Log In
BREAKING NEWS >
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ; ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ 3 ದಿನ ಶೋಕಾಚರಣೆ........20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಭಾರತ: ಪ್ರವಾಸ ಬೆಂಗಳೂರಿಗೆ ಆಗಮಿಸಿದ ಬ್ರಿಟನ್ ಪ್ರಧಾನಿ ಥೆರೆಸಾ ಮೇ

teresaaಬೆಂಗಳೂರು: ಭಾರತ ಪ್ರವಾಸ ಕೈಗೊಂಡಿರುವ ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಇಂದು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರಮಾಡಿಕೊಂಡರು. ಸಚಿವರಾದ ದೇಶಪಾಂಡೆ, ಪ್ರಿಯಾಂಕ್ ಖರ್ಗೆ‌ ಉಪಸ್ಥಿತರಿದ್ದರು.

ವಿಜ್ಞಾನ ಮತ್ತು ತಂತ್ರಜ್ಞಾನ ನಗರ ಬೆಂಗಳೂರಿಗೆ  ಭೇಟಿ ನೀಡುವ ಬ್ರಿಟನ್‌ ಪ್ರಧಾನಿ ತೆರೆಸಾ  ಮೇ ಅವರು ಸಾವಿರ ವರ್ಷಗಳಷ್ಟು ಹಳೆಯದಾದ ಹಲಸೂರು ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ತೆರೆಸಾ ಮೇ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಬ್ರಿಟನ್‌ನ ನಾಲ್ಕನೇ ಪ್ರಧಾನಿ.

ಬ್ರಿಟನ್‌ ಐರೋಪ್ಯ ಒಕ್ಕೂಟದಿಂದ ಹೊರನಡೆದ ಬಳಿಕ ಪ್ರಧಾನಿ ಹುದ್ದೆಗೇರಿದ ತೆರೆಸಾ ಅವರು ಭಾರತದ ಜತೆ ಸ್ನೇಹ ಹಸ್ತ ಚಾಚಿದ್ದಾರೆ. ಅವರ ಬೆಂಗಳೂರು ಭೇಟಿ ಮಹತ್ವದ್ದಾಗಿದೆ.  ಈ ಸಂದರ್ಭದಲ್ಲಿ ಐಟಿ–ಬಿಟಿ ಉದ್ಯಮಿಗಳು, ಸರ್ಕಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸ್ಟೋನ್‌ ಹಿಲ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ ದತ್ತು ತೆಗೆದುಕೊಂಡಿರುವ ಸರ್ಕಾರಿ ಶಾಲೆಗೂ ಅವರು ಭೇಟಿ ನೀಡುವರು.

ದೇವಸ್ಥಾನದಲ್ಲಿ ವ್ಯವಸ್ಥೆ: ತೆರೆಸಾ  ಮೇ ಅವರು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ಕಾರಣ ಮುಜರಾಯಿ ಇಲಾಖೆ ಅಧಿಕಾರಿಗಳು ಸೋಮೇಶ್ವರ ದೇವಸ್ಥಾನ ದಲ್ಲಿ ದೇವರ ದರ್ಶನಕ್ಕೆ ಸಕಲವ್ಯವಸ್ಥೆ ಮಾಡಿದ್ದಾರೆ. ‘ತೆರೆಸಾ ಅವರ ಭೇಟಿಯನ್ನು ಅವಿಸ್ಮರಣೀಯವಾಗಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೇವೆ’ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ತೆರೆಸಾ  ಮತ್ತು  ಸಹೊದ್ಯೋಗಿಗಳು ಮಧ್ಯಾಹ್ನ 3 ಗಂಟೆಗೆ ದೇವಸ್ಥಾನಕ್ಕೆ ಬರಲಿದ್ದಾರೆ. ಸುಮಾರು 20 ನಿಮಿಷ ಕಾಲ ದೇವಸ್ಥಾನದಲ್ಲಿ ಇರುತ್ತಾರೆ. ಅತಿಥಿ ಗಳಿಗೆ ದೇವಸ್ಥಾನದ ಸಿಬ್ಬಂದಿ ದೇಗುಲದ ಐತಿಹಾಸಿಕ ಮಹತ್ವ ವಿವರಿಸುವರು. ನಂತರ ಉಯ್ಯಾಲೆ ಮಂಟಪದ ಎದುರು ಪೂಜೆ ನೆರವೇರಿಸಲಾಗುತ್ತದೆ ಎಂದು ಪ್ರಧಾನ ಅರ್ಚಕ ರಮಾನಾಥ ದೀಕ್ಷಿತ್‌ ವಿವರಿಸಿದರು.

‘ಭದ್ರತೆ ಕಾರಣಕ್ಕಾಗಿ ಬ್ರಿಟನ್‌ ಪ್ರಧಾನಿಯವರು  ಪ್ರಸಾದ ಸ್ವೀಕರಿಸುವು ದಿಲ್ಲ. ಬದಲಿಗೆ ಹಣೆಗೆ ವಿಭೂತಿ ಹಚ್ಚಿಕೊಳ್ಳುವರು. ಭದ್ರತಾ ಸಿಬ್ಬಂದಿ ಅನುಮತಿ ನೀಡಿದರೆ ಶಾಲು ಹೊದಿಸಿ, ಹಣ್ಣು– ಹಂಪಲಿನ ಬುಟ್ಟಿ ನೀಡಲಾಗು ವುದು. ಗಂಧದ ನಟರಾಜ ವಿಗ್ರಹವನ್ನೂ ಸ್ಮರಣಿಕೆಯಾಗಿ ನೀಡಲಾಗುವುದು’ ಎಂದು ಅವರು ಹೇಳಿದರು.

ಬ್ರಿಟನ್‌ ಪ್ರಧಾನಿಯವರ ಭೇಟಿಗೆ ಕೆಲವು ದೇವಸ್ಥಾನಗಳ ಪಟ್ಟಿಯನ್ನು ಕಳುಹಿಸಲಾಗಿತ್ತು. ಆ ಪೈಕಿ ಬಸವನ ಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲೇಶ್ವರದ  ಕಾಡು ಮಲ್ಲಿಕಾರ್ಜುನ  ಮತ್ತು  ಹಲಸೂರಿನ ಸೋಮೇಶ್ವರ ದೇವಾಲಯ ಪ್ರಮುಖವಾದವು. ಇವುಗಳಲ್ಲಿ ಬ್ರಿಟಿಷ್‌ ಹೈಕಮಿಷನ್‌ ಸೋಮೇಶ್ವರ ದೇವಸ್ಥಾನದ ಭೇಟಿಯನ್ನು ಅಂತಿಮಗೊಳಿಸಿದೆ. ದೇವಸ್ಥಾನದ ಸುತ್ತಮುತ್ತ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

No Comments

Leave A Comment