗಳಿವೆ. ಆತನನ್ನು ಬಂಧಿಸಲು ಹೋದಾಗ ಮಾರಕಾಸ್ತ್ರಗಳಿಂದ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆತ್ಮ ರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ.
* ಚರಣ್‌ ರೆಡ್ಡಿ, ಹೆಚ್ಚುವರಿ ಪೊಲೀಸ್‌ ಆಯುಕ್ತ

 

No Comments

Leave A Comment