Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ದಿಲ್ಲಿಯ ಸದರ್‌ ಬಜಾರ್‌ನಲ್ಲಿ ಭೀಕರ ಅಗ್ನಿ ದುರಂತ: 300 ಮನೆ ಭಸ್ಮ

dellhi-fire-700ಹೊಸದಿಲ್ಲಿ : ದಿಲ್ಲಿಯ ಸದರ್‌ ಬಜಾರ್‌ ಪ್ರದೇಶದಲ್ಲಿ ಸಂಭವಿಸಿರುವ ಭೀಕರ ಅಗ್ನಿ ದುರಂತದಲ್ಲಿ 300ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿದ್ದು 700 ಜನರು ನಿರ್ವಸಿತರಾಗಿದ್ದಾರೆ.

ಸದರ್‌ ಬಜಾರ್‌ ಪ್ರದೇಶದಲ್ಲಿನ ಕೊಳೆಗೇರಿಯಲ್ಲಿ ಸಂಭವಿಸಿದ ಈ ಭೀಕರ ಅಗ್ನಿ ದುರಂದಲ್ಲಿ  ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.

ಸದರ್‌ ಬಜಾರ್‌ ಪ್ರದೇಶದಲ್ಲಿರುವ ಟಾಂಗಾ ಸ್ಟಾಂಡ್‌ ಸಮೀಪದ ಝೋಪಡಿ ಸಮೂಹಗಳಲ್ಲಿ ಸೋಮವಾರ ಸಂಜೆ 6.44ರ ಹೊತ್ತಿಗೆ ಮೊದಲು ಬೆಂಕಿ ಕಾಣಿಸಿಕೊಂಡಿತು. ಈ ಬಗ್ಗೆ ಸುದ್ದಿ ತಲುಪಿದಾಕ್ಷಣವೇ ಸುಮಾರು 30 ಅಗ್ನಿಶಾಮಕಗಳನ್ನು ಸ್ಥಳಕ್ಕೆ ರವಾನಿಸಲಾಯಿತು.

ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆಯಾದರೂ ಪೂರ್ಣವಾಗಿ ಅದನ್ನು ತಣಿಸುವ ಕೆಲಸ ಇನ್ನೂ ಸಾಗುತ್ತಿದೆ. ಸದ್ಯಕ್ಕೆ ನಾಲ್ವರು ಮಾತ್ರವೇ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಆದರೆ ಗಾಯಾಳುಗಳ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ದಿಲ್ಲಿ  ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಸದರ್‌ ಬಜಾರ್‌ ಪ್ರದೇಶದಲ್ಲಿ ಕೆಲವು ಪಟಾಕಿ ಅಂಗಡಿಗಳೂ ಇವೆ. ಈ ಅಂಗಡಿಗಳಲ್ಲಿ ದಾಸ್ತಾನು ಮಾಡಿಡಲಾಗಿದ್ದ ಸುಡುಮದ್ದುಗಳಿಗೆ ಬೆಂಕಿ ತಗುಲಿ ದುರಂತದ ತೀವ್ರತೆ ಹೆಚ್ಚಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ಎನ್‌ಡಿಆರ್‌ಎಫ್ ತಂಡಗಳು ಕೂಡ ಶಾಮೀಲಾಗಿದ್ದು ಸಮರೋಪಾದಿಯಲ್ಲಿ ನೆರವು ಕಾರ್ಯಾಚರಣೆ ನಡೆಯುತ್ತಿದೆ.

No Comments

Leave A Comment